ನವಜೋಡಿಗಳ ಕಲರವ

7

ನವಜೋಡಿಗಳ ಕಲರವ

Published:
Updated:
ನವಜೋಡಿಗಳ ಕಲರವ

ಚಾಮರಾಜನಗರ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷ.ಆಷಾಢ ಮಾಸದ ಹಿನ್ನೆಲೆಯಲ್ಲಿ ತವರು ಮನೆಗೆ ಹೆಣ್ಣುಮಗಳು ಬರುವುದು ಸಾಮಾನ್ಯ. ಈ ಅವಧಿಯಲ್ಲಿಯೇ ಚಾಮರಾಜೇಶ್ವರ ರಥೋತ್ಸವ ಕೂಡ ನಡೆಯುತ್ತದೆ. ಹೀಗಾಗಿ, ಮಾವನ ಮನೆಗೆ ಅಳಿಯ ಬರುತ್ತಾನೆ. ದಂಪತಿಯು ರಥಕ್ಕೆ ಜವನ-ಬಾಳೆಹಣ್ಣು ಎಸೆದರೆ ಕೌಂಟುಬಿಕ ಜೀವನ ಸುಖಕರವಾಗಿರುತ್ತದೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ನವಜೋಡಿಗಳ ಕಲರವ ಹೆಚ್ಚು. ಜಿಲ್ಲಾ ಕೇಂದ್ರ ಸೇರಿದಂತೆ ಅಕ್ಕಪಕ್ಕದ ಊರಿನ ನವಜೋಡಿಗಳು ದೇವರಿಗೆ ಭಕ್ತಿ ಸಮರ್ಪಿಸಿದರು.`ರಥಕ್ಕೆ ಜವನ-ಬಾಳೆಹಣ್ಣು ಎಸೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಇದು ನಮ್ಮ ಸಂಸ್ಕೃತಿ. ಹೀಗಾಗಿ, ಮನೆಯ ಹಿರಿಯರ ಸಲಹೆ ಮೇರೆಗೆ ಜಾತ್ರೆಗೆ ಬಂದಿದ್ದೇವೆ. ಜಾತ್ರಾ ಮಹೋತ್ಸವ ಖುಷಿ ನೀಡಿದೆ~ ಎಂದು ನವಜೋಡಿಗಳಾದ ಮಹೇಶ್ ಮತ್ತು ಆಶಾ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry