ಬುಧವಾರ, ಜೂನ್ 16, 2021
23 °C
ಉಗ್ರ ಕರೀಂ ತುಂಡಾ ಬಿಚ್ಚಿಟ್ಟ ಮಾಹಿತಿ

ದಾವೂದ್‌, ಎಲ್‌ಇಟಿ ನಡುವೆ ನಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಭೂಗತಪಾತಕಿ ದಾವೂದ್‌ ಇಬ್ರಾಹಿಂ, ಲಷ್ಕರ್‌–ಎ–ತೈಯ­ಬಾ (ಎಲ್‌ಇಟಿ), ಇಂಡಿಯನ್ ಮುಜಾಹಿದೀನ್‌(ಐಎಂ) ಹಾಗೂ ಬಬ್ಬರ್‌ ಖಲ್ಸಾ ಇಂಟರ್‌ ನ್ಯಾಷನಲ್‌ (ಬಿಕೆಐ)  ನಡುವೆ ಸಂಪರ್ಕವಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.  ಅಬ್ದುಲ್‌ ಕರೀಂ ತುಂಡಾ ವಿಚಾರಣೆಯಿಂದ ಈ ಸ್ಫೋಟಕ ಮಾಹಿತಿ ಹೊರಬಂದಿದೆ.ತುಂಡಾ ವಿರುದ್ಧ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪಪಟ್ಟಿ ದಾಖಲಿಸಿದ್ದು, ತುಂಡಾ 2002ರಲ್ಲಿ ಪಾಕಿಸ್ತಾನದಲ್ಲಿ ಬಿಕೆಐ ಮೂಲಕ ದಾವೂದ್‌ನನ್ನು ಭೇಟಿಯಾಗಿದ್ದಾನೆ. ಈ ವೇಳೆ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಕುರಿತು ಚರ್ಚೆ ನಡೆಸಿದ್ದಾನೆ ಎಂದು ಹೇಳಿದ್ದಾರೆ. 2002ರಲ್ಲಿ ತುಂಡಾ, ದಾವೂದ್‌ನನ್ನು ಕರಾಚಿಯ ಆತನ ಮನೆಯಲ್ಲಿ ಸಂಪರ್ಕಿಸಿದ್ದಾನೆ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಭರತ್‌ ಪರಾಶರ್‌ ಅವರಿಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.