ಸೋಮವಾರ, ಮೇ 10, 2021
27 °C

ನಂಜನಗೂಡು ಪುರಸಭೆ: ರೂ.1.74 ಕೋಟಿ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: ಇಲ್ಲಿನ ಪುರಸಭೆಯಲ್ಲಿ ಈಚೆಗೆ ನಡೆದ ಆಯ-ವ್ಯಯ ಮಂಡನೆ ಸಭೆಯಲ್ಲಿ ಅಧ್ಯಕ್ಷ ಬಿ.ಚೆಲುವರಾಜು ಅವರು 2012-13ನೇ ಸಾಲಿಗೆ 1.74 ಕೋಟಿ ರೂಪಾಯಿ ಉಳಿತಾಯ ಬಜೆಟ್ ಮಂಡಿಸಿದರು.



ಎಸ್‌ಎಫ್‌ಸಿ ಅನಿರ್ಬಂಧಿತ ಅನುದಾನದಿಂದ ರೂ.3 ಕೋಟಿ, ಇತರೆ ಉದ್ದೇಶದ ಅನುದಾನದಿಂದ ರೂ. 1.66 ಕೋಟಿ, ನೀರು ಮತ್ತು ಒಳಚರಂಡಿ ಶುಲ್ಕದಿಂದ ರೂ. 25 ಲಕ್ಷ, ಆಸ್ತಿ ತೆರಿಗೆಯಿಂದ ರೂ. 60 ಲಕ್ಷ ಸೇರಿದಂತೆ ಒಟ್ಟು ರೂ. 15.64 ಕೋಟಿ ಆದಾಯ ನಿರೀಕ್ಷಿಸಲಾಗಿದೆ.



ಕಟ್ಟಡ ನಿರ್ಮಾಣಕ್ಕೆ ರೂ. 1.20 ಕೋಟಿ, ಭಾರಿ ವಾಹನಗಳ ಖರೀದಿಗೆ ರೂ. 30 ಲಕ್ಷ, ಜೆಸಿಬಿ ಮತ್ತು ಒಳಚರಂಡಿ ಸ್ವಚ್ಛತೆಯ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರ ಖರೀದಿಗೆ ರೂ. 48 ಲಕ್ಷ, ಬೀದಿ ದೀಪಗಳ ಬಲ್ಬ್ ಖರೀದಿಗೆ 45 ಲಕ್ಷ, ಬೀದಿ ದೀಪಗಳ ದುರಸ್ತಿ, ನಿರ್ವಹಣೆಗೆ 2.30 ಲಕ್ಷ, ಶೇ 22.75ರ ಮೀಸಲು ಹಣ 71.48 ಲಕ್ಷ, ಶೇ 7.25 ರ ಮೀಸಲಿಗೆ 2.27 ಲಕ್ಷ ಸೇರಿ ರೂ. 13.90 ಕೋಟಿ ಖರ್ಚು ಮಾಡಲು ನಿರ್ಧರಿಸಲಾಗಿದೆ ಎಂದು ಚೆಲುವರಾಜು ಸಭೆಗೆ ತಿಳಿಸಿದರು.



ಮುಖ್ಯಾಧಿಕಾರಿ ಡಿ.ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಖಾಲೀದ್‌ಅಹಮದ್, ಸದಸ್ಯರಾದ ಕೆ.ಜಿ.ಆನಂದ್, ಸುಧಾ, ಅಲಮೇಲು, ರಾಜೇಶ್ವರಿ, ಶ್ರೀಕಂಠಜೋಯಿಸ್, ಸೈಯದ್ ನಾಸಿರ್, ಎನ್.ಆರ್.ದೊರೆಸ್ವಾಮಿ, ಚಂದ್ರಶೇಖರ್, ವಿಜಯಾಂಬಿಕಾ, ಸಿ.ಎಂ.ಶಂಕರ್, ಆರ್.ರಾಜು, ದೊಡ್ಡಮಾದಯ್ಯ, ಜಿ.ಮುಹೀರ್ ಅಹಮದ್  ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.