ಶನಿವಾರ, ಮಾರ್ಚ್ 6, 2021
18 °C
ಕೂಡ್ಲಿಗಿ, ಹೂವಿನಹಡಗಲಿಯಲ್ಲಿ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆ

ಡಿವೈಎಸ್ಪಿ ಬದಲಾವಣೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿವೈಎಸ್ಪಿ ಬದಲಾವಣೆ: ಪ್ರತಿಭಟನೆ

ಕೂಡ್ಲಿಗಿ: ಕೂಡ್ಲಿಗಿ ವಿಭಾಗದ ಡಿವೈಎಸ್ಪಿ ಅನುಪಮಾ ಶೆಣೈ ಅವರನ್ನು ಸರ್ಕಾರ ಬೇರೆಡೆಗೆ ನಿಯೋಜನೆ ಮಾಡಿರುವುದನ್ನು ಖಂಡಿಸಿ ಗುರುವಾರ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ವರ್ಗಾವಣೆ ರದ್ದು ಗೊಳಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದವು.ಅನುಪಮಾ ಶೆಣೈ ನಿಷ್ಠಾವಂತ ಅಧಿಕಾರಿಯಾಗಿದ್ದು, ಅಕ್ರಮ ಚಟುವಟಿಕೆ ಗಳನ್ನು ನಿಯಂತ್ರಿಸಿದ್ದರು. ಇಂತಹ ಅಧಿ ಕಾರಿಯನ್ನು ಏಕಾಏಕಿ ವರ್ಗಾಯಿಸಿರು ವುದು ಈ ಭಾಗದ ಜನರಿಗೆ ಮಾಡಿದ ಅನ್ಯಾಯವಾಗಿದೆ. ಆದ್ದರಿಂದ ಅವರ ಅವಧಿ ಮುಗಿಯುವ ವರೆಗೂ ಇಲ್ಲಿಯೇ ಮುಂದುವರಿಸಬೇಕು  ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ನಮ್ಮ ಕನ್ನಡ ರಕ್ಷಣಾ ವೇದಿಕೆ, ಯುವ ಬ್ರಿಗೇಡ್, ಕನ್ನಡ ಸೇನೆ, ವಂದೇ ಮಾತರಂ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಹಿಂದು ಜಾಗರಣ ವೇದಿಕೆ ಮತ್ತು ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ ಮನವಿ ಪತ್ರ ಸ್ವೀಕರಿಸಿದರು.ಹೂವಿನಹಡಗಲಿ ವರದಿ

ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ದಿಢೀರ್ ವರ್ಗಾವಣೆ ವಿರೋಧಿಸಿ ಆಮ್‌ ಆದ್ಮಿ ಪಾರ್ಟಿಯ ಮುಖಂಡರು ಗುರುವಾರ ತಹಶೀಲ್ದಾರ್ ಎಚ್.ವಿಶ್ವನಾಥ ಅವರಿಗೆ ಮನವಿ ಸಲ್ಲಿಸಿದರು. ಕೂಡಲೇ ಅವರ ವರ್ಗಾವಣೆಯನ್ನು ರದ್ದುಪಡಿಸಿ ಮೂಲ ಸ್ಥಳಕ್ಕೆ ನಿಯೋಜಿಸ ದಿದ್ದರೆ ಹೋರಾಟವನ್ನು ತೀವ್ರಗೊಳಿಸ ಲಾಗುವುದು ಎಂದು ಎಚ್ಚರಿಸಿದರು.ಎಎಪಿ ತಾಲ್ಲೂಕು ಸಂಚಾಲಕ ಮಹೇಂದ್ರ ನಂದಿಹಳ್ಳಿ, ಸದಸ್ಯರಾದ ಜಿ.ಪತ್ರೇಶ, ಪಿ.ಯಮನೂರುಸಾಬ್, ಸತ್ಕಾರ್ಯ ಸೇವಾ ಸದನ ಟ್ರಸ್ಟ್ ಅಧ್ಯಕ್ಷ ಎಚ್.ಕೆ.ಗುರುಬಸವರಾಜ, ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಎಸ್.ಎಂ.ಬಸವರಾಜ, ಸದಸ್ಯ ಎಸ್.ನಿಂಗರಾಜ, ನ್ಯಾಚುರಲ್–96 ಸರ್ವೀಸ್ ಟ್ರಸ್ಟ್ ಕಾರ್ಯದರ್ಶಿ ಎಂ.ಚಿದಾನಂದ ಇತರರಿದ್ದರು.ಅನುಪಮಾ ಶೆಣೈ ಇಂಡಿಗೆ ಎತ್ತಂಗಡಿ

ಬಳ್ಳಾರಿ:
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ರುವ ಸಂದರ್ಭದಲ್ಲೇ ಜಿಲ್ಲೆಯ ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರನ್ನು ರಾಜ್ಯ ಸರ್ಕಾರ ದಿಢೀರನೇ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿಗೆ ಓಓಡಿ ಮೂಲಕ ಬುಧವಾರ ಕರ್ತವ್ಯಕ್ಕೆ ನಿಯೋಜಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರ ಬೆಂಬಲಿಗರೊಬ್ಬರ ದೂರವಾಣಿ ಕರೆಯನ್ನು ಸ್ವೀಕರಿಸಿದ ಬಳಿಕ ಸಚಿವರೊಂದಿಗೆ ಮಾತನಾಡದೇ ಇದ್ದುದೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಅನುಪಮಾ ಅವರು ನಿಯೋಜಿತ ಸ್ಥಳದಲ್ಲಿ ಕರ್ತವ್ಯಕ್ಕೆ ಇನ್ನೂ ವರದಿ ಮಾಡಿ ಕೊಂಡಿಲ್ಲ.ಜನವರಿ 18ರಂದು ಸಚಿವರ ಬೆಂಬಲಿಗ ರೊಬ್ಬರು ಅನುಪಮಾ ಅವರಿಗೆ ಕರೆ ಮಾಡಿ, ಸಚಿವರು ಮಾತನಾಡುತ್ತಾರೆ ಎಂದು ಹೇಳಿದ್ದರು. ಅನುಪಮಾ ಸುಮಾರು 25 ಸೆಕೆಂಡ್‌ ಕಾದರೂ ಸಚಿವರು ಸಂಪರ್ಕಕ್ಕೆ ದೊರಕಲಿಲ್ಲ. ಅದೇ ವೇಳೆ ಇಲಾಖೆಯ ಹಿರಿಯ ಅಧಿಕಾರಿ ಯೊಬ್ಬರು ಕರೆ ಮಾಡಿದ್ದ ರಿಂದ ಅವ ರೊಂದಿಗೆ ಮಾತನಾಡಿದ್ದರು. ನಂತರ ಬೆಂಬಲಿಗರ ದೂರವಾಣಿ ಮೂಲಕ ಮಾತನಾಡಿದ ಸಚಿವರು ಅಸಮಾ ಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.ಈ ಘಟನೆ ನಡೆದ ಒಂದೇ ದಿನದಲ್ಲಿ ಅನುಪಮಾ ಅವರನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿಗೆ ಓಓಡಿ ಮೂಲಕ ನಿಯೋಜಿಸಲಾಗಿತ್ತು. ನಂತರ ಇಂಡಿ ತಾಲ್ಲೂಕಿಗೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದಕ್ಷರ ವರ್ಗಾವಣೆ: ಅನುಪಮಾ ಅವರನ್ನು ದೀಢೀರನೆ ಬೇರೊಂದು ಜಿಲ್ಲೆಗೆ ನಿಯೋಜಿಸಿರುವುದು ಆಶ್ಚರ್ಯ ಮೂಡಿಸಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ಸ್ಪಷ್ಟನೆ ಪಡೆಯಲು ಅಧಿಕಾರಿ ಮತ್ತು ಸಚಿವರನ್ನು ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ಕೈಗೂಡಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.