ತುಮಕೂರು: ಗ್ರಾಮಗಳಲ್ಲಿ ವಾಸ್ತವ್ಯ ಇಲ್ಲದಿದ್ದರೂ ವಾಸ್ತವ್ಯ ದೃಢೀಕರಣದ ಸುಳ್ಳು ಪ್ರಮಾಣ ಪತ್ರ ನೀಡಿ ಸರ್ಕಾರಕ್ಕೆ ರೂ. 1.30 ಕೋಟಿಗೂ ಹೆಚ್ಚು ವಂಚಿಸಿರುವ ಜಿಲ್ಲೆಯ 129 ಗ್ರಾಮೀಣ ವೈದ್ಯರ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಆರ್.ಕೆ.ರಾಜು ಶನಿವಾರ ಖಡಕ್ ಆದೇಶ ನೀಡಿದರು.

ಜಿ.ಪಂ.ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ ಅನುಷ್ಠಾನದಲ್ಲಾಗಿರುವ ಲೋಪ ಕುರಿತು ಚರ್ಚೆ ನಡೆಯಿತು.

ಗ್ರಾಮಗಳಲ್ಲಿ ಇಲ್ಲದಿದ್ದರೂ ಗ್ರಾಮೀಣ ಭತ್ಯೆ ಪಡೆಯುವ ಮೂಲಕ ವೈದ್ಯರು ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ವೈದ್ಯರು ಕಡ್ಡಾಯವಾಗಿ ಇರಬೇಕೆಂಬ ಸರ್ಕಾರದ ಆದೇಶ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದ್ದಾರೆ.

ಈ ಎರಡು ಕೃತ್ಯ ಕಾನೂನುಬಾಹಿರ ಆರೋಪವಾಗಿದ್ದು, ವೈದ್ಯರ ವಿರುದ್ಧ ಇಲಾಖಾ ಕ್ರಮ ಜರುಗಿಸಬೇಕು. ಕೂಡಲೇ ಷೋಕಾಸ್ ನೋಟಿಸ್ ಜಾರಿಗೊಳಿಸಿ ಎಂದು ಸಭೆಯಲ್ಲಿದ್ದ ಜಿಲ್ಲಾ ಕುಟುಂಬ ಆರೋಗ್ಯಾಧಿಕಾರಿ ಡಾ.ಚನ್ನಮಲ್ಲಯ್ಯ ಅವರಿಗೆ ಸೂಚಿಸಿದರು.

ಗ್ರಾಮೀಣ ಭತ್ಯೆ ಪಡೆದಿರುವ ವೈದ್ಯರಿಂದ 10 ದಿನದೊಳಗೆ ಹಣವನ್ನು ಸರ್ಕಾರಕ್ಕೆ ವಾಪಸ್ ಕಟ್ಟಿಸಬೇಕು. ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮೀಣ ಭಾಗದಲ್ಲಿ ವಾಸಿಸುವ ವೈದ್ಯರಿಗೆ ಮಾಸಿಕ ರೂ. 7 ಸಾವಿರ ಭತ್ಯೆ ಪಡೆಯಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸರ್ಕಾರ ನೀಡಿದ ಈ ಅವಕಾಶವನ್ನೇ ದುರುಪಯೋಗ ಮಾಡಿಕೊಂಡಿರುವ ಜಿಲ್ಲೆಯ ಸರ್ಕಾರಿ ವೈದ್ಯರು ಸುಳ್ಳು ವಾಸ್ತವ್ಯ ಪ್ರಮಾಣ ಪತ್ರವನ್ನು ನೀಡಿ 2 ವರ್ಷಗಳಿಂದಲೂ ನಿರಂತರವಾಗಿ ಗ್ರಾಮೀಣ ಭತ್ಯೆ ಪಡೆದಿರುವುದು ಇಲಾಖಾ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಗ್ರಾಮೀಣ ಭತ್ಯೆ ನೀಡುವಲ್ಲಿ ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಪಾತ್ರವು ಇದೆ. ಇಲಾಖೆ ಮುಖ್ಯಸ್ಥರ ಕಣ್ತಪ್ಪಿಸಿ ವೈದ್ಯರು ಭತ್ಯೆ ಪಡೆದುಕೊಳ್ಳಲು ಹೇಗೆ ಸಾಧ್ಯ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ವಾಸ್ತವ್ಯ ಇರುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಪದೇಪದೇ ವರದಿಯಾಗುತ್ತಿದೆ. ಅಲ್ಲಲ್ಲಿ ಪ್ರತಿಭಟನೆ ನಡೆಯುತ್ತಿವೆ. ಆಗ ವೈದ್ಯರು ಎಲ್ಲಿರುತ್ತಾರೆ ಎಂಬ ತನಿಖೆ ಮಾಡಲಿಲ್ಲವೇ ಎಂದು ಸಂಸದ ಜಿ.ಎಸ್.ಬಸವರಾಜ್ ಪ್ರಶ್ನಿಸಿದರು.

ಜಿಲ್ಲೆಯಲ್ಲಿರುವ 131 ವೈದ್ಯರಲ್ಲಿ 129 ವೈದ್ಯರು ಸುಳ್ಳು ಪ್ರಮಾಣ ಪತ್ರ ನೀಡಿ ಗ್ರಾಮೀಣ ಭತ್ಯೆ ಪಡೆದಿರುವುದು ನೋಡಲ್ ಅಧಿಕಾರಿ ತನಿಖೆಯಿಂದ ತಿಳಿದುಬಂದಿದೆ. ಈ ಎಲ್ಲ ವೈದ್ಯರಿಂದ ಗ್ರಾಮೀಣ ಭತ್ಯೆ ವಾಪಸ್ ಪಡೆದು, ಸರ್ಕಾರಕ್ಕೆ ಕಟ್ಟಿಸಲಾಗುವುದು. ಷೋಕಾಸ್ ನೋಟಿಸ್ ನೀಡಿ ವಿಚಾರಣೆಗೆ ಗುರಿ ಪಡಿಸಲಾಗುವುದು.

ಅಕ್ಟೋಬರ್ 2009ರಿಂದ ನವೆಂಬರ್-2011ರ ವರೆಗೆ ಈ ವೈದ್ಯರು ಭತ್ಯೆ ಪಡೆದುಕೊಂಡಿದ್ದಾರೆ. ಕಳೆದ ಎರಡು ತಿಂಗಳಿಂದ ಯಾವ ವೈದ್ಯರು ಗ್ರಾಮೀಣ ಭತ್ಯೆ ಪಡೆದಿಲ್ಲ ಎಂದು ಡಾ.ಚನ್ನಮಲ್ಲಯ್ಯ ಮಾಹಿತಿ ನೀಡಿದರು.

ಶೌಚ ಹಗರಣ: ಪೊಲೀಸ್ ತನಿಖೆ ಎಚ್ಚರಿಕೆ
ಜಿಲ್ಲೆಯ 110 ಗ್ರಾಮ ಪಂಚಾಯಿತಿಗಳಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಫಲಾನುಭವಿಗಳಿಗೆ ಶೌಚಾಲಯ ಕಟ್ಟಿಕೊಳ್ಳಲು ಏಜೆನ್ಸಿಯೊಂದರ ಮೂಲಕ ಶೌಚಾಲಯ ಸಾಮಗ್ರಿಖರೀದಿಯಲ್ಲಿ ಆಗಿರುವ ಅವ್ಯವಹಾರದ ತನಿಖೆಗೆ ಸಹಕರಿಸದಿದ್ದರೆ ಪೊಲೀಸ್ ತನಿಖೆಗೆ ವಹಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಜಿ.ಪಂ. ಸಾಮಾನ್ಯ ಸಭೆಗಳಲ್ಲಿ ಈಗಾಗಲೇ ಸಾಕಷ್ಟು ಸಲ ಈ ಕುರಿತು ಚರ್ಚೆ ನಡೆಸಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ನೇತೃತ್ವದ ತಂಡದ ತನಿಖಾ ವರದಿ ತಿರಸ್ಕರಿಸಿ ಲೋಕಾಯುಕ್ತಕ್ಕೆ ತನಿಖೆಗೆ ವಹಿಸಲು ನಿರ್ಣಯಿಸಲಾಗಿತ್ತು. ಆದರೆ ಲೋಕಾಯುಕ್ತ ತನಿಖೆ ಅಗತ್ಯವಿಲ್ಲ, ಮೂರನೇ ಸಂಸ್ಥೆ ತಪಾಸಣೆ ಬಳಿಕ ಖರೀದಿ ಸಾಮಗ್ರಿಗಳಿಗೆ ಹಣ ನೀಡುವಂತೆ ಸರ್ಕಾರದಿಂದ ಆದೇಶ ಬಂದಿದೆ.

ಆದರೆ ಜಿಲ್ಲಾ ಮಟ್ಟದ ಸಂಸ್ಥೆಯಿಂದ ತನಿಖೆ ಸಾಧ್ಯವಿಲ್ಲದ ಕಾರಣ ರಾಜ್ಯ ಮಟ್ಟದ ಸಂಸ್ಥೆಯಿಂದ ತನಿಖೆ ನಡೆಸುವಂತೆ ಪತ್ರ ಬರೆಯಲಾಗಿತ್ತು. ತನಿಖೆಗಾಗಿ ಖರೀದಿಯ ಸಂಪೂರ್ಣ ವಿವರವನ್ನು ಜಿ.ಪಂ. ಬಳಿ ಕೇಳಿದ್ದು, ವಿವರ ಇಲ್ಲವಾಗಿದೆ ಎಂದು ಕಾರ್ಯದರ್ಶಿ ಪ್ರಕಾಶ್ ಸಭೆಗೆ ತಿಳಿಸಿದರು.

ಹಿಂದಿನ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೌಖಿಕ ಸೂಚನೆ ಮೇರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಈ ಏಜೆನ್ಸಿಯಿಂದ ಸಾಮಗ್ರಿ ಖರೀದಿ ಮಾಡಲಾಗಿದೆ. ಆದರೆ ಮೌಖಿಕ ಆದೇಶದ ದಾಖಲೆ ಕೂಡ ಜಿ.ಪಂ.ನಲ್ಲಿ ಇಲ್ಲ. ಗ್ರಾ.ಪಂ. ಕಾರ್ಯದರ್ಶಿ, ಅಧ್ಯಕ್ಷರ ಮಟ್ಟದಲ್ಲೇ ಖರೀದಿ ನಡೆದಿರುವುದರಿಂದ ಅದರ ಮಾಹಿತಿ ಕೂಡ ಇಲ್ಲ. ಹೀಗಾಗಿ ಪಂಚಾಯತ್ ರಾಜ್ ಇಲಾಖೆಗೆ ಮಾಹಿತಿ ನೀಡಲು ಆಗಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಉನ್ನತ ಅಧಿಕಾರಿಗಳು ಮೌಖಿಕ ಆದೇಶ ಜಾರಿ ಮಾಡಿದರೂ ಆದೇಶ ಜಾರಿಯಾದ ಬಳಿಕ ಪತ್ರದ ಮೂಲಕ ತಿಳಿಸಬೇಕೆಂಬ ಸರ್ಕಾರಿ ಆದೇಶವಿದೆ. ಆದರೂ ಆದೇಶ ಹೇಗೆ ಮೀರಲಾಯಿತು. ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಸಭೆ ನಡೆದಿದ್ದರೆ ಹಗರಣ ನಡೆಯಲು ಹೇಗೆ ಸಾಧ್ಯವಾಗುತ್ತಿತ್ತು ಎಂದು ಪ್ರಶ್ನಿಸಿದರು.

ಕೂಡಲೇ ಅಧಿಕಾರಿಗಳು ಖರೀದಿ ಮಾಹಿತಿ ನೀಡದಿದ್ದರೆ ಜಿ.ಪಂ. ಈಗಿನ ಸಿಇಒ ಸೇರಿದಂತೆ ಗ್ರಾ.ಪಂ.ಗಳ ಎಲ್ಲ ಕಾರ್ಯದರ್ಶಿಗಳು, ತಾ.ಪಂ. ಇಒಗಳ ವಿರುದ್ಧ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ. ಆನಂತರ ಎಲ್ಲರೂ ಪೊಲೀಸ್ ತನಿಖೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಕ್ಷಣವೆ ಉತ್ತರಿಸಿದ ಸಿಇಒ ಗೋವಿಂದರಾಜು, ಇನ್ನು 15 ದಿನದಲ್ಲಿ ಮಾಹಿತಿ ನೀಡದಿದ್ದರೆ ತಾ.ಪಂ. ಇಒಗಳನ್ನು ಜವಾಬ್ದಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಂಸದ ಜಿ.ಎಸ್.ಬಸವರಾಜ್, ಜಿ.ಪಂ. ಅಧ್ಯಕ್ಷ ಆನಂದರವಿ ಇದ್ದರು.

ಬ್ಲ್ಯಾಕ್ಮೇಲ್ ಮಾಡ್ತೀರಾ, ಹುಷಾರ್!
ಸುಳ್ಳು ಪ್ರಮಾಣ ಪತ್ರ ನೀಡಿ ಗ್ರಾಮೀಣ ಭತ್ಯೆ ಪಡೆದಿರುವ ವೈದ್ಯರ ವಿರುದ್ಧ ಜಿಲ್ಲಾಧಿಕಾರಿ ಶಿಸ್ತು ಕ್ರಮಕ್ಕೆ ಆದೇಶ ನೀಡಿದ ಬೆನ್ನಲ್ಲೇ ತುರುವೇಕೆರೆ ತಾಲ್ಲೂಕು ಸ್ಥಾನೀಯ ವೈದ್ಯಾಧಿಕಾರಿ ಡಾ.ನಾಗೇಶ್ ಅವರು ಜಿಲ್ಲಾ ಆರೋಗ್ಯಾಧಿಕಾರಿಯ ಸಮರ್ಥನೆಗೆ ಮುಂದಾದರು.

ಗ್ರಾಮೀಣ ಭತ್ಯೆಯ ಚರ್ಚೆ ಬೇಡ. ಇಲಾಖಾ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ವೈದ್ಯರು ಗ್ರಾಮ ಪ್ರದೇಶದಲ್ಲಿ ವಾಸಿಸಲು ಸಾಧ್ಯವಿಲ್ಲ. ಬಾಡಿಗೆ ಮನೆ ಸಿಗುತ್ತಿಲ್ಲ. ಮುಷ್ಕರ ಮಾಡುವ ಮೂಲಕ ಈ ಭತ್ಯೆ ಪಡೆದಿದ್ದೇವೆ ಎಂದು ಡಾ.ನಾಗೇಶ್ ಹೇಳಿದರು.

ಇದರಿಂದ ಕೆಂಡಮಂಡಲವಾದ ಜಿಲ್ಲಾಧಿಕಾರಿ, `ಏನ್ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಬ್ಲ್ಯಾಕ್ಮೇಲ್ ಮಾಡ್ತೀರಾ?. ಅಧೀನ ಅಧಿಕಾರಿಗಳನ್ನು ಬಿಟ್ಟು ವಶೀಲಿಬಾಜಿ ನಡೆಸ್ತೀರಾ? ಇಲಾಖಾ ಮುಖ್ಯಸ್ಥರು ಸುಮ್ಮನಿದ್ದು ಅಧೀನ ಅಧಿಕಾರಿ ಮಾತನಾಡುತ್ತಿದ್ದಾರೆ ಎಂದರೆ ಏನರ್ಥ~ ಎಂದರು.

`ಮುಖ್ಯಸ್ಥರು ನೀವು ಇರಬೇಕಾದರೆ ಅವರನ್ನು ಯಾಕೆ ಮಾತನಾಡಲು ಬಿಡುತ್ತೀರಾ~ ಎಂದು ಡಾ.ಚನ್ನಮಲ್ಲಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.