ಗುರುವಾರ , ಮಾರ್ಚ್ 4, 2021
20 °C

ದೇವದುರ್ಗ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ

ರಾಯಚೂರು: ದೇವದುರ್ಗ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ದಿವಂಗತ ವೆಂಕಟೇಶ ನಾಯಕ ಅವರ ಕಿರಿಯ ಪುತ್ರ ರಾಜಶೇಖರ ನಾಯಕ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರು ಬುಧವಾರ ಉಮೇದುವಾರಿಕೆ ಸಲ್ಲಿಸಿದರು.

‌ಉಭಯ ಅಭ್ಯರ್ಥಿಗಳು ತಂತಮ್ಮ ಕೆಲವೇ ಬೆಂಬಲಿಗರೊಟ್ಟಿಗೆ ಬುಧವಾರ ಬೆಳಿಗ್ಗೆ ಮುಹೂರ್ತ ಸಹಿತ ನಾಮಪತ್ರಗಳನ್ನು ಸಲ್ಲಿಸಿದರು.

ಇದಾದ ಬಳಿಕ ಅಭ್ಯರ್ಥಿದ್ವಯರು ಪಕ್ಷದ ಮುಖಂಡರೊಟ್ಟಿಗೆ ಬೃಹತ್ ಸಂಖ್ಯೆಯ ಬೆಂಬಲಿಗರ ಸಹಿತ ಮೆರವಣಿಗೆಯೊಂದಿಗೆ ಬಂದು ಮತ್ತೊಂದು ಸುತ್ತು ಉಮೇದುವಾರಿಕೆಗಳನ್ನು ಸಲ್ಲಿಸಿದರು.

ಸೋಮವಾರವೇ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಗೋಪಾಲಕೃಷ್ಣ ಅವರು ಲಿಂಗಸೂರು ಉಪವಿಭಾಗಾಧಿಕಾರಿಯೂ ಆಗಿರುವ  ಚುನಾವಣಾಧಿಕಾರಿ ಆರ್‌.ಚೆಲುವಮಣಿ ಅವರಿಗೆ ಸೋಮವಾರ ಇನ್ನೊಂದು ಸುತ್ತು ನಾಮಪತ್ರ ಸಲ್ಲಿಸಿದರು.

ಫೆಬ್ರುವರಿ 13ರಂದು ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದೆ.

ಕಾಂಗ್ರೆಸ್‌ ಶಾಸಕರಾಗಿದ್ದ ವೆಂಕಟೇಶ ನಾಯಕ ಅವರು ರೈಲು ಅಪಘಾತದಲ್ಲಿ ಮೃತಪಟ್ಟಿದ್ದರಿಂದ ದೇವದುರ್ಗ ಸ್ಥಾನ ಖಾಲಿಯಾಗಿತ್ತು. ಈ ಕ್ಷೇತ್ರಕ್ಕೆ ಅವರ ಕಿರಿಯ ಪುತ್ರ ರಾಜಶೇಖರ ನಾಯಕ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.