ಶುಕ್ರವಾರ, ಜೂನ್ 25, 2021
29 °C

ನಗರದಲ್ಲಿ ಇನ್ವಿಟೇಶನ್ ಕಪ್ ರೇಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಪ್ರತಿಷ್ಠಿತ ರೇಸ್ `ಇನ್ವಿಟೇಶನ್ ಕಪ್~ ಈ ಬಾರಿ ಮಾರ್ಚ್ ನಾಲ್ಕರಂದು ಉದ್ಯಾನ ನಗರಿಯಲ್ಲಿ ನಡೆಯಲಿದೆ. ಈ ರೇಸ್‌ನಲ್ಲಿ ಗೆಲ್ಲುವ ಕುದುರೆಯು ಮೂರು ಲಕ್ಷ ಮೌಲ್ಯದ ಟ್ರೋಫಿಯೊಂದಿಗೆ 60 ಲಕ್ಷ ರೂ. ಬಹುಮಾನವನ್ನು ತನ್ನ ಮಾಲೀಕನಿಗೆ ದೊರೆಕಿಸಿ ಕೊಡಲಿದೆ.ಇದರ ಜೊತೆಗೆ `ಸ್ಪ್ರಿಂಟರ್ಸ್ ಕಪ್~ ಮತ್ತು `ಸ್ಟೇಯರ್ಸ್ ಕಪ್~ ಹಾಗೂ ಇನ್ನಿತರ ರೇಸ್‌ಗಳು ಮಾ. 3ರಂದು ನಡೆಯಲಿದ್ದು, ರೇಸ್ ಪ್ರೇಮಿಗಳಿಗೆ ಈ ವಾರದ `ಇನ್ವಿಟೇಶನ್ ಕಪ್ ವಾರಾಂತ್ಯ~ದ ರೇಸ್ ರೋಚಕ ಅನುಭವ ನೀಡಲಿದೆ.ಈ ರೇಸ್ ಸರದಿಯಂತೆ ವರ್ಷಕ್ಕೊಮ್ಮೆ ಮುಂಬೈ, ಕೋಲ್ಕತ್ತ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಡೆಯುತ್ತದೆ. ಈ ವರ್ಷ `ಇನ್ವಿಟೇಶನ್ ಕಪ್~ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಇಲ್ಲಿ ನಡೆಯುತ್ತಿರುವುದು ಬೆಂಗಳೂರು ಟರ್ಫ್ ಕ್ಲಬ್‌ಗೆ (ಬಿಟಿಸಿ) ಮೆರುಗು ತಂದಿದೆ.ಏಕೆಕೆ ಎಂಟರ್‌ಪ್ರೈಸಸ್ ಈ ರೇಸ್ ಪ್ರಾಯೋಜಿಸುತ್ತಿದೆ. ಹಾಗಾಗಿ ಇದನ್ನು `ಏ.ಕೆ.ಕೆ. ಎಂಟರ್‌ಟೈನ್‌ಮೆಂಟ್ ಗೋಲ್ಡನ್ ಜುಬಿಲಿ ಇಂಡಿಯನ್ ಟರ್ಫ್ ಇನ್ವಿಟೇಶನ್ ಕಪ್~ ಎಂದು ನಾಮಕರಣ ಮಾಡಲಾಗಿದೆ.  ಈ ವಾರಾಂತ್ಯದ ಎಲ್ಲಾ ರೇಸ್‌ಗಳ ಬಹುಮಾನದ ಮೊತ್ತವು ಮೂರೂವರೆ ಕೋಟಿ ರೂ. ಮೀರಲಿದೆ.

`ಇನ್ವಿಟೇಶನ್ ಕಪ್‌ನ ಈ ಸುವರ್ಣ ಮಹೋತ್ಸವನ್ನು ಪ್ರಾಯೋಜಿಸುತ್ತಿರುವುದು ತಮಗೆ ಹೆಮ್ಮೆ ತಂದಿದೆ~ ಎಂದು ಏಕೆಕೆ ಎಂಟರ್‌ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ತಿಳಿಸಿದರು.`ಬಿಟಿಸಿ ಒಂದು ವೇಳೆ ಹಾಲಿ ಸ್ಥಳದಿಂದ ಬೇರೆಡೆಗೆ ಸ್ಥಳಾಂತರವಾದರೆ ಬೆಂಗಳೂರಿನ ಹೊರ ಭಾಗದಲ್ಲಿರುವ ಬಿಡದಿ, ಕೆಂಗೇರಿ ಅಥವಾ ಮಾಗಡಿ ರಸ್ತೆ ಬಳಿ ಇರುವ ತಮ್ಮ ಸ್ವಂತ ಸ್ಥಳವನ್ನು ನೀಡುವುದಾಗಿ ಖೇಣಿ ಭರವಸೆ ನೀಡಿದ್ದಾರೆ~ ಎಂದು ಬಿಟಿಸಿ ಅಧ್ಯಕ್ಷ ಡಾ.ಕೆ.ಎಂ. ಶ್ರೀನಿವಾಸ ಗೌಡ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಚಿತ್ರನಟರಾದ ಸುದೀಪ್ ಮತ್ತು ಮಾಧುರಿ ಭಟ್ಟಾಚಾರ್ಯ ಉಪಸ್ಥಿತರ್ದ್ದಿದರು. ಇವರ ಸಮ್ಮುಖದಲ್ಲಿ `ಇನ್ವಿಟೇಶನ್ ಕಪ್~ ರೇಸ್‌ನಲ್ಲಿ ಸ್ಪರ್ಧಿಸುತ್ತಿರುವ ಒಂಬತ್ತು ಕುದುರೆಗಳ ಡ್ರಾ ನಂಬರ್ ತೆಗೆಯಲಾಯಿತು. ನಂತರ ಈ ವಾರಾಂತ್ಯದ ಪ್ರಮುಖ ನಾಲ್ಕು ರೇಸ್‌ನಲ್ಲಿ ಓಡುವ ಕುದುರೆಗಳಿಗೆ ಸಿಗಬಹುದಾದ ಅಂದಾಜು ಬೆಲೆಯನ್ನು `ಬಾತ್ಲಾ ಅಂಡ್ ಸನ್ಸ್~ ಬುಕ್‌ಮೇಕರ್ ಪ್ರಕಟಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.