ಬುಧವಾರ, ಏಪ್ರಿಲ್ 21, 2021
30 °C

ಜೀವಕ್ಕೆ ಕುತ್ತು ತಂದ ವಿಡಿಯೋ ಗೇಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್ ): ತೈವಾನ್‌ನ ಯುವಕನೊಬ್ಬನಿಗೆ ವಿಡಿಯೋಗೇಮ್ ಹುಚ್ಚು ಪ್ರಾಣಕ್ಕೆ ಎರವಾದ ಘಟನೆ ಟೈನಾನ್ ಸಿಟಿಯ ಕಂಪ್ಯೂಟರ್ ಸೈಬರ್ ಷಾಪ್‌ನಲ್ಲಿ ನಡೆದಿದೆ.ಚಾಂಗ್ (18) ಸತತವಾಗಿ 40 ಘಂಟೆಗಳ ಕಾಲ ವಿಡಿಯೋ ಗೇಮ್‌ನಲ್ಲಿ ನಿರತನಾಗಿದ್ದ. ಈ ಸಂದರ್ಭದಲ್ಲಿ ಅನ್ನ, ನೀರು, ಆಹಾರ ಸ್ವೀಕರಿಸದೇ ತನ್ನ ಸಾವಿಗೆ ತಾನೆ ಕಾರಣನಾಗಿದ್ದಾನೆ.ಜುಲೈ 15 ರಂದು ಚಾಂಗ್ ಕಂಪ್ಯೂಟರ್ ಸೈಬರ್ ಗೇಮ್ ಪ್ರಾರಂಭಿಸಿದ ನಂತರದ 40 ಗಂಟೆ ಆಡುತ್ತಲೇ ಪ್ರಜ್ಞೆ ತಪ್ಪಿದ. ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.ಸುದೀರ್ಘ ಆಟದಿಂದ ಹೃದಯಾಘಾತ ಆಗಿದೆ ಎಂದು ವೈದ್ಯರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.