ಮುಂಬೈ (ಪಿಟಿಐ): 26/11 ಮುಂಬೈ ದಾಳಿಯ ಪ್ರಮುಖ ಸೂತ್ರಧಾರಿ ಸೈಯದ್ ಜಬಿಯುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ಭಾನುವಾರ ಇಲ್ಲಿ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ಈ ಹೇಳಿಕೆಯಲ್ಲಿ 2008ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಪಾತ್ರ ಬಗ್ಗೆ ಜುಂದಾಲ್ ಹೆಚ್ಚಿನ ವಿವರಗಳನ್ನು ತಿಳಿಸಿದ್ದಾನೆ.

ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಣೆಯಲ್ಲಿ ಜುಂದಾಲ್ನನ್ನು ಹಾಜರುಪಡಿಸಲಾಯಿತು. ಮುಂಬೈ ದಾಳಿಯ ಇನ್ನೊಬ್ಬ ಆರೋಪಿ ಕಸಾಬ್ ಮತ್ತು ಜುಂದಾಲ್ ಎದುರುಬದುರಾಗಿ ನಿಲ್ಲಿಸಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ನ್ಯಾಯಾಲಯದ ಗುಮಾಸ್ತ ಸಹ ಹಾಜರಿದ್ದ.

ತಮ್ಮ ಮುಂದೆ ಹಾಜರಾದ ಜುಂದಾಲ್ಗೆ ತಪ್ಪೊಪ್ಪಿಗೆ ಹೇಳಿಕೆಯ ಪ್ರಕ್ರಿಯೆ ಬಗ್ಗೆ ವಿವರಿಸಿದ ನ್ಯಾಯಾಧೀಶರು, `ಅಪರಾಧ ಸಂಹಿತೆ 164ರ ಪ್ರಕಾರ ಹೇಳಿಕೆಯನ್ನು ದಾಖಲಿಸಿಕೊಂಡು ಅದನ್ನು ನಿನ್ನ ವಿರುದ್ಧವೇ ಬಳಸಿಕೊಳ್ಳಲಾಗುವುದು~ ಎಂದು ವಿವರಿಸಿದರು ಎನ್ನಲಾಗಿದೆ.

`ತಪ್ಪೊಪ್ಪಿಗೆ ಹೇಳಿಕೆ ನೀಡುವ ನಿರ್ಧಾರದ ಬಗ್ಗೆ ಯೋಚಿಸಿದ್ದೀಯಾ? ಮತ್ತು ಇದು ನಿನ್ನ ಸ್ವಯಂ ನಿರ್ಧಾರವೇ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಹೌದು ಎಂದು ಜುಂದಾಲ್ ಉತ್ತರಿಸಿದ~ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.