ಏಟ್ರಿಯಾ ಹೋಟೆಲ್ನ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂದ ಬೆಳಕು ಚೆಲ್ಲುತ್ತಿತ್ತು. ಅಲ್ಲೊಬ್ಬ ಭಾರತೀಯ ಹೆಣ್ಣು ಮಗಳು ಕೀಬೋರ್ಡ್ನಿಂದ ಹೊಮ್ಮುತ್ತಿದ್ದ ಸಂಗೀತಕ್ಕೆ ಅನುಗುಣವಾಗಿ ಹಾಡುತ್ತಿದ್ದಳು. ಆಕೆಯ ಶಾರೀರದಲ್ಲಿ ವಿದೇಶಿ ಸಂಗೀತದ ಅಬ್ಬರವಿದ್ದರೂ ಕೇಳಲು ಹಿತವಾಗಿತ್ತು.

ಅದು ದೀಪಂ ಸಿಲ್ಕ್ ಹೊರ ತಂದಿರುವ ಯುಗಾದಿ ಸಂಗ್ರಹದ ಅನಾವರಣ ಸಂದರ್ಭ. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮೈಕ್ ಕೈಗೆತ್ತಿಕೊಂಡಾಕ್ಷಣ ಆ ಹುಡುಗಿ ಹಾಡುವುದನ್ನು ನಿಲ್ಲಿಸಿದಳು.

ಅದೇ ಸಮಯಕ್ಕೆ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ಸ್ಗೆ ಲಗ್ಗೆ ಇಟ್ಟಿರುವ ನಿಶಾ ಬ್ರಹ್ಮಾನಂದ್ ಚಿನ್ನದ ಬಾರ್ಡರ್ ಹಾಗೂ ಕಸೂತಿಯುಳ್ಳ ಮೆಜೆಂತಾ ಬಣ್ಣದ ಸೀರೆಯುಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ವಯ್ಯಾರದಿಂದ ವಿವಿಧ ಕೋನದಲ್ಲಿ ಸೀರೆ ಪ್ರದರ್ಶಿಸಿದರು. ಇವರಿಗೆ ಸಾಥ್ ನೀಡಿದ್ದು ಮತ್ತೊಬ್ಬ ರೂಪದರ್ಶಿ ರೈಸಾ ವಿಲ್ಸನ್.

ನೆರಿಗೆಗಳು ಚಿಮ್ಮದಂತೆ ಗಂಭೀರವಾಗಿ ನಡೆಯುತ್ತಲೇ ಸೀರೆಯ ಸೆರಗಿನ ಬೆರಗನ್ನು ವಿವಿಧ ಕೋನಗಳಲ್ಲಿ ತೋರಿದರು.

ದೀಪಂ ಸಿಲ್ಕ್ಸ್ನ ಯುಗಾದಿ ಸಂಗ್ರಹ ಅನಾವರಣಕ್ಕೆ ಕಳೆ ಕಟ್ಟಿದ್ದು ಸ್ಯಾಂಡಲ್ವುಡ್ ತಾರೆ ಐಂದ್ರಿತಾ ರೇ. ಐಂದ್ರಿತಾ ಕೂಡ ದೀಪಂ ಸಿಲ್ಕ್ಸ್ನ ಚಿನ್ನದ ಜರಿಯುಳ್ಳ ಕಡು ನೀಲಿ ಬಣ್ಣದ ಸೀರೆಯುಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಫೋಟೋಗೆ ಪೋಸ್ ನೀಡಿದರು.

ರ್ಯಾಂಪ್ ಮೇಲೆ ಮೂವರು ರೂಪದರ್ಶಿಗಳು ನಿಂತಾಕ್ಷಣ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಮಾತನಾಡತೊಡಗಿದರು. `ಐಂದ್ರಿತಾ ಉಟ್ಟಿರುವುದು ದೀಪಂ ಸಿಲ್ಕ್ಸ್ನ ಅದ್ಧೂರಿ ಸೀರೆಗಳಲ್ಲಿ ಒಂದು.

ಈ ಸೀರೆಯ ಬಾರ್ಡರ್ಗೆ ಪರಿಶುದ್ಧ ಚಿನ್ನದೆಳೆಯಿಂದಲೇ ಮಾಡಲಾಗಿದೆ. ಹೆಣ್ಣಿನ ಸೌಂದರ್ಯವನ್ನು ಇಮ್ಮಡಿಗೊಳಿಸುವಂತಿರುವ ಈ ಸೀರೆಗಳು ವೈಭವದ ಸಂಕೇತ. ಯುಗಾದಿ ಹಬ್ಬಕ್ಕೆ ಹೇಳಿ ಮಾಡಿಸಿದಂತಿವೆ ಎಂದು ಮಾಹಿತಿಯನ್ನು ಬಿಚ್ಚಿಟ್ಟರು ಹಾಗೂ ನಿಶಾ ಮತ್ತು ರೈಸಾ ಉಟ್ಟಿದ್ದ ಸೀರೆಗಳ ವೈಶಿಷ್ಟ್ಯದ ಗುಣಗಾನವನ್ನೂ ಮಾಡಿದರು.

`ನಮಗೆಲ್ಲಾ ಹೊಸ ವರ್ಷ ಶುರುವಾಗುವುದು ಯುಗಾದಿಯಿಂದ. ಹೊಸ ವರ್ಷವನ್ನು ಹೊಸ ಬಟ್ಟೆ ತೊಟ್ಟು ಸ್ವಾಗತಿಸುವುದು ನಮ್ಮ ಸಂಪ್ರದಾಯ. ಅದಕ್ಕೆಂದೇ ದೀಪಂ ಸಿಲ್ಕ್ಸ್ ಮನಸೆಳೆಯುವ ಮೋಹಕ ಶ್ರೇಣಿಯ ಹಬ್ಬದ ಸಂಗ್ರಹವನ್ನು ಹೊರತಂದಿದೆ.

ಹೊಸ ವಿನ್ಯಾಸದ ಯುಗಾದಿ ಕಲೆಕ್ಷನ್ ಈ ಮೊದಲು ಅರಮನೆ ಮೈದಾನದಲ್ಲಿ ನಡೆದ `ಸಂಡೇ ಸೋಲ್~ ಸಂತೆಯಲ್ಲಿ ಪ್ರದರ್ಶನಗೊಂಡು ಜನರಿಂದ ಮೆಚ್ಚುಗೆ ಪಡೆದಿವೆ. ಮಹಿಳೆಯರು ದೀಪಂ ಸಿಲ್ಕ್ನಲ್ಲಿ ಸೀರೆ ಕೊಳ್ಳಲು ಅನೇಕ ಕಾರಣಗಳಿವೆ.

ಒಂದು ದೀಪಂ ಸಿಲ್ಕ್ ಪ್ರತಿ ವರ್ಷ ವೈವಿಧ್ಯಮಯ ಸಂಗ್ರಹವನ್ನು ಹೊರತರುತ್ತದೆ. ಜತೆಗೆ ನೇಯ್ಗೆಯಲ್ಲಿ ನೈಪುಣ್ಯ ಸಾಧಿಸಿರುವ ನೇಕಾರರಿಂದಲೇ ಆಕರ್ಷಕ ವಿನ್ಯಾಸದ ಸೀರೆ ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಹಾಗೂ ಗಾಢ ಬಣ್ಣಗಳನ್ನು ಬಳಸುವುದರಿಂದ ಪಾರಂಪರಿಕ ನೋಟ ಸಿಗುತ್ತದೆ~ ಎನ್ನುತ್ತಾರೆ ದೀಪಂ ಸಿಲ್ಕ್ ಸಿಇಒ ಸ್ವರೂಪ್.

`ದೀಪಂ ಸಿಲ್ಕ್ಸ್ ಕಾಂಚೀವರಂ, ಉಪ್ಪಾಡ್ಸ್, ಗದ್ವಾಲ್ಸ್, ಡೀಸೈನರ್ಸ್ ಎಂಬ್ರಾಯಿಡರಿ ಜತೆಗೆ ವೈವಿಧ್ಯಮಯ ಬೇಸಿಗೆ ಸಂಗ್ರಹವನ್ನು ಹೊರತಂದಿದೆ. ಈ ಯುಗಾದಿಗೆಂದು ವಿನ್ಯಾಸಗೊಳಿಸಿರುವ ಸೀರೆಗಳು ಎಲ್ಲ ಕಾಲಕ್ಕೂ ಹೊಂದುವಂತಿವೆ. ಮದುವೆ ಸಮಾರಂಭ, ರಿಸೆಪ್ಷನ್, ಕಾಕ್ಟೇಲ್ ಪಾರ್ಟಿಗಳಿಗೂ ಹೇಳಿ ಮಾಡಿಸಿದಂತಿವೆ~ ಎನ್ನುತ್ತಾರೆ ಅವರು.

ಈ ಸೀರೆಗಳಲ್ಲಿ ಕುಂದನ್, ಜರ್ದೋಸಿ, ರೇಶಮ್ ಕಸೂತಿ ಕಲೆ ನಳನಳಿಸುತ್ತಿದ್ದು ವೈವಿಧ್ಯಮಯ ಬಣ್ಣಗಳಲ್ಲಿ ಲಭ್ಯ. ಬೇಸಿಗೆಗೆಂದು ವೈಬ್ರೆಂಟ್ ಸಮ್ಮರ್ ಶೇಡ್ಗಳು ಲಭ್ಯವಿದೆ. ಇವೆಲ್ಲದರ ಜತೆಗೆ ಮದುಮಗಳ ರೂಪ ಲಾವಣ್ಯವನ್ನು ಹೆಚ್ಚಿಸುವ ಆಕರ್ಷಕ ಸೀರೆಗಳು ಇಲ್ಲಿವೆ.

ದೀಪಂ ಸಿಲ್ಕ್ ಸೀರೆಗಳು ಮದುವೆ ಸಮಾರಂಭದ ಪ್ರತಿಕ್ಷಣವನ್ನು ಸೆರೆಹಿಡಿದು ಕೊಡುತ್ತದೆ. ಇಷ್ಟು ಸಂಗ್ರಹಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ.

ಸಾಂಪ್ರಾಯಿಕತೆಯ ಸೊಗಡಿಗೆ ಸಮಕಾಲೀನ ಫ್ಯಾಷನ್ ಅಡಕಗೊಳಿಸಿ ವಿನ್ಯಾಸಗೊಳಿಸಿರುವುದು ದೀಪಂ ಸಿಲ್ಕ್ನ ಅಗ್ಗಳಿಕೆ. ಇದೇ ಈ ಸೀರೆಗಳಿಗೊಂದು ಸೊಬಗು ತಂದು ಕೊಟ್ಟಿದೆ ಎನ್ನುವುದು ಪ್ರಸಾದ್ ಅವರ ಅಭಿಪ್ರಾಯ.
ಸ್ಥಳ: ಎಂಜಿ ರಸ್ತೆ ಹಾಗೂ ಜಯನಗರ 3ನೇ ಹಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.