ನವದೆಹಲಿ(ಪಿಟಿಐ): ಸಂಕಷ್ಟದಲ್ಲಿದ್ದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ `ಮಹೀಂದ್ರಾ ಸತ್ಯಂ~ ಕಂಪೆನಿ ಈಗ `ವಿಲೀನ~ವೆಂಬ ಪ್ರಮುಖ ಘಟ್ಟದಲ್ಲಿದೆ. ಅದು ಮತ್ತೊಂದು ಐಟಿ ಸಂಸ್ಥೆ `ಟೆಕ್ ಮಹೀಂದ್ರಾ~ದಲ್ಲಿ ಸದ್ಯದಲ್ಲಿಯೇ ಲೀನವಾಗಲಿದೆ.

ನಾಲ್ಕು ವರ್ಷಗಳ ಹಿಂದೆ ರಾಮಲಿಂಗರಾಜು ಒಡೆತನದ `ಸತ್ಯಂ ಕಂಪ್ಯೂಟರ್ಸ್~ ವಿವಾದಕ್ಕೆ ಸಿಲುಕಿತ್ತು. ನಂತರ `ಮಹೀಂದ್ರಾ ಸತ್ಯಂ~ ಆಗಿ ಪರಿವರ್ತನೆಗೊಂಡು ಮೂರು ವರ್ಷಗಳೇ ಕಳೆದಿವೆ. ಈ ಸತ್ವಪರೀಕ್ಷೆಯ ಮಹತ್ವದ ಕಾಲ ಘಟ್ಟವನ್ನು ಯಶಸ್ವಿಯಾಗಿ ದಾಟಿ ಬಂದ ಬಗ್ಗೆ ಮಹೀಂದ್ರಾ ಸತ್ಯಂ ಈಗ ಸಮಾಧಾನ ವ್ಯಕ್ತಪಡಿಸಿದೆ. ಹಳೆಯ ಗ್ರಾಹಕ ಕಂಪೆನಿಗಳೂ ತನ್ನ ಸೇವಾ ವ್ಯಾಪ್ತಿಗೆ ಮರಳುತ್ತಿರುವ ಬಗೆಗೂ ಅದಕ್ಕೆ ಸಂತಸವಿದೆ.

`4 ವರ್ಷಗಳ ಹಿಂದೆ ಬಹಳ ಅಸ್ಥಿರತೆಯ ದಿನಗಳಲ್ಲಿ `ಸತ್ಯಂ~ನಿಂದ ದೂರವಾಗಿದ್ದ ಗ್ರಾಹಕರಲ್ಲಿ ಬಹಳಷ್ಟು ಕಂಪೆನಿಗಳು ವಾಪಸ್ ಬರಲಾರಂಭಿಸಿವೆ. ಸತ್ಯಂಗೆ ವಾಣಿಜ್ಯ ನಿರ್ಬಂಧ ವಿಧಿಸಿದ್ದ ಕಂಪೆನಿಗಳು, ಈಗ ಪರಿವರ್ತನೆಗೊಂಡಿರುವ ನಮ್ಮ ಸಂಸ್ಥೆಗೆ ಹೊಸ ಸೇವಾ ಗುತ್ತಿಗೆ ವಹಿಸಿಕೊಡುತ್ತಿವೆ~ ಎಂದು ಮಹೀಂದ್ರಾ ಸತ್ಯಂ ಅಧ್ಯಕ್ಷ ವಿನೀತ್ ನಯ್ಯರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕಂಪೆನಿಯ ಷೇರುದಾರರಿಗೆ ಇತ್ತೀಚೆಗೆ ಪತ್ರ ಬರೆದಿರುವ ನಯ್ಯರ್, `ಸದ್ಯದ ನಮ್ಮ ಸ್ಥಿತಿಗತಿ ಬಗ್ಗೆ ನಮಗಂತೂ ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಕಾನೂನು ವ್ಯಾಜ್ಯಗಳ ತೊಡಕು, ತಾಕಲಾಟಗಳು ಇಲ್ಲದಂತೆ ವ್ಯವಹರಿಸುವತ್ತ ಗಮನ ಕೇಂದ್ರೀಕರಿಸಬೇಕಿದೆ~ ಎಂದಿದ್ದಾರೆ.

ಮಹೀಂದ್ರಾ ಸತ್ಯಂ ಸದ್ಯ, ಮಹೀಂದ್ರಾ ಅಂಡ್ ಮಹೀಂದ್ರಾ ಸಮೂಹದ ಮಾಹಿತಿ ತಂತ್ರಜ್ಞಾನ ಕಂಪೆನಿ `ಟೆಕ್ ಮಹೀಂದ್ರಾ~ದಲ್ಲಿ ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿದೆ. ವಿಲೀನ ಪ್ರಕ್ರಿಯೆಗೆ ಎರಡೂ ಷೇರು ವಿನಿಮಯ ಕೇಂದ್ರಗಳು ಮತ್ತು `ಸ್ಪರ್ಧಾತ್ಮಕ ಚಟುವಟಿಕೆ ನಿಗಾ ಆಯೋಗ~(ಸಿಸಿಐ)ದಿಂದ ಅನುಮೋದನೆ ದೊರಕಿದೆ. ಷೇರುದಾರರೂ ವಿಲೀನಕ್ಕೆ ಒಪ್ಪಿದ್ದಾರೆ. ಇನ್ನೇನಿದ್ದರೂ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಹೈಕೋರ್ಟ್ ಒಪ್ಪಿಗೆಯಷ್ಟೇ ಬರಬೇಕಿದ್ದು, ಅದಕ್ಕೆ ಕಾಯುತ್ತಿದ್ದೇವೆ ಎಂದು ನಯ್ಯರ್ ಪತ್ರದಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.