ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ ಇನ್ನಿಲ್ಲ

Last Updated 3 ಏಪ್ರಿಲ್ 2016, 19:59 IST
ಅಕ್ಷರ ಗಾತ್ರ

ಮಂಗಳೂರು: ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ  ಮಿಜಾರು ಅಣ್ಣಪ್ಪ (89) ಅವರು ಭಾನುವಾರ ಮೂಡುಬಿದಿರೆ ಸಮೀಪದ ಮಿಜಾರಿನ ತಮ್ಮ ನಿವಾಸದಲ್ಲಿ ನಿಧನರಾದರು.

ತುಳು ಯಕ್ಷಗಾನ ರಂಗದಲ್ಲಿ ಹಾಸ್ಯ ಪಾತ್ರಕ್ಕೆ ತಾರಾಗಿರಿ ತಂದುಕೊಟ್ಟ ಮಿಜಾರು ಅಣ್ಣಪ್ಪ ಅವರ ‘ಪಟ್ಟದ ಪದ್ಮಲೆ’, ‘ಕಾಡಮಲ್ಲಿಗೆ’ ಯಕ್ಷಗಾನ ನೋಡಿದವರು ಈಗಲೂ ಅವರ ಪಾತ್ರವನ್ನು ಮರೆತಿಲ್ಲ.

ಕೊಂಕಣಿ ಮನೆಮಾತಾದರೂ ತುಳು ಭಾಷೆಯಲ್ಲಿ ಅತ್ಯಂತ ಪ್ರಬುದ್ಧತೆಯನ್ನು ಹೊಂದಿದ್ದ ಅಣ್ಣಪ್ಪ ಅವರು, ಕನ್ನಡ, ಸಂಸ್ಕೃತವನ್ನು ಮಿಶ್ರಣ ಮಾಡದ, ಅಪ್ಪಟ ತುಳು ಭಾಷೆಯಲ್ಲಿ ಪ್ರೇಕ್ಷಕರನ್ನು 68 ವರ್ಷಗಳ ಕಾಲ ರಂಜಿಸಿದರು.

1940ರಲ್ಲಿ ಯಕ್ಷಗಾನ ರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಕಟೀಲು, ಇರಾ ಸೋಮನಾಥೇಶ್ವರ ಮೇಳ, ಕರ್ನಾಟಕ ಮೇಳಗಳಲ್ಲಿ ಹಾಸ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT