ಗುರುವಾರ , ಮೇ 6, 2021
27 °C

ನಗರಸಭೆ ಮಂದಗತಿ ಧೋರಣೆ: ಸಚಿವರ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕುಡಿಯುವ ನೀರಿನ ಅಭಾವ ನಿವಾರಿಸುವ ಸಲುವಾಗಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿರುವ 50 ಲಕ್ಷ ರೂಪಾಯಿ ಅನುದಾನದಲ್ಲಿ ಎಲ್ಲ ವಾರ್ಡಿನಲ್ಲೂ ತಲಾ 2 ಕೊಳವೆ ಬಾವಿ ಕೊರೆಯುವ ವಿಚಾರದಲ್ಲಿ ನಗರಸಭೆ ಮಂದಗತಿಯ ಧೋರಣೆ ಅನುಸರಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಕಿಡಿಕಾರಿದರು.ನಗರದ ನಗರಸಭೆಗೆ ಬುಧವಾರ ಮಧ್ಯಾಹ್ನ ದಿಢೀರನೆ ಭೇಟಿ ನೀಡಿದ ಅವರು, ನಗರದ ಪ್ರತಿ ವಾರ್ಡ್‌ಗೂ 2 ಹೊಸ ಕೊಳವೆಬಾವಿ ಕೊರೆಸುವ ಹಾಗೂ ಹಳೆ ಕೊಳವೆಬಾವಿಗಳಿಗೆ ರಿಬೋರ್ ಮಾಡಿಸುವಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂದು ಆಯುಕ್ತೆ ಆರ್.ಶಾಲಿನಿ ಸೇರಿದಂತೆ ಅಧಿಕಾರಿಗಳಿಗೆ ಸೂಚಿಸಿದರು.ನಗರದಲ್ಲಿ 70 ಹೊಸ ಕೊಳವೆಬಾವಿ ಕೊರೆಯುವುದು, ಹಳೇ ಬೋರ್‌ಗಳಿಗೆ 25 ಪಂಪ್ ಮೋಟರ್ ಅಳವಡಿಸುವುದು ಹಾಗೂ 67 ಕೊಳವೆ ಬಾವಿಗಳ ರಿಬೋರ್ ಮಾಡಿಸಲು ರೂ.3 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೂಡಲೇ ಕ್ರಮ ಕೈಗೊಳ್ಳಿ ಎಂದರು.ಕಳೆದ ಬಾರಿಯ ಸಿಎಂ ಅನುದಾನದಲ್ಲಿ ಕೊರೆಸಲಾದ 14 ಕೊಳವೆಬಾವಿಗಳಿಗೆ ಪಂಪ್ ಮೋಟಾರ್ ಅಳವಡಿಸಲು ಕರೆದಿದ್ದ ಟೆಂಡರ್ ತಾಂತ್ರಿಕ ದೋಷದಿಂದ ವಿಫಲವಾಗಿರುವ ಹಿನ್ನೆಲೆಯಲ್ಲಿ  ಕೂಡಲೇ ಟೆಂಡರ್ ಇಲ್ಲದೆ ಸರ್ಕಾರದ ಬೆಲೆಯಲ್ಲಿಯೇ ಪಂಪ್ ಮೋಟಾರ್ ಅಳವಡಿಸಿ ಎಂದು ಅವರು ಸೂಚಿಸಿದರು. ಅಗತ್ಯ ಬಿದ್ದರೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ನಾಳೆ ವೇಳೆಗೆ ಪಂಪ್ ಮೋಟಾರ್ ಅಳವಡಿಸಿ ಎಂದು ಸೂಚಿಸಿದರು.ಜಿಲ್ಲೆಗೆ 100 ಪಂಪ್ ಮೋಟಾರ್‌ಗಳನ್ನು ತರಿಸಲಾಗುತ್ತಿದ್ದು ಅಗತ್ಯವಿದ್ದೆಡೆ ಅವುಗಳನ್ನು ಬಳಸಿ ನಂತರ ಹಣ ಪಾವತಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಹೀಗಾಗಿ ಅಗತ್ಯವಿರುವ ಕಡೆ ಕೂಡಲೇ ಪಂಪ್ ಮೋಟಾರ್ ಅಳವಡಿಸಿ ಎಂದು ನಗರಸಭೆ ಎಂಜಿನಿಯರ್ ಗೋಪಿನಾಥ್ ಅವರಿಗೆ ತಿಳಿಸಿದರು. ನಗರಸಭೆ ಅಧ್ಯಕ್ಷೆ ನಾಜಿಯಾ, ಉಪಾಧ್ಯಕ್ಷ ಎಲ್.ಖಲೀಲ್, ಸದಸ್ಯ ಸೋಮಶೇಖರ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.