ಭಾರತದಲ್ಲಿಯೇ ಅತ್ಯಂತ ಸಣ್ಣ ಗಿರಿಧಾಮ ಎಂದರೆ ಅದು ಮಥೆರಾನ್. ಮರಾಠಿಯಲ್ಲಿ ಮಥೆರಾನ್ ಎಂದರೆ ಏನು ಗೊತ್ತಾ? ತಲೆಯ ಮೇಲೆ ಕಾಡು ಎಂದರ್ಥ. ದಟ್ಟ ಕಾಡು ಆವರಿಸಿದ ಬೆಟ್ಟದ ತುತ್ತತುದಿಯಲ್ಲಿ ಇರುವ ಈ ಗಿರಿಧಾಮಕ್ಕೆ ಮರಾಠಿಗರು ಇಂಥ ಹೆಸರನ್ನು ಇಟ್ಟಿರುವುದು ಸೂಕ್ತ ಎನಿಸುತ್ತದೆ.

ಕೇವಲ ಎಂಟು ಚದರ ಮೈಲಿ (ಏಳು ಕಿ.ಮೀ) ವಿಸ್ತಾರ ಇರುವ ಈ ಗಿರಿಧಾಮ ಸಮುದ್ರ ಮಟ್ಟದಿಂದ 800 ಮೀಟರ್ ಎತ್ತರದಲ್ಲಿದೆ. ಈ ಚಿಕ್ಕ ಗಿರಿಧಾಮಕ್ಕೆ ಹೋಗಲು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಆದ್ದರಿಂದಲೇ ಅಲ್ಲಿ ಇಂದಿಗೂ ಶಾಂತಮಯ ವಾತಾವರಣ ಮತ್ತು ತಾಜಾ ಹವೆ ಉಳಿದುಕೊಂಡಿದೆ.

ಮಹಾರಾಷ್ಟ್ರದ ರಾಯಗಢ ಜಿಲ್ಲೆಗೆ ಸೇರಿದ ಈ ಗಿರಿಧಾಮ ಮುಂಬೈ ಮತ್ತು ಪುಣೆಗೆ ಸಮೀಪದಲ್ಲಿದೆ. ಇಲ್ಲಿಗೆ ತಲುಪಲು ವಾಹನಗಳ ಸೌಲಭ್ಯ ಇಲ್ಲದ ಕಾರಣ ಚಾರಣ ಪ್ರಿಯರಿಗೆ ಇದು ಅಚ್ಚುಮೆಚ್ಚು. ವಾಹನಗಳ ನಿಷೇಧವಿದ್ದರೂ ಕೂಡ ಪ್ರತೀವರ್ಷ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಮಥೆರಾನ್ ಅಂದ ಸವಿಯಲು ದಟ್ಟ ಕಾಡಿನ ನಡುವೆ ಸಂಚಾರ ಹೋಗುವ ಸವಾಲನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ.

ಪಶ್ಚಿಮ ಘಟ್ಟಗಳಲ್ಲಿ ಹಬ್ಬಿಕೊಂಡಿರುವ ಈ ಮಥೆರಾನ್ ಬೆಟ್ಟಗಳ ಶಾಂತ ವಾತಾವರಣವನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಅದನ್ನು ಅತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದೆ. ಇಲ್ಲಿನ ಲೂಯಿಸ್ ಪಾಯಿಂಟ್, ಪನೋರಮಾ ಪಾಯಿಂಟ್, ಲಿಟಲ್ ಚೌಕ್ ಪಾಯಿಂಟ್, ಬೈರೊನ್ ಗಾರ್ಬುಟ್ ಪಾಯಿಂಟ್ನಿಂದ ಗಿರಿಧಾಮದ ಸೊಬಗು ಮತ್ತಷ್ಟು ಹೆಚ್ಚಿದಂತೆ ಕಾಣುತ್ತದೆ. ದಾರಿಯುದ್ದಕ್ಕೂ ಎದೆ ನಡುಗಿಸುವ ಕಣಿವೆಗಳು, ಕಣ್ ತಣಿಸುವ ಹಸಿರ ನೋಟ ಮತ್ತು ತಾಜಾ ಹವೆ ಇರುವುದರಿಂದ ಈ ಕಾಡೊಳಗಿನ ಚಾರಣ ಆಯಾಸ ತರಿಸುವುದಿಲ್ಲ.

ಜೊತೆಗೆ ಈ ಗಿರಿಧಾಮದಲ್ಲಿ ನಿಗದಿಪಡಿಸಿರುವ ಸ್ಥಳಗಳಲ್ಲಿ ನಿಂತು ಸೂರ್ಯೋದಯ ಮತ್ತು ಸೂರ್ಯಾಸ್ತದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಮಥೆರಾನ್ನಲ್ಲಿ ತಿಳಿನೀರಿನ ಚಾರ್ಲೊಟ್ಟೆ ಹೆಸರಿನ ಸರೋವರವೂ ಇದೆ.ಇಷ್ಟೆಲ್ಲಾ ಸೌಂದರ್ಯವನ್ನು ಅಡಗಿಸಿಟ್ಟುಕೊಂಡಿರುವ ಈ ಸುಂದರ ಗಿರಿಧಾಮದಲ್ಲಿ ಮಕ್ಕಳಿಗಾಗಿ ಸಣ್ಣ ರೈಲೊಂದು ಸಂಚರಿಸುತ್ತದೆ.

ಮುಂಬೈನಿಂದ 100 ಕಿ.ಮೀ, ನೆರಾಲ್ನಿಂದ 21 ಕಿ.ಮೀ, ಪುಣೆಯಿಂದ 120 ಕಿ.ಮೀ ದೂರದಲ್ಲಿದೆ ಮಥೆರಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.