ಗುರುವಾರ , ನವೆಂಬರ್ 14, 2019
19 °C

ಜೈಲಿನಲ್ಲಿ ರಂಜಾನ್ ಉಪವಾಸ: ಅನುಮತಿ ನೀಡಿದ ಕೋರ್ಟ್

Published:
Updated:

ಮುಂಬೈ (ಪಿಟಿಐ): ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೊಕಾ)ಅಡಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಇಲ್ಲಿನ ವಿಶೇಷ ನ್ಯಾಯಾಲಯ 50 ಕೈದಿಗಳಿಗೆ ಜೈಲಿನಲ್ಲೇ ರಂಜಾನ್ ಆಚರಿಸಲು ಸೋಮವಾರ ಅನುಮತಿ ನೀಡಿದೆ.ಇಲ್ಲಿನ ತಲೋಜಾ, ಆರ್ಥರ್ ರಸ್ತೆ ಹಾಗೂ ಕಲ್ಯಾಣ್ ಜೈಲಿನಲ್ಲಿರುವ ಈ ಕೈದಿಗಳು ಉಗ್ರಗಾಮಿ ಚಟುವಟಿಕೆಗಳು, ಬಾಂಬ್ ಸ್ಫೋಟದಂತಹ ಅಪರಾಧ ಕೃತ್ಯಗಳಲ್ಲಿ ಆರೋಪಿಯಾಗಿದ್ದಾರೆ. ಈ ಕೈದಿಗಳು ಜೈಲಿನಲ್ಲೇ `ರೋಜಾ' ಆಚರಿಸಲು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಪ್ರತಿಕ್ರಿಯಿಸಿ (+)