ಚಟ್ನಿಹಳ್ಳಿಯಲ್ಲಿ ಮನೆ ಮನೆಗಳಲ್ಲೂ ಆನೆ ಗಾತ್ರದ ಹಸುಗಳು ಕೆಚ್ಚಲು ಬಿಟ್ಟು ನಿಂತಿದ್ದವು. ಊರ ಹೆಂಗಸರ ಸೊಂಟದ ಬಾಳೆಕಾಯಿ, ಸೆರಗಿನ ಗಂಟುಗಳು ದಪ್ಪಗಾಗಿದ್ದವು. ಸೀಮೆಹಸುಗಳಂತೆ ಹೆಂಗಸರೂ ಎರಡು ಮೂರು ಸುತ್ತು ದಪ್ಪಗಾಗಿದ್ದರು. ಆದರೆ, ಊರಿನ ಗಂಡಸು ತಳಿಗಳು ಆರ್ಥಿಕ, ದೈಹಿಕವಾಗಿ ದುರ್ಬಲವಾಗಿದ್ದವು.

ಮೊದಲು ಗಂಡಸರು ಹೀಗಿರಲಿಲ್ಲ, ಹೊಲ–ಮನೆ ನೋಡಿಕೊಂಡು ತಕ್ಕಮಟ್ಟಿಗಿದ್ದರು. ವ್ಯವಸಾಯ ಮೊದಲಿನಂತಿರಲಿಲ್ಲ, ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲ, ಕೃಷಿ ಕೆಲಸಕ್ಕೆ ಕೂಲಿ ಆಳು ಸಿಗುತ್ತಿರಲಿಲ್ಲ. ಲಾಭದಾಯಕ ಅಲ್ಲವೆಂದು ವ್ಯವಸಾಯವನ್ನು ಕಡೆಗಣಿಸಿದ್ದರು.

ಹಿಂಗಾದ್ರೆ ಸಂಸಾರ ನಡೆಸೋದು ಹೆಂಗೆ ಎಂದು ಊರಿನ ಸ್ತ್ರೀಕುಲ ಕಳವಳಗೊಂಡಿತು. ಎಚ್ಚತ್ತುಕೊಂಡ ಹೆಂಗಸರು ಹಸು ಸಾಕಾಣಿಕೆ, ಹೈನುಗಾರಿಕೆ ಆರಂಭಿಸಿ ಆರ್ಥಿಕ ಸ್ವಾವಲಂಬಿಯಾದರು. ಸಂಸಾರಕ್ಕೆ ಆಧಾರವಾದರು. ಒಂದಿಷ್ಟು ಕಾಸು– ಕರಿಮಣಿ ಕಂಡರು.

ಗಂಡಸರು ನಿರುದ್ಯೋಗಿಯಂತಾಗಿದ್ದರು. ಹಲ್ಲು ಕಿರಿದು, ತಲೆ ಕೆರೆದು ಹೆಂಡ್ತಿಯಿಂದ ದೈನಂದಿನಖರ್ಚಿಗೆ ಕಾಸು ಗಿಟ್ಟಿಸಿಕೊಳ್ಳುವ ದಯನೀಯ ಪರಿಸ್ಥಿತಿ
ಅನುಭವಿಸಿದ್ದರು.

ಹೀಗಿರುವಾಗ, ಅದೃಷ್ಟಕ್ಕೋ ದುರದೃಷ್ಟಕ್ಕೋ ಚಟ್ನಿಹಳ್ಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಯೋಜನೆ ರೂಪಿಸಿತು. ಆಗ ರಿಯಲ್ ಎಸ್ಟೇಟ್ ಕುಳಗಳು ಊರಿಗೆ ನುಗ್ಗಿದವು. ಕಾಸಿಲ್ಲದೆ ಕಂಗಾಲಾಗಿದ್ದ ಜನ ಬರಮಾಡಿಕೊಂಡರು.

ಎಕರೆಗೆ ಕೋಟಿಗಟ್ಟಲೆ ದುಡ್ಡು ಕೊಟ್ಟು ಕೊಂಡುಕೊಂಡ ಜಮೀನಿಗೆ ಕಾಂಪೌಂಡ್ ಕಟ್ಟಿಕೊಂಡರು. ಜಮೀನು ಮಾರಿಕೊಂಡವರು. ಮೂಟೆಗಟ್ಟಲೆ ದುಡ್ಡು ಎಣಿಸಿಕೊಂಡು ದೊಡ್ಡ ಮನೆ, ದೊಡ್ಡ ಕಾರುಗಳ ಒಡೆಯರಾದರು.

ನಿತ್ಯ ಹಸುವಿನ ಮೈ ತೊಳೆದು, ಸಗಣಿ, ಗಂಜಲ ಕ್ಲೀನ್ ಮಾಡೋದು ಅಸಹ್ಯ ಎನಿಸಿತು. ಜೊತೆಗೆ ಹಸುಗಳಿಗೆ ಮೇವು ಬೆಳೆಯುವ ಜಮೀನನ್ನೂ ಮಾರಿಕೊಂಡಿದ್ದರು. ಹಾಲು ಕೊಡುವ ಹಸುಗಳು ಮಾರಾಟವಾದವು.

ಅನ್ನದ ಬದಲು ದುಡ್ಡು ತಿನ್ನುವವರಂತೆ ಚಟ್ನಹಳ್ಳಿ ಜನ ನೂರು ರೂಪಾಯಿ ನೋಟುಗಳ ತಿಂಡಿ, ಐದು ನೂರು ನೋಟುಗಳ ಊಟ ಮಾಡಿಕೊಂಡು ಸದ್ಯಕ್ಕೆ ಸುಖವಾಗಿದ್ದಾರೆ... ಮುಂದೇನಾಗುವುದೋ ಬಲ್ಲವರಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.