ಶನಿವಾರ, ಜೂನ್ 19, 2021
28 °C

ಟೆನಿಸ್: ಪೇಸ್-ಸ್ಟೆಪನೆಕ್ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿಯನ್ ವೆಲ್ಸ್, ಅಮೆರಿಕ (ಪಿಟಿಐ): ಭಾರತದ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜೋಡಿ ಇಲ್ಲಿ ಆರಂಭವಾದ ಇಂಡಿಯನ್ ವೆಲ್ಸ್ ಎಟಿಪಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿತು.ಭಾನುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಪೇಸ್-ರಾಡೆಕ್ ಜೋಡಿ 6-3, 6-3ರ ನೇರ ಸೆಟ್‌ಗಳಿಂದ ಸ್ಪೇನ್‌ನ ಡೇವಿಡ್ ಫೆರರ್-ಅಲ್ಬೆರ್ಟ್ ರೋಮಸ್ ಎದುರು ಗೆಲುವು ಸಾಧಿಸಿತು.ಈ ಮೂಲಕ ವೃತ್ತಿ ಜೀವನದಲ್ಲಿ ಪೇಸ್ ಡಬಲ್ಸ್‌ನಲ್ಲಿ 600ನೇ ಗೆಲುವು ಪಡೆದ ದಾಖಲೆ ಮಾಡಿದರು. 2007ರಲ್ಲಿ ಪೇಸ್ ಜೆಕ್ ಗಣರಾಜ್ಯದ ಮಾರ್ಟಿನ್ ಡಾಮ್ ಜೊತೆ ಇಂಡಿಯನ್ ವೆಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು.ಭೂಪತಿ- ರೋಹನ್‌ಗೆ ಸೋಲು: ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಇಲ್ಲಿ ಮೊದಲ ಸುತ್ತಿನಲ್ಲಿಯೇ ಸೋಲು ಕಂಡರು. ಸ್ವಿಟ್ಜರ್‌ಲೆಂಡ್‌ನ ಜುಲಿಯನ್ ಬೆನೆಟು ಹಾಗೂ ಜೋ ವಿಲ್ಪ್ರೈಡ್ ಸೊಂಗಾ ಜೋಡಿ 6-4, 6-3ರಲ್ಲಿ ಭಾರತದ ಜೋಡಿಯನ್ನು ಮಣಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.