ನವದೆಹಲಿ (ಪಿಟಿಐ): ರಾಷ್ಟ್ರಪತಿ ಭವನದ ಆವರಣದಲ್ಲಿರುವ ನವೀಕೃತ ವಾಣಿಜ್ಯ ಸಂಕೀರ್ಣವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮಂಗಳವಾರ ಉದ್ಘಾಟಿಸಿದರು.

ಹೊಸ ವಾಣಿಜ್ಯ ಸಂಕೀರ್ಣದಲ್ಲಿ ಸಫಲ್ ಮಾರಾಟ ಮಳಿಗೆ ಮತ್ತು ಕೇಂದ್ರೀಯ ಭಂಡಾರ್ ಸೇರಿದಂತೆ ಎಂಟು ಮಳಿಗೆಗಳಿವೆ. ಸಮಾರಂಭದಲ್ಲಿ ಪಾಲ್ಗೊಂಡಿದ್ದ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಎಲ್ಲ ಮಳಿಗೆಗಳಿಗೂ ಭೇಟಿ ನೀಡಿ, ಮಳಿಗೆ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು.

ಈ ಮಳಿಗೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ರಾಷ್ಟ್ರಪತಿ ಭವನದ ಅಂಗಳದಲ್ಲಿದ್ದವು. ಇವುಗಳಲ್ಲಿ ಆರು ಮಳಿಗೆಗಳನ್ನು ಇತ್ತೀಚೆಗಷ್ಟೇ ವ್ಯಾಪಾರಕ್ಕಾಗಿ ಬಿಟ್ಟುಕೊಡಲಾಗಿತ್ತು. ಹೊಸದಾಗಿ ಆರಂಭವಾದ ಮಳಿಗೆಗಳಲ್ಲಿ ಸಫಲ್ ಮಾರುಕಟ್ಟೆ, ಕೇಂದ್ರೀಯ ಭಂಡಾರ್ ಮತ್ತು ಶಕ್ತಿ ಹಾತ್ ಅಂಗಡಿಗಳನ್ನು ತೆರೆಯಲಾಗಿದೆ. ಇವುಗಳ ಜೊತೆಗೆ ಬ್ಯೂಟಿ ಪಾರ್ಲರ್, ಕ್ಷೌರದ ಮಳಿಗೆ ಕೂಡ ಇದೆ.

ರಾಷ್ಟ್ರಪತಿ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಪತ್ನಿಯರು ಸೇರಿ ಸ್ವಸಹಾಯ ಸಂಘ ರಚಿಸಿಕೊಂಡಿದ್ದರೆ. ಆ ಸಂಘದ ಸದಸ್ಯರು ತಯಾರಿಸಿದ ಗೃಹೋತ್ಪನ್ನಗಳಾದ ಮಸಾಲೆ ಪುಡಿ, ಸಾವಯವ ಗೊಬ್ಬರ ಮತ್ತು ಕೈಯಿಂದ ತಯಾರಿಸಿದ ಕವರ್ಗಳನ್ನು ಹೊಸ ವಾಣಿಜ್ಯ ಸಂಕೀರ್ಣದಲ್ಲಿರುವ `ಶಕ್ತಿ ಹಾತ್' ಮಳಿಗೆಯಲ್ಲಿ ಮಾರಾಟಕ್ಕಿಡಲಾಗಿದೆ.

ವಾಣಿಜ್ಯ ಸಂಕೀರ್ಣ ಉದ್ಘಾಟಿಸಿದ ನಂತರ ಮಳಿಗೆಗಳಿಗೆ ಭೇಟಿ ಕೊಟ್ಟ ರಾಷ್ಟ್ರಪತಿಯವರು, ಮಹಿಳಾ ಸಂಘದ ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು.
ರಾಷ್ಟ್ರಪತಿ ಭವನದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಬಹುದಿನಗಳ ಬೇಡಿಕೆಗೆ ಅನುಗುಣವಾಗಿ ಈ ವಾಣಿಜ್ಯ ಸಂಕೀರ್ಣವನ್ನು ತೆರೆಯಲಾಗಿದ್ದು, ಸಿಬ್ಬಂದಿಯ ನಿತ್ಯದ ಅವಶ್ಯಕತೆಗಳನ್ನು ಈ ಮಳಿಗೆಗಳು ಪೂರೈಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.