ಭಾನುವಾರ, ಜೂನ್ 20, 2021
28 °C

ದೇವಾಲಯಗಳು ಊರಿನ ಕಣ್ಣುಗಳಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದಿಯಡ್ಕ: `ಪ್ರತಿಯೊಂದು ಊರಿನಲ್ಲೂ ಇರುವ ದೇವಾಲಯಗಳು ಊರಿಗೆ ಕಣ್ಣುಗಳಂತೆ ಕೆಲಸ ಮಾಡುತ್ತದೆ. ಯುಗಾದಿಯ ದಿನ ಏತಡ್ಕ ಸದಾಶಿವ ಕ್ಷೇತ್ರದ ಭೋಜನಶಾಲೆ ಲೋಕಾರ್ಪಣೆ ಆಗಿರುವುದು ಔಚಿತ್ಯಪೂರ್ಣ~ ಎಂದು ಪತ್ತಡ್ಕ ಗಣಪತಿ ಭಟ್ ಹೇಳಿದರು.ಏತಡ್ಕದ ಸದಾಶಿವ ಕ್ಷೇತ್ರದ ನೂತನ ಭೋಜನ ಶಾಲೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಡಾ.ವೈ. ಸುಬ್ರಾಯ ಭಟ್ ವಹಿಸಿದ್ದರು.ಕಾರ್ಯಕ್ರಮದಲ್ಲಿ ಕಾರಿಂಜ ಹಳೆಮನೆ ಶಿವರಾಮ ಭಟ್, ಕೈಂತಜೆ ಶಂಕರಿ ಅಮ್ಮ, ಡಾ.ಪ್ರಕಾಶ್ ವೈ, ಸ್ತುತಿ ಏತಡ್ಕ, ಚಂದ್ರಶೇಖರ ಏತಡ್ಕ, ಟಿ.ಶಂಕರನಾರಾಯಣ ಭಟ್, ವೈ. ವೆಂಕಟ್ರಮಣ ಭಟ್ ಇದ್ದರು.

 

ಈ ಸಂದರ್ಭದಲ್ಲಿ ಭೋಜನ ಶಾಲೆಯ ತಾಂತ್ರಿಕ ಸಲಹೆಗಾರ ಕಿನಿಲ ರವಿ ಅವರಿಗೆ ನೀಡಿದ ಸನ್ಮಾನವನ್ನು ಉಷಾ ನಂಜನಗೂಡು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಗಮಕ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಡೆದ ಗಮಕ ಕಾರ್ಯಕ್ರಮದಲ್ಲಿ ವಿದ್ವಾನ್ ಕೈಂತಜೆ ನರಸಿಂಹ ಭಟ್ `ಪಾಶುಪತ ಪ್ರದಾನ~ ಕುರಿತಾದ ಕಾವ್ಯವಾಚನ ಮಾಡಿದರು. ಮುಖ್ಯ ಶಿಕ್ಷಕ ನರಹರಿ ವ್ಯಖ್ಯಾನ ನೀಡಿದರು. ನಂತರ ಕಳತ್ತೂರಿನ ಮಹಾದೇವಿ ಮಹಿಳಾ ಭಜನಾ ಸಂಘದ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.