ತೆಂಗು ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸ್ಥಿರತೆ ಸಾಧಿಸಲು ನಮ್ಮ ಬೆಳೆಗಾರರು ಕೇರಳ ಮಾದರಿಯಲ್ಲಿ ಸಂಘಟಿತರಾಗಬೇಕು. ಅದರಲ್ಲೂ ಕೇರಳದ ಕ್ಯಾಲಿಕಟ್ ಬಳಿ ಇರುವ ಪೆರಂಬ್ರಾ ಬ್ಲಾಕ್ನ ಏಳು ಗ್ರಾಮ ಪಂಚಾಯಿತಿಗಳಲ್ಲಿ ಸಕ್ರಿಯವಾಗಿರುವ ‘ಸುಭಿಕ್ಷಾ ತೆಂಗು ಉತ್ಪಾದಕರ ಕಂಪೆನಿ’ಯ ಕಾರ್ಯ ಚಟುವಟಿಕೆಯನ್ನು ತುಮಕೂರು ಜಿಲ್ಲೆಯ ಎಲ್ಲ ರೈತರು ಒಮ್ಮೆ ಕಣ್ಣಾರೆ ನೋಡಬೇಕು. ಇದು ನಮ್ಮ ತೆಂಗು ಬೆಳೆಗಾರರ ಹಲವು ಸಮಸ್ಯೆಗಳಿಗೆ ಉತ್ತರದಂತೆ ಕಾಣುತ್ತಿದೆ.

ಜಿಲ್ಲೆಯಂತೆ ಇಲ್ಲಿಯೂ ಬಡತನ ಮತ್ತು ತೆಂಗು ಬೆಳೆ ಸಹಬಾಳ್ವೆ ನಡೆಸುತ್ತಿವೆ. ಇಲ್ಲಿ ಒಟ್ಟು 522 ಮಹಿಳಾ ಸ್ವ–ಸಹಾಯ ಗುಂಪುಗಳಿವೆ. ೨೦೦೨ರಲ್ಲಿ ಇಂಡಿಯನ್ ಇನ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಹಯೋಗದಲ್ಲಿ ಪೆರಂಬ್ರಾ ಗ್ರಾಮ ಪಂಚಾಯಿತಿ ಬ್ಲಾಕ್ ‘ಸುಭಿಕ್ಷಾ ತೆಂಗು ಉತ್ಪಾದಕ ಕಂಪೆನಿ’ ಸ್ಥಾಪಿಸಿತು. ಸ್ಥಾಪನೆಯಾದ ೧೨ ವರ್ಷದಲ್ಲಿ ಈ ಕಂಪೆನಿ ೭ಸಾವಿರ ಬಡ ಕುಟುಂಬಗಳಿಗೆ ಆಧಾರ ಸ್ತಂಭವಾಗಿದೆ. ಕಂಪೆನಿಗಾಗಿ ದಿನಕ್ಕೆ ೪ ಗಂಟೆ ದುಡಿಯುವ ಕುಟುಂಬ, ಸರಾಸರಿ ಪ್ರತಿ ದಿನ ₨ ೨೦೦ ಗಳಿಸುತ್ತಿದೆ.

ಇಂದು ಮಾರುಕಟ್ಟೆಯಲ್ಲಿ ಸುಭಿಕ್ಷಾ ಬ್ರಾಂಡ್ನಡಿ ತೆಂತಾ ಎಣ್ಣೆ, ತೆಂಗಿನ ಉಪ್ಪಿನಕಾಯಿ, ಎಳನೀರು ಜಾಮ್, ಸ್ಕ್ವಾಶ್, ಚಟ್ನಿಪುಡಿ, ನೈಸರ್ಗಿಕ ವಿನೆಗರ್, ತೆಂಗಿನ ಸೋಪು, ಕೇಶ ವರ್ಧಿನಿ ತೈಲ, ಕೊಬ್ಬರಿ ಎಣ್ಣೆ, ಸೌಂದರ್ಯ ವರ್ಧಕಗಳು, ಸಿಹಿ ನೀರಾ, ನಾರಿನ ಉತ್ಪನ್ನಗಳು ಸೇರಿದಂತೆ ಒಟ್ಟು ೨೨ ಬಗೆಯ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ.

ಯಾವುದೇ ಡೀಲರ್ ಅಥವಾ ದಲ್ಲಾಳಿಗಳ ಮೊರೆ ಹೋಗದೆ ಗ್ರಾಹಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿರುವುದು ‘ಸುಭಿಕ್ಷಾ’ದ ಮತ್ತೊಂದು ಹೆಗ್ಗಳಿಕೆ. ಕರ್ನಾಟಕದ ನಂದಿನಿ ಪಾರ್ಲರ್ ಮಾದರಿಯಲ್ಲಿ ಕೇರಳದಲ್ಲಿ ‘ಸುಭಿಕ್ಷಾ ಔಟ್ಲೆಟ್’ಗಳಿವೆ. ರಬ್ಬರ್ ಬೆಳೆಗಾರರ ಸಂಘದ ಮೂಲಕ ಸುಭಿಕ್ಷಾ ಉತ್ಪನ್ನಗಳನ್ನು ವಿದೇಶಕ್ಕೂ ರಫ್ತು ಮಾಡುತ್ತಾರೆ.

ಕೇರಳ ಸರ್ಕಾರ, ಕೃಷಿ– ತೋಟಗಾರಿಕೆ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ತೆಂಗು ಅಭಿವೃದ್ಧಿ ಮಂಡಳಿ ‘ಸುಭಿಕ್ಷಾ’ಗೆ ಬೆನ್ನೆಲುಬಾಗಿ ನಿಂತಿವೆ. ಇದೇ ಮಾದರಿಯಲ್ಲಿ ತುಮಕೂರು ಜಿಲ್ಲೆಯಲ್ಲೂ ತೆಂಗು ಬೆಳೆಗಾರರ ಸಂಘಗಳು ಸ್ಥಾಪನೆಯಾಗಿ ಸರ್ಕಾರ-----, ಇಲಾಖೆಗಳು ಕ್ರಿಯಾಶೀಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲೆಯದೇ ಆದ ಪ್ರತ್ಯೇಕ ತೆಂಗು ಉತ್ಪನ್ನಗಳ ಬ್ರಾಂಡ್ ಸ್ಥಾಪನೆಯಾಗಿ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆಯಬಹುದು. ಅದರಿಂದ ಲಕ್ಷಾಂತರ ರೈತರ ಬದುಕು ಹಸನಾಗಬಹುದು.

ತುರುವೇಕೆರೆಯಲ್ಲಿ ಇದೀಗ ಕರ್ನಾಟಕದ ಮೊದಲ ತೆಂಗು ಉತ್ಪಾದಕ ಕಂಪೆನಿ ಸ್ಥಾಪನೆಯಾಗಿದೆ. ಗುಬ್ಬಿಯಲ್ಲಿ 2ನೇ ಕಂಪೆನಿ ಆರಂಭವಾಗಿದೆ. ಚಿಕ್ಕನಾಯಕನಳ್ಳಿಯಲ್ಲಿ 80ಕ್ಕೂ ಹೆಚ್ಚು ತೆಂಗು ಉತ್ಪಾದಕ ಸೊಸೈಟಿಗಳು ನೋಂದಣಿಯಾಗಿದ್ದು, ಶೀಘ್ರ ಕಂಪೆನಿ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ಶಿರಾ, ಕುಣಿಗಲ್, ತುಮಕೂರಿನಲ್ಲೂ ‘ಉತ್ಪಾದನೆ– ಮಾರಾಟ– ಹೋರಾಟ’ ಎಂಬ ಧ್ಯೇಯ ವಾಕ್ಯದೊಂದಿಗೆ ಚೆದುರಿದಂತೆ ಸಂಘಗಳು ಅಸ್ತಿತ್ವಕ್ಕೆ ಬರುತ್ತಿವೆ. ಸುಭಿಕ್ಷಾ ಮಾದರಿಯನ್ನು ಮುಂದಿಟ್ಟುಕೊಂಡು ಸಂಘಟನೆ ಮುನ್ನಡೆಯದಿದ್ದರೆ ಬೆಳೆಗಾರರ ಚಳವಳಿ ದಿಕ್ಕು ತಪ್ಪುವ ಸಾಧ್ಯತೆಯಿದೆ.

ಈ ದೃಷ್ಟಿಯಿಂದ ಜಿಲ್ಲೆಯ ಎಲ್ಲ ತೆಂಗು ಬೆಳೆಗಾರರೂ ಸುಭಿಕ್ಷಾ ನೋಡಬೇಕು ಎಂದು ನಾನು ಬಯಸುತ್ತೇನೆ. ಈಗಾಗಲೇ ಜಿಲ್ಲೆಯ ನೂರಾರು ರೈತರು ಸರ್ಕಾರದಿಂದ ಯಾವುದೇ ಹಣ ಸಹಾಯ ಪಡೆಯದೆ ಸ್ವಂತ ಹಣದಿಂದ ‘ಸುಭಿಕ್ಷಾ’ ನೋಡಿ ಬಂದಿದ್ದಾರೆ. ಒಂದು ವಾರದ ಕೇರಳ ಪ್ರವಾಸಕ್ಕೆ ಸುಮಾರು ₨ ೨೫೦೦ ಖರ್ಚಾಗುತ್ತದೆ.

(ಮಾಹಿತಿಗೆ ವೆಬ್ಸೈಟ್: www.subicsha.in, ಈಮೇಲ್ coconut.subhicsha@gmail.com, ಮೊಬೈಲ್ 09946209005– ಅಣೇಕಟ್ಟೆ ವಿಶ್ವನಾಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.