ಶುಕ್ರವಾರ, ಮೇ 14, 2021
30 °C

ಜಿಲ್ಲೆಯ ರೈತರಿಗೆ ತಮಿಳುನಾಡು ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಇಸ್ರೆಲ್‌ನಲ್ಲಿ ತೋಟಗಾರಿಕೆ ಜಗತ್ತಿಗೆ ಮಾದರಿ ತೋಟಗಾರಿಕೆ ವ್ಯವಸ್ಥೆಯಾಗಿದ್ದು, ಇದೇ ಮಾದರಿಯ ತೋಟಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ತೆಮಿಳನಾಡಿನ ಉದ್ಬಲ ಪೇಟೆಗೆ ಜಿಲ್ಲೆಯ ರೈತರನ್ನು ಪ್ರವಾಸಕ್ಕೆ ಕರೆದೊಯ್ಯಲಾಗುವುದು~ ಎಂದು ತೋಟಗಾರಿಕೆ ಹಾಗೂ ಸಕ್ಕರೆ ಸಚಿವ ಎಸ್.ಎ.ರವೀಂದ್ರನಾಥ ತಿಳಿಸಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಮಿಳನಾಡಿನ ಉದ್ಬಲಪೇಟೆ ಕೂಡಾ ತೋಟಗಾರಿಕೆಗೆ ಹೆಸರುವಾಸಿಯಾಗಿದೆ. ಅಲ್ಲಿ ಒಂದು ಎಕರೆ ಪ್ರದೇಶದಲ್ಲಿ ನೂರಾರು ಮಾವಿನ, ಚಿಕ್ಕು, ಸಪೋಟ ಸೇರಿದಂತೆ ಮತ್ತಿತರರ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗಿದೆ. ವಿಧಾನ ಪರಿಷತ್ ಸದಸ್ಯ ಹಾವೇರಿಯ ಶಿವರಾಜ ಸಜ್ಜನರ ಅವರು ಅಲ್ಲಿಗೆ ಭೇಟಿ ನೀಡಿ, ತಮ್ಮ ತೋಟದಲ್ಲಿ ಅದೇ ಮಾದರಿ ತೋಟ ಗಾರಿಕೆಯನ್ನು ಅಳವಡಿಸಿಕೊಂಡಿದ್ದಾರೆ. ಅವರ ಸಲಹೆ ಮೇರೆಗೆ ಜಿಲ್ಲೆಯ ಆಸಕ್ತ 120 ರೈತರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಲಾಗಿದೆ ಎಂದರು.ಮತ್ತೆ ಮುಖ್ಯಮಂತ್ರಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಅವರು ತಮ್ಮ ಮೇಲಿರುವ ಆರೋಪಗಳಲ್ಲಿ ಮುಕ್ತರಾದರೆ, ಮತ್ತೆ ಅವರೇ ರಾಜ್ಯದ ಮುಖ್ಯಮಂತ್ರಿಯಾ ಗಲಿದ್ದಾರೆ ಎಂದು ಅವರು ತಿಳಿಸಿದರು.ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ಹೆಸರು ಇರುವುದ ರಿಂದಲೇ ಅವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಮುಂದೆ ನಡೆಯುವ ವಿಚಾರಣೆಯಲ್ಲಿ ಅವರು ಆರೋಪಮುಕ್ತರಾಗಿ ಹೊರ ಬಂದರೆ ಮತ್ತೆ ಮುಖ್ಯಮಂತ್ರಿ ಗಳಾಗಲಿದ್ದಾರೆ ಎಂದರು.ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರನ್ನು ಸೇರಿಸಿಕೊಳ್ಳಬೇಕೆಂಬುದು ಮುಖ್ಯಮಂತ್ರಿಗಳಿಗೆ ಹಾಗೂ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದ ಅವರು, ಕಾಗಿನೆಲೆಯ ನಿರಂಜನಾನಂದ ಶ್ರೀಗಳು ವಿಧಾನ ಪರಿಷತ್ ಸದಸ್ಯ ವಿಜಯಶಂಕರ ಅವರನ್ನು ಸಚಿವರ ನ್ನಾಗಿ ಮಾಡಲು ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ದರು.ಉಡುಪಿಯ ಕನಕನ ಕಿಂಡಿ ವಿವಾದಕ್ಕೆ ಸಂಬಂಧಪಟ್ಟಂತೆ ಕಾಗಿನೆಲೆ ಶ್ರೀಗಳ ವಿರುದ್ಧ ಸಚಿವ ರೇಣುಕಾ ಚಾರ್ಯ ನೀಡಿರುವ ಹೇಳಿಕೆ ಸರಿಯಲ್ಲ. ರೇಣುಕಾಚಾರ್ಯ ಅವರು ಆ ರೀತಿ ಮಾತನಾಡಬಾರದಿತ್ತು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಶಾಸಕ ನೆಹರೂ ಓಲೇಕಾರ, ಜಿ.ಪಂ.ಅಧ್ಯಕ್ಷ ಮಂಜುನಾಥ ಓಲೇಕಾರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.