ಬೆಂಗಳೂರು : `ಸಾರಿಗೆ ನಿಗಮಗಳ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜುಲೈ 25ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ' ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಎಸ್.ಪ್ರಸನ್ನ ಕುಮಾರ್ ತಿಳಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನೌಕರರ ವೇತನ ಹೆಚ್ಚಳ ಮತ್ತು ಡೀಸೆಲ್ ದರ ಹೆಚ್ಚಳವಾಗಿರುವುದರಿಂದ ಬಸ್ ಪ್ರಯಾಣದರವನ್ನು ಹೆಚ್ಚಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನೀಡಿರುವ ಹೇಳಿಕೆ ಅಸಮರ್ಪಕವಾಗಿದೆ. ಹಿಂದಿನ ಸರ್ಕಾರ ಮಾಡಿದ ಶೇ 10ರಷ್ಟು ವೇತನ ಹೆಚ್ಚಳ ಬಿಟ್ಟರೆ ಯಾವುದೇ ವೇತನ ಹೆಚ್ಚಳವಾಗಿಲ್ಲ' ಎಂದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ ರೂ 5,909 ಇದೆ. ಅಂದರೆ ಪ್ರತಿ ಲೀಟರ್ಗೆ 36 ರೂಪಾಯಿ ವೆಚ್ಚವಾಗುತ್ತದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ ಹಣ ಸೇರಿ ಪ್ರತಿ ಲೀಟರ್ ಪೆಟ್ರೋಲ್ಗೆ ರೂ 72 ರೂಪಾಯಿ ನಿಗದಿಪಡಿಸಲಾಗುತ್ತಿದೆ. ತೆರಿಗೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದ ನಾಲ್ಕೂ ನಿಗಮದ ಸಾರಿಗೆ ನೌಕರರು ರಜೆ ತೆಗೆದುಕೊಳ್ಳಬೇಕೆಂದರೆ ಲಂಚ ನೀಡಬೇಕಾದ ಕೆಟ್ಟ ವ್ಯವಸ್ಥೆ ಇದೆ. ಬದಲಿಗೆ ನೌಕರರಿಂದ ಅರ್ಜಿಗಳನ್ನು ಪಡೆದು ಸ್ವೀಕೃತಿ ನೀಡಿ ಆಡಳಿತದ ಅಗತ್ಯಕ್ಕೆ ಅನುಗುಣವಾಗಿ ರಜೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಹೇಳಿದರು.

ಶಿಕ್ಷಕರ ವರ್ಗಾವಣೆಯ ಕ್ರಮದಂತೆ ಸಾರಿಗೆ ನಿಗಮಗಳ ನೌಕರರ ಲಭ್ಯತೆಯನ್ನು ಆಧರಿಸಿ ವರ್ಗಾವಣೆ ನೀತಿಯನ್ನು ಜಾರಿಗೊಳಿಸಬೇಕು. ನೌಕರರಿಂದ ಎರಡು, ಮೂರು ಪಾಳಿಯಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಹೆಚ್ಚಿನ ಅವಧಿಯ ಕೆಲಸ ಮಾಡಿದರೂ ಅದಕ್ಕೆ ವೇತನ ನೀಡುವುದಿಲ್ಲ. ಇದನ್ನು ತಪ್ಪಿಸಬೇಕು ಎಂದರು.

ಸಾರಿಗೆ ನಿಗಮಗಳಲ್ಲಿ ಮಹಿಳಾ ನೌಕರರಿಗೆ ಸರಿಯಾದ ಶೌಚಾಲಯಗಳಿಲ್ಲ. ನೂರಕ್ಕೂ ಅಧಿಕ ನೌಕರರಿರುವ ಸಂಸ್ಥೆಗಳಲ್ಲಿ ಕ್ಯಾಂಟಿನ್ ವ್ಯವಸ್ಥೆ ಇರಬೇಕು ಎಂಬ ನಿಯಮವಿದ್ದರೂ ಶೇ 80 ಕಡೆಗಳಲ್ಲಿ ಕ್ಯಾಂಟಿನ್ಗಳಿಲ್ಲ. ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಗಳಿಲ್ಲ. ಕೂಡಲೇ ಈ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.