ಗುರುವಾರ , ಜನವರಿ 23, 2020
28 °C

ಜ್ಯೋತಿಷ - ವಾಸ್ತು

ಪ್ರೊ. ಡಾ. ಎಸ್.ಎಸ್. ಮೂರ್ತಿ Updated:

ಅಕ್ಷರ ಗಾತ್ರ : | |

ಕೃತಿಕ ಎಸ್. ಮೈಸೂರು: ಜನನ 6-3-1990, ಸಮಯ 3-00 ರಾತ್ರಿ.

ಪ್ರಶ್ನೆ: ಬಿಎಸ್ಸಿ ಓದಿದ್ದೆೀನೆ. ಮದುವೆ ಮತ್ತು  ಉದ್ಯೋಗದ ಬಗ್ಗೆ ತಿಳಿಸಿ.ಉತ್ತರ: ಇವರದು ಧನು ಲಗ್ನ, ಆರಿದ್ರಾ ನಕ್ಷತ್ರ, ಮಿಥುನರಾಶಿ. ಇವರ ಲಗ್ನಾಧಿಪತಿಗುರು ಭಾವದಲ್ಲಿ ಷಷ್ಟಸ್ಥಿತರಿದ್ದು, ಅವಯೋಗಿ ರಾಹು ನಕ್ಷತ್ರಸ್ಥಿತರಿದ್ದಾರೆ.ಲಗ್ನ ಭಾವದಲ್ಲಿ ಶನಿ, ಕುಜ ಮತ್ತು ಶುಕ್ರರು ಸ್ಥಿತರಿದ್ದಾರೆ. ಲಗ್ನವು ಪುಷ್ಕರನವಾಂಶದಲ್ಲಿದ್ದು,  ಅಷ್ಟಮಾಧಿಪತಿ ಚಂದ್ರ ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.ಇವರ ಉದ್ಯೋಗ ಸೂಚಕ ದಶಮವು ಕನ್ಯಾರಾಶಿಯಾಗಿದ್ದು ಇಲ್ಲಿ ಯಾವಗ್ರಹರೂ ಇಲ್ಲ. ಈ ಸ್ಥಾನವನ್ನು ಅವಯೋಗಿರಾಹು ಮತ್ತು ಶನಿ ವೀಕ್ಷಿಸುತ್ತಾರೆ. ದಶಮಾಧಿಪತಿ ಬುಧರು ಭಾವದಲ್ಲಿ  ಕುಟುಂಬಸ್ಥಾನ ಸ್ಥಿತರಿದ್ದು ಅವಯೋಗಿ ರಾಹು ನಕ್ಷತ್ರದಲ್ಲಿ ಗುರು ವೀಕ್ಷಿತರಾಗಿದ್ದಾರೆ. ಇವರು ಶನಿ ನವಾಂಶದಲ್ಲಿ ವೈರಿಕುಜ ಮತ್ತು ಕೇತು ಒಡನೆ ಸ್ಥಿತರಿದ್ದಾರೆ.ಇವರ ಉದ್ಯೋಗ ಸೂಚಕ ಅಂಶ ಕುಂಡಲಿಯ ಲಗ್ನವು ಕಟಕವಾಗಿದ್ದು ನಿಧನಾಂಶದಲ್ಲಿದೆ.ಲಗ್ನಾಧಿಪತಿ ಚಂದ್ರರು ಯೋಗಿ ಕೇತು ಒಡನೆ ಸುಖ ಸ್ಥಾನದಲ್ಲಿ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಸ್ಥಿತರಿದ್ದಾರೆ. ಇವು ಅಡೆತಡೆಗಳಿದ್ದರೂ ಉತ್ತಮ ಉದ್ಯೋಗ ಸಿಗುವ ಸೂಚನೆ ಯಾಗಿದೆ.  ಸಪ್ತಮಾಧಿಪತಿ ಬುಧರು ಅವಯೋಗಿ ರಾಹು ನಕ್ಷತ್ರದಲ್ಲಿದ್ದು, ಭಾವದಲ್ಲಿ ರಾಹು ಒಡನೆ, ಕುಟುಂಬ ಸ್ಥಾನ ಸ್ಥಿತರಿದ್ದಾರೆ. ಇವರನ್ನು ಗುರು ವೀಕ್ಷಿಸುತ್ತಾರೆ. ಕಳತ್ರಕಾರಕ ಶುಕ್ರರು ಪುಷ್ಕರನವಾಂಶದಲ್ಲಿದ್ದು, ಭಾವದಲ್ಲಿ ಕುಜ ಮತ್ತು ಶನಿಯೊಡನೆ ಲಗ್ನ ಸ್ಥಿತರಿದ್ದಾರೆ.ಇವರನ್ನು ಚಂದ್ರ ವೀಕ್ಷಿಸುತ್ತಾರೆ. ಇವು ಶುಭಾಶುಭಕರ.ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ತುಲಾ ಆಗಿದ್ದು ಲಾಭಾಂಶದಲ್ಲಿದೆ.ಲಗ್ನಾಧಿಪತಿ ಮತ್ತುಕಾರಕ ಶುಕ್ರರು ಉಚ್ಛರಾಗಿ, ಷಷ್ಟ ಸ್ಥಿತರಿದ್ದಾರೆ.ಹೆಚ್ಚಿನ ಗ್ರಹರು ಶುಭಾಶುಭಸ್ಥಿತರಿದ್ದಾರೆ. ಕಾರಕ ಮತ್ತು ಲಗ್ನಾಧಿಪತಿ ಶುಕ್ರರು ರವಿ-ಚಂದ್ರರಿಂದ ಕರ್ತರಿಗೆ ಒಳಗಾಗಿದ್ದಾರೆ. ಇದು ಅಶುಭಕರ.ಇವರಿಗೆ ಈಗ ಗುರುದಶಾ ಅವಯೋಗಿ ರಾಹು ಭುಕ್ತಿ ನಡೆಯುತ್ತಿದೆ.ಗೋಚಾರದಲ್ಲಿ ಪಂಚಮಶನಿ, ಲಾಭ ಗುರು ಇದ್ದಾರೆ. ಇವು ಮದುವೆಗಾಗಲಿ ಉದ್ಯೋಗಕ್ಕಾಗಲಿ ಶುಭಕರವಲ್ಲ. 2013 ರ ನಂತರ ಪ್ರಯತ್ನದಿಂದ ಉದ್ಯೋಗ ಸಿಗುವುದು. 2015-16ರಲ್ಲಿ ಶನಿ ದಶಾ ಶನಿ ಭುಕ್ತಿಯಲ್ಲಿ ಮದುವೆ ನೆರವೇರುವುದು.ಪರಿಹಾರ: ಮಾಣಿಕ್ಯ ಧರಿಸಿ. ಕುಂಭ ವಿವಾಹ ಮಾಡಿಸಿ. ಚಾಮುಂಡಿ ದೇವಿಯನ್ನು ಪೂಜಿಸಿ. ಕುಲದೇವತಾ ಶಾಂತಿ ಮಾಡಿಸಿ.ನಾಗರಾಜ ಎ. ಕಂಪ್ಲಿ; ಜನನ   9-7-1968, ಸಮಯ 3-36 ರಾತ್ರಿ.

ಪ್ರಶ್ನೆ: ಸಂತಾನಯೋಗದ ಬಗ್ಗೆ ತಿಳಿಸಿ.ಉತ್ತರ: ಇವರದು ವೃಷಭಲಗ್ನ, ಮೂಲಾನಕ್ಷತ್ರ ಧನುರಾಶಿ. ಇವರ ಲಗ್ನದಲ್ಲಿ ಯಾವ ಗ್ರಹರೂ ಇಲ್ಲ. ಲಗ್ನವನ್ನುಅವಯೋಗಿ ಕೇತು ವೀಕ್ಷಿಸುತ್ತಾರೆ. ಲಗ್ನಾಧಿಪತಿ ಶುಕ್ರರುಗುರು ನಕ್ಷತ್ರದಲ್ಲಿ, ದಗ್ಧರಾಶಿಯಲ್ಲಿ ರವಿ, ಕುಜ, ಬುಧರೊಡನೆ ಸ್ಥಿತರಿದ್ದು ಅಸ್ತರಾಗಿದ್ದಾರೆ.ಇವರನ್ನು ಚಂದ್ರ ಮತ್ತು ನೀಚ ಶನಿ ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.ಇವರ ಸಂತತಿಸ್ಥಾನ ಪಂಚಮವು ಕನ್ಯಾರಾಶಿ ದಗ್ಧವಾಗಿದ್ದು, ಬಂಜೆರಾಶಿಯಾಗಿದೆ. ಇಲ್ಲಿ ಅವಯೋಗಿಕೇತು ಸ್ಥಿತರಿದ್ದಾರೆ. ಈ ಸ್ಥಾನವನ್ನು ಯೋಗಿ, ವ್ಯಯಾಧಿಪತಿ ಕುಜರು, ದಗ್ಧರಾಶಿಯಿಂದ ವೀಕ್ಷಿಸುತ್ತಾರೆ. ಪಂಚಮಾಧಿಪತಿ ಬುಧರು ಸ್ವಕ್ಷೇತ್ರದಲ್ಲಿ ವೈರಿ ಕುಜ ರವಿ ಮತ್ತು ಶುಕ್ರರೊಡನೆ ದಗ್ಧರಾಶಿ ಸ್ಥಿತರಿದ್ದಾರೆ.ಇವರನ್ನು ನೀಚ ಶನಿ ಮತ್ತು ಚಂದ್ರರು ವೀಕ್ಷಿಸುತ್ತಾರೆ. ಪುತ್ರಕಾರಕ ಗುರು ಅವಯೋಗಿ ಕೇತು ನಕ್ಷತ್ರದಲ್ಲಿ ಸುಖಸ್ಥಾನ ಸ್ಥಿತರಿದ್ದಾರೆ.ಇವು ಸಂತಾನಕ್ಕೆ ಶುಭಕರವಲ್ಲ.ಇವರ ಸಂತತಿ ಸೂಚಕ ಸಪ್ತಾಂಶ ಕುಂಡಲಿಯ ಲಗ್ನವು ಮೀನವಾಗಿದ್ದು ಫಲಭರಿತರಾಶಿಯಾಗಿರುವುದಲ್ಲದೇ ಲಾಭಾಂಶದಲ್ಲಿದೆ.ಲಗ್ನಾಧಿಪತಿ ಮತ್ತುಕಾರಕ ಗುರು ಅಷ್ಟಮದಲ್ಲಿದ್ದಾರೆ. ಹೆಚ್ಚಿನ ಗ್ರಹರು ಶುಭಾಶುಭ ಸ್ಥಿತರಿದ್ದಾರೆ. ಇವರ ಬೀಜಸ್ಫುಟವು 50% ಇದ್ದು ಶುಭಕರವಲ್ಲ. ಇವರ ಪತ್ನಿಯವರ ಕುಂಡಲಿಯಲ್ಲೂ ಸಾಕಷ್ಟು ಸಂತಾನ ದೋಷಗಳಿದ್ದು  ನೀಚ ಶನಿದಶಾ ನಡೆಯುತ್ತಿದೆ. ಗೋಚಾರದಲ್ಲಿ ಅಷ್ಟಮಶನಿ ಮುಗಿದು ಭಾಗ್ಯಶನಿ ಬಂದಿದ್ದಾನೆ. ಇದರಿಂದ ಸೂಕ್ತ ಔಷಧೋಪಚಾರ ಮತ್ತು ಪರಿಹಾರಗಳಿಂದ 2013 ರಲ್ಲಿ ಸಂತತಿ ಪಡೆಯುವ ಸಾಧ್ಯತೆಗಳಿವೆ.ಇವರಿಗೆ ಈಗ ಯೋಗಿ ಕುಜದೆಶೆ ಬುಧ ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ಲಾಭ ಶನಿ ಪಂಚಮ ಗುರು ಇದ್ದಾರೆ. ಇವು ಶುಭಕರ.ಪರಿಹಾರ: ಪಚ್ಛೆಹರಳು ಧರಿಸಿ. ಸುದರ್ಶನ ಹೋಮ ಮಾಡಿಸಿ.ಲಕ್ಷ್ಮೀ ನರಸಿಂಹರನ್ನು ಪೂಜಿಸಿ.ಊರದೇವತೆಗೆ ಹರಕೆ ಸಲ್ಲಿಸಿ. ಕೂಷ್ಮಾಂಡ ಹೋಮ ಮಾಡಿಸುವುದು ಶ್ರೇಯಸ್ಕರ.ಬಸವರಾಜ್ ಎಂ.ಚಿತ್ರದುರ್ಗ: ಜನನ  30-5-1991, ಸಮಯ 3-35 ರಾತ್ರಿ.

ಪ್ರಶ್ನೆ: ಸರಕಾರಿ ಉದ್ಯೋಗ ಮತ್ತು ಮುಂದಿನ ಜೀವನದ ಬಗ್ಗೆ ತಿಳಿಸಿ.ಉತ್ತರ: ಇವರದು ಮೇಷಲಗ್ನ, ಮೂಲಾನಕ್ಷತ್ರ, ಧನುರಾಶಿ. ಇವರ ಲಗ್ನದಲ್ಲಿ ಯಾವ ಗ್ರಹರೂ ಇಲ್ಲ. ಯಾವ ಶುಭ ಸಂಬಂಧವೂ ಇಲ್ಲ. ಲಗ್ನಾಧಿಪತಿ     ಕುಜರು ಪುಷ್ಕರನವಾಂಶದಲ್ಲಿದ್ದರೂ ನೀಚರಾಗಿ, ಸುಖಸ್ಥಾನದಲ್ಲಿ ಅವಯೋಗಿ, ಉಚ್ಛ ಗುರು, ಯೋಗಿ ಶುಕ್ರ ಮತ್ತು ಕೇತು ಒಡನೆ  ಸ್ಥಿತರಿದ್ದಾರೆ. ಇವರನ್ನು ವಕ್ರೀ ಶನಿ ವೀಕ್ಷಿಸುತ್ತಾರೆ.ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.ಇವರ ಉನ್ನತ ಶಿಕ್ಷಣ ಸ್ಥಾನ ಪಂಚಮವು ಸಿಂಹರಾಶಿಯಾಗಿದ್ದು ಇಲ್ಲಿ ಯಾವಗ್ರಹರೂ ಇಲ್ಲ. ಈ ಸ್ಥಾನವನ್ನು ರಾಹು ವೀಕ್ಷಿಸುತ್ತಾರೆ. ಪಂಚಮಾಧಿಪತಿ ರವಿ ಪುಷ್ಕರನವಾಂಶದಲ್ಲಿದ್ದರೂ ವೈರಿಕ್ಷೇತ್ರ ದಲ್ಲಿ ಬಲಹೀನರಾಗಿ ಚಂದ್ರ ನಕ್ಷತ್ರ ಸ್ಥಿತರಿದ್ದಾರೆ. ವಿದ್ಯಾಬುದ್ಧಿಕಾರಕ ಬುಧರು ದ್ವಿತೀಯದಲ್ಲಿ ಶುಕ್ರ ನಕ್ಷತ್ರದಲ್ಲಿ ವೈರಿಕ್ಷೇತ್ರ ಸ್ಥಿತರಿದ್ದಾರೆ. ಇವರನ್ನುರಾಹು ವೀಕ್ಷಿಸುತ್ತಾರೆ.

ಇವರ ಉನ್ನತ ವಿದ್ಯಾಸೂಚಕ ಅಂಶಕುಂಡಲಿಯ ಲಗ್ನವು ಭಾಗ್ಯಾಂಶದಲ್ಲಿದೆ.ಲಗ್ನಾಧಿಪತಿಗುರು ಸಪ್ತಮದಲ್ಲಿ ರವಿಯೊಡನೆ ಸ್ಥಿತರಿದ್ದು ಲಗ್ನವನ್ನು ವೀಕ್ಷಿಸುತ್ತಾರೆ. ಹೆಚ್ಚಿನ ಗ್ರಹರು ಶುಭಾಶುಭ ಸ್ಥಿತರಿದ್ದು ಅಡೆತಡೆಗಳ ಸೂಚಕವಾಗಿದೆ. ಇವರ ಸ್ಪರ್ಧಾತ್ಮಕ ಪರೀಕ್ಷೆಗಳ ಸೂಚಕ ಷಷ್ಟವು ಕನ್ಯಾರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ.ಷಷ್ಟಾಧಿಪತಿಕಾರಕ ಬುಧರು ದ್ವಿತೀಯದಲ್ಲಿ ರವಿ ಮತ್ತು ಗುಳಿಕರೊಡನೆ ಸ್ಥಿತರಿದ್ದಾರೆ. ಇದರಿಂದ ಅಡೆತಡೆಗಳಿದ್ದರೂ ಹೆಚ್ಚಿನ ಪ್ರಯತ್ನದಿಂದ ಸರಕಾರಿ ಉದ್ಯೋಗ ಇವರಿಗೆ ಸಾಧ್ಯವಾಗುವುದಲ್ಲದೇ, ಕೆಎಎಸ್ ಕೂಡ ಇವರಿಗೆ ಪ್ರಯತ್ನದಿಂದ ಸಾಧ್ಯವಾಗುವುದು.

ಇವರ ಧನಾಧಿಪತಿಯೋಗಿ ಶುಕ್ರರು ಸುಖಸ್ಥಾನ ಸ್ಥಿತರಿದ್ದಾರೆ.ಪೂರ್ವಪುಣ್ಯಸ್ಥಾನಾಧಿಪತಿರವಿ ಧನಸ್ಥಾನ ಸ್ಥಿತರಿದ್ದಾರೆ. ಭಾಗ್ಯಾಧಿಪತಿ ಅವಯೋಗಿಯಾಗಿ ಗುರು ಸುಖಸ್ಥಾನದಲ್ಲಿ ಉಚ್ಛರಾಗಿದ್ದಾರೆ. ಇವು ಇವರಿಗೆ ಸಂಕ್ಷಷ್ಟಗಳನ್ನೂ, ಉತ್ತಮ ಜೀವನವನ್ನು ಸೂಚಿಸುತ್ತದೆ.ಇವರಿಗೆ ಈಗ ಶುಕ್ರದಶಾ ಶನಿ ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ಲಾಭ ಶನಿ, ಪಂಚಮ ಗುರು ಇದ್ದಾರೆ.ಇವು ಶುಭಕರ. 201ರಲ್ಲಿ ಸಾಡೆಸಾತಿ ಪ್ರಾರಂಭವಾಗುವ ಮೊದಲು ಇವರು ಉದ್ಯೋಗ ದೊರಕಿಸಿಕೊಂಡರೆ ಮುಂದಿನ ಜೀವನ ಉತ್ತಮವಾಗಿರುವುದು.ಪರಿಹಾರ: ಮಾಣಿಕ್ಯ ಧರಿಸಿ.ಜನ್ಮದೋಷ ಶಾಂತಿ ಮಾಡಿಸಿ. ಸಾಯಿಬಾಬಾರನ್ನು ಪೂಜಿಸಿ.  ದುರ್ಗಾತ್ರಿಶತಿ ಪಠಿಸಿ.

ಪ್ರತಿಕ್ರಿಯಿಸಿ (+)