ಸೋಮವಾರ, ಮೇ 17, 2021
31 °C

`ತರಬೇತಿ ಪ್ರಯೋಜನ ಪಡೆಯಿರಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಕಾಲಹರಣ ಮಾಡಲು ಶಿಬಿರಗಳಿಗೆ ಸೇರಬಾರದು. ಶಿಬಿರದಲ್ಲಿ ಲಭಿಸುವ ತರಬೇತಿ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು' ಎಂದು ಜೆಎಸ್‌ಎಸ್ ರುಡ್‌ಸೆಟ್ ಸಂಸ್ಥೆಯ ಸಂಯೋಜಕ ಚಿನ್ನಸ್ವಾಮಿ ಸಲಹೆ ನೀಡಿದರು.ನಗರದ ದೇವಾಂಗ ಬೀದಿಯ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ ಶಕ್ತಿ ಮಹಿಳಾ ಮಾರ್ಗದರ್ಶಿ ಹೊಲಿಗೆ ತರಬೇತಿ ಕೇಂದ್ರದ ಮೂರನೇ ವಾರ್ಷಿಕೋತ್ಸವ ಹಾಗೂ ಹೊಲಿಗೆ ತರಬೇತಿ ಪಡೆದವರಿಗೆ ಅರ್ಹತಾ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.ಪ್ರತಿಭೆ ಇದ್ದವರಿಗೆ ಸಮಾಜದಲ್ಲಿ ಬೆಲೆ ಇರುತ್ತದೆ. ಹೊಸತನಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಹೀಗಾಗಿ, ತಾವು ಮಾಡುವಂತಹ ಕೆಲಸಕ್ಕೆ ಹೊಸತನದ ರೂಪ ನೀಡಬೇಕು. ಆಗ ಉತ್ತಮ ಮಾರುಕಟ್ಟೆಯೂ ಲಭಿಸುತ್ತದೆ ಎಂದರು. ಕಾವೇರಿ ಗ್ರಾಮೀಣ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ವೀರ್‌ಕುಮಾರ್ ಮಾತನಾಡಿ, ಮಹಿಳೆಯರು ಸಂಘಟಿತ ರಾಗಬೇಕು. ಜಿಲ್ಲೆಯಲ್ಲಿ ಸಿದ್ಧಉಡುಪು ಕಾರ್ಖಾನೆ ನಿರ್ಮಾಣ ವಾದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.ಶಿಕ್ಷಕ ಸಿ. ಗೋವಿಂದರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್. ನಿರ್ಮಲಾ, ನಂಜಮಣಿ, ಎಸ್. ರಾಜಲಕ್ಷ್ಮೀ, ಕನಕಲಕ್ಷ್ಮಿ, ನಂಜುಂಡ ಸ್ವಾಮಿ, ವೀರಭದ್ರಾಚಾರ್ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.