ಬುಧವಾರ, ಮೇ 12, 2021
24 °C

ತಾಂತ್ರಿಕತೆಗೆ ಮತ್ತೊಂದು ಹೆಸರು ವಿಶ್ವೇಶ್ವರಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಪ್ರಾಮಾಣಿಕತೆ, ದೂರದೃಷ್ಟಿ, ಚಿಂತನೆ, ಅಭಿವೃದ್ಧಿ, ನಿಷ್ಪಕ್ಷಪಾತ ಕಠಿಣ ನಿಲುವು, ಶಿಸ್ತು, ಸಮಯ ಪರಿಪಾಲನೆ ಮತ್ತಿತರ ಅಂಶಗಳು ಸರ್. ಎಂ. ವಿಶ್ವೇಶ್ವರಯ್ಯ ಅವರಿಗಾಗಿಯೇ ಸೃಷ್ಟಿಯಾಗಿವೆ ಎಂಬಂತೆ ಇವೆ.ತಾಂತ್ರಿಕತೆಗೆ ಇವರು ಮತ್ತೊಂದು ಹೆಸರು ಎಂದರೆ ಅತಿಶಯೋಕ್ತಿಯಲ್ಲ. ವಿಶ್ವಕಂಡ ಶ್ರೇಷ್ಠ ತಂತ್ರಜ್ಞ ವಿಶ್ವೇಶ್ವರಯ್ಯನವರು ಎಂದು ಶಿಕ್ಷಕರ ಪ್ರತಿಭಾ ಪರಿಷತ್ ಜಿಲ್ಲಾಧ್ಯಕ್ಷ ಸಾಹೇಬಗೌಡ ಬಿರಾದಾರ ಬಣ್ಣಿಸಿದರು.ಸಗರನಾಡು ಸೇವಾ ಪ್ರತಿಷ್ಠಾನ ಗುರುವಾರ ದೀವಳಗುಡ್ಡದ ಡಾ. ಬಾಬು ಜಗಜೀವನರಾಂ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ 151ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿ ಕೃಷಿ, ಉದ್ದಿಮೆ, ಕೈಗಾರಿಕೆ, ಶಿಕ್ಷಣ, ಸಹಕಾರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಯನ್ನೆ ಮಾಡಿದ ಶ್ರೇಯಸ್ಸಿಗೆ ವಿಶ್ವೇಶ್ವರಯ್ಯ ಭಾಜನರಾಗಿದ್ದಾರೆ. ಕನ್ನಂಬಾಡಿ ಅಣೆಕಟ್ಟೆ ಅವರು ನಿರ್ಮಿಸಿದ ಶ್ರೇಷ್ಠ ಕೆಲಸಗಳಲ್ಲಿ ಒಂದು. ಅವರ ಹೆಸರೆ ಸೂಚಿಸುವಂತೆ ವಿಶ್ವಕ್ಕೆ ಈಶ್ವರನಾಗಿದ್ದಾರೆ ಎಂದು ಅವರು ಗುಣಗಾನ ಮಾಡಿದರು.ಪ್ರಾಸ್ತಾವಿಕ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಮೈಸೂರು ವಿಶ್ವವಿದ್ಯಾಲಯ, ಸಾಬೂನು ಕಾರ್ಖಾನೆ, ಕಾಗದ ಕಾರ್ಖಾನೆ ಮತ್ತಿತರ ಸಂಸ್ಥೆಗಳನ್ನು ಹುಟ್ಟುಹಾಕಿದರು ಎಂದು ನುಡಿದರು.ಸಹಾಯಕ ಎಂಜಿನಿಯರ್ ರಾಯಪ್ಪ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ಕಾರ್ಯದರ್ಶಿ ನಿಂಗಣ್ಣ ಬುಡ್ಡಾ ಅಧ್ಯಕ್ಷತೆ ವಹಿಸಿದ್ದರು.ಭೀಮಣ್ಣ ದೊಡ್ಡಮನಿ, ರಾಜು ತೊಳೆನೂರ, ಮಲ್ಲನಗೌಡ ಕುಪಗಲ್, ಚಂದು ದೊಡ್ಡಮನಿ ಉಪಸ್ಥಿತರಿದ್ದರು.

ರೇಣುಕಾ ಸ್ವಾಗತಿಸಿದರು. ಸಂತೋಷ ಕಲಿಕೇರಿ ನಿರೂಪಿಸಿದರು. ನಿರ್ಮಲಾ ರಫುಗಾರ್ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.