ಭಾನುವಾರ, ಮೇ 9, 2021
25 °C
ಲೋಕಸಭಾ ಚುನಾವಣೆ:

ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ರಿ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪೊಲೀಸರು ಮುಕ್ತ ಶಾಂತಿಯುತ ಮತದಾನಕ್ಕಾಗಿ ಸಿದ್ಧತೆ ಗಳನ್ನು ನಡೆಸುತ್ತಿದ್ದಾರೆ.

ನಕ್ಸಲ್ ಪೀಡಿತ ಅತೀ ಸೂಕ್ಷ್ಮ ಪ್ರದೇಶದ ಮತಗಟ್ಟೆಗಳಿಗೆ ಪೊಲೀಸ್ ವಿಶೇಷ ಭದ್ರತೆ ಒದಗಿಸಲು ಬಂಕರ್ ನಿರ್ಮಾ ಣಕ್ಕಾಗಿ ಹೆಬ್ರಿ ಪೊಲೀಸರು ಗೋಣಿ ಚೀಲದಲ್ಲಿ ಮರಳು ತುಂಬಿಸಿ ಸನ್ನದ್ಧ ಸ್ಥಿತಿಯಲ್ಲಿರಿಸಿದ್ದಾರೆ.ಜಿಲ್ಲಾ ಚುನಾವಣಾಧಿಕಾರಿಗಳಾದ ಉಡುಪಿ ಜಿಲ್ಲಾಧಿಕಾರಿ ಡಾ.ಮುದ್ದು ಮೊೀಹನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಬಿ. ಬೋರ ಲಿಂಗಯ್ಯ ಅವರು ನಕ್ಸಲ್ ಪೀಡಿತ ಅತೀ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.ನಿರಂತರ ಕೂಂಬಿಂಗ್: ಲೋಕಸಭಾ ಚುನಾವಣೆ ಘೋಷಣೆ ಯಾದ ಬಳಿಕ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ನಕ್ಸಲ್ ನಿಗ್ರಹ ಯೋಧರ ಕೂಂಬಿಂಗ್ ನಡೆಯುತ್ತಿದೆ.ಕೇರಳ ಪೊಲೀಸ್: ಚುನಾವಣೆಗೆ ವಿಶೇಷ ಭಧ್ರತೆ ನೀಡುವ ಹಿನ್ನೆಲೆಯಲ್ಲಿ ಸುಮಾರು 80 ಕೇರಳ ರಾಜ್ಯ ಪೊಲೀ ಸರು ವಾರದ ಹಿಂದೆಯೇ ಹೆಬ್ರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಚುನಾವಣೆಗೆ ಮೂರ್ನಾಲ್ಕು ದಿನವಿರುವಾಗ ಹೊರ ರಾಜ್ಯದ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿತ್ತು. ಆದರೆ ಈ ಭಾರಿ ಹಲವು ದಿನ ಇರುವಾಗಲೇ ಪೊಲೀಸ ರನ್ನು ನಿಯೋಜಿಸಿರುವುದು ವಿಶೇಷವಾ ಗಿತ್ತು. ಹೆಬ್ರಿ ಪೊಲೀಸರು ಚುನಾವಣೆಗೆ ಭದ್ರತೆಯ ಹೊಣೆಹೊತ್ತು ಸನ್ನದ್ದರಾಗಿ ದ್ದಾರೆ. ನಕ್ಸಲ್ ನಿಗ್ರಹ ದಳ  ಹದ್ದಿನ ಕಣ್ಣಿಟ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.