ನವದೆಹಲಿ (ಪಿಟಿಐ): ಮೋರ್ಗನ್ಸ್ಟ್ಯಾನ್ಲಿ, ಸ್ಟ್ಯಾಂಡರ್ಡ್ ಚಾಟರ್ಡ್, ಸಿಟಿ ಗ್ರೂಪ್ ಸೇರಿದಂತೆ ಐದು ಪ್ರಮುಖ ಜಾಗತಿಕ ಹಣಕಾಸು ಸಂಸ್ಥೆಗಳು ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5.7ರಿಂದ ಶೇ 6.4ರ ನಡುವೆ ಇರಲಿದೆ ಎಂದು ಹೇಳಿವೆ.

`ಜಿಡಿಪಿ~ 2011-12ನೇ ಸಾಲಿನಲ್ಲಿ 9 ವರ್ಷಗಳ ಹಿಂದಿನ ಮಟ್ಟವಾದ ಶೇ 6.5ಕ್ಕೆ ಕುಸಿತ ಕಂಡಿದೆ. ಈ ಆಘಾತದಿಂದ ಮಾರುಕಟ್ಟೆ ಇನ್ನೂ ಹೊರಬಂದಿಲ್ಲ. ಇದರ ಬೆನ್ನಿಗೇ ಈ ವರದಿ ಬಂದಿದೆ. 2009-10 ಮತ್ತು 2010-11ರಲ್ಲಿ ಶೇ 8.4ರವರೆಗೆ ಏರಿಕೆ ಕಂಡಿದ್ದ `ಜಿಡಿಪಿ~ ಇತ್ತೀಚೆಗೆ ತೀವ್ರವಾಗಿ ಕುಸಿಯಲು ಸರ್ಕಾರಿ ನೀತಿಗಳಲ್ಲಿನ ನಿಷ್ಕ್ರಿಯತೆಯೇ ಪ್ರಮುಖ ಕಾರಣ ಎಂದು ಈ ಸಂಸ್ಥೆಗಳು ವಿಶ್ಲೇಷಿಸಿವೆ.

ಜನವರಿ-ಮಾರ್ಚ್ ನಡುವಿನ ತ್ರೈಮಾಸಿಕದಲ್ಲಿ `ಜಿಡಿಪಿ~ ಶೇ 5.3ಕ್ಕೆ ಕುಸಿತ ಕಂಡಿದೆ. ಇದು ಸರ್ಕಾರಕ್ಕೆ ಎಚ್ಚರಿಕೆ ಗಂಟೆ. ಆಡಳಿತ ಯಂತ್ರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ಹೂಡಿಕೆದಾರರು ದೇಶೀಯ ಮಾರುಕಟ್ಟೆಯಲ್ಲಿ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 18ರಂದು ಮಧ್ಯಂತರ ತ್ರೈಮಾಸಿಕ ಸಾಲ ನೀತಿ ಪ್ರಕಟಿಸಲಿದೆ. ಈಗ ಉಳಿದಿರುವ ಏಕೈಕ ಭರವಸೆ ಎಂದರೆ `ಆರ್ಬಿಐ~ ಮಾತ್ರ ಎಂದು ಸ್ಟಾಂಡರ್ಡ್ ಚಾಟರ್ಡ್ ಹೇಳಿದೆ.

`ಸ್ಟಾಂಡರ್ಡ್ ಚಾಟರ್ಡ್ 2012-13ನೇ ಸಾಲಿನಲ್ಲಿ ದೇಶದ `ಜಿಡಿಪಿ~ ಶೇ 6.2ರಷ್ಟು ಇರಲಿದೆ ಎಂದು ಅಂದಾಜಿಸಿದೆ. ಮೋರ್ಗನ್ ಸ್ಟ್ಯಾನ್ಲಿ ಶೇ 6.3ರಷ್ಟು ವೃದ್ಧಿ ದರ ನಿಗದಿಮಾಡಿದೆ. ಮತ್ತೊಂದು ಹಣಕಾಸು ಸಂಸ್ಥೆ `ಸಿಎಲ್ಎಸ್ಎ~ ಆರ್ಥಿಕ ಪ್ರಗತಿ ಶೇ 6ಕ್ಕೆ ಇಳಿಯಲಿದೆ ಎಂದು ಹೇಳಿದೆ. `ಸಿಟಿ~ ಗ್ರೂಪ್ ಶೇ 6.4ರಷ್ಟು `ಜಿಡಿಪಿ~ ಅಂದಾಜು ಮಾಡಿದೆ.

ಜಾಗತಿಕ ಆರ್ಥಿಕ ಅಸ್ಥಿರತೆ ಹೆಚ್ಚುತ್ತಿರುವುದರಿಂದ ಬ್ಯಾಂಕ್ಗಳಿಗೆ `ಎನ್ಪಿಎ~ ದರ ತಗ್ಗಿಸಿಕೊಳ್ಳುವಂತೆ ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದರು.ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ಶೇ 7.6ರಷ್ಟು `ಜಿಡಿಪಿ~ ಅಂದಾಜು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.