ಗುರುವಾರ , ಮೇ 19, 2022
24 °C

ತೆಲುಗು ಅಕಾಡೆಮಿಗೆ ನಿವೇಶನ -ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸೂರ್ಯನಗರದ ಬಡಾವಣೆಯಲ್ಲಿ ಕರ್ನಾಟಕ ತೆಲುಗು ಅಕಾಡೆಮಿಗೆ ನಿವೇಶನ ನೀಡಲು ಸಿದ್ಧ~ ಎಂದು ವಸತಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.ಕರ್ನಾಟಕ ತೆಲುಗು ಅಕಾಡೆಮಿ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ಸೋಮವಾರ ನಡೆದ ನಟ ಡಾ. ಎನ್.ಟಿ.ರಾಮರಾವ್ ಅವರ 90ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.`ಸೂರ್ಯನಗರದಲ್ಲಿ 10 ಸಾವಿರ ನಿವೇಶನಗಳ ಪೈಕಿ 5,500 ನಿವೇಶನಗಳನ್ನು ವಿತರಿಸಲಾಗಿದೆ. 4,500 ನಿವೇಶನಗಳನ್ನು ಒಂದೂವರೆ ತಿಂಗಳಲ್ಲಿ ವಿತರಣೆ ಮಾಡಲಾಗುವುದು~ ಎಂದರು.`ಈ ಬಡಾವಣೆಯಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಶಾಲಾ ಕಟ್ಟಡ ನಿರ್ಮಿಸಲು ಈ ನಿವೇಶನ ಬಳಸಿಕೊಳ್ಳಬಹುದು.ಅಕಾಡೆಮಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ನೀಡಲಾಗುವುದು~ ಎಂದು ಹೇಳಿದರು.`ಎನ್.ಟಿ. ರಾಮ ರಾವ್, ಡಾ. ರಾಜ್ ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಮಹನೀಯರ ಸಾಧನೆಗಳನ್ನು ನಿರಂತರವಾಗಿ ನೆನಪಿಸಿಕೊಳ್ಳುವ ಕೆಲಸ ಆಗಬೇಕು. ಎನ್.ಟಿ.ಆರ್ ಮ್ಯೂಸಿಯಂ ಸ್ಥಾಪಿಸಬೇಕು~ ಎಂದು ಅವರು ಸಲಹೆ ನೀಡಿದರು.`ಕನ್ನಡ ಹಾಗೂ ತೆಲುಗು ಭಾಷೆಗಳು ಒಂದೇ ನಾಣ್ಯದ ಎರಡು ಮುಖಗಳು. ಈ ಎರಡೂ ರಾಜ್ಯದ ಜನತೆ ಸ್ವಾಭಿಮಾನಿಗಳು. ಜಲ ವಿವಾದ ಸೇರಿದಂತೆ ಯಾವುದೇ ವಿಚಾರದಲ್ಲೂ ಬೀದಿಯಲ್ಲಿ ನಿಂತು ಜಗಳ ಮಾಡಿದ ಉದಾಹರಣೆಯಿಲ್ಲ. ಸಮಸ್ಯೆಗಳನ್ನು ಸಮಯಪ್ರಜ್ಞೆ, ಇಚ್ಛಾಶಕ್ತಿಯ ಮೂಲಕ ಬಗೆಹರಿಸಲಾಗಿದೆ~ ಎಂದರು.

ಇದಕ್ಕೂ ಮುನ್ನ ಕರ್ನಾಟಕ ತೆಲುಗು ಅಕಾಡೆಮಿ ಅಧ್ಯಕ್ಷ ಡಾ.ಎ. ರಾಧಾಕೃಷ್ಣ ರಾಜು ಮಾತನಾಡಿ, `ಶಾಲಾ ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರ ನಿವೇಶನ ನೀಡಬೇಕು~ ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ ದ್ವಾರಕೀಶ್ ಹಾಗೂ ನಟಿ ಮಾಲಾಶ್ರೀ ಅವರಿಗೆ ಎನ್.ಟಿ.ಆರ್. ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು.ಮಾಜಿ ಸಚಿವ ಎಂ.ರಘುಪತಿ, ಕರ್ನಾಟಕ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಆರ್.ವಿ.ಹರೀಶ್, ಯಶಸ್ವಿನಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಆರ್.ಉಮಾಪತಿ ನಾಯ್ಡು, ಚಿಂತಾಮಣಿಯ ವಿ.ಆರ್.ವಿಷ್ಣು ಕುಮಾರ್, ವಿ.ಆರ್.ರಮೇಶ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎನ್.ಟಿ. ರಾಮರಾವ್ ಅವರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.