ಆಳಂದ: ಭಾರತದ ಭೂಮಿಯಲ್ಲಿ ಜನಿಸಿದರೂ 5 ಕೋಟಿ ಅಲೆಮಾರಿ ಮತ್ತು ಬುಡಕಟ್ಟು ವರ್ಗಗಳ ಜನತೆಗೆ ಈ ದೇಶದ ನಾಗರೀಕತ್ವ ಅಧಿಕಾರ ದೊರೆತ್ತಿಲ್ಲ ಎಂದು ಅಲೆಮಾರಿ ಮತ್ತು ಬುಡಕಟ್ಟು ರಾಷ್ಟ್ರೀಯ ಆಯೋಗದ ಮಾಜಿ ಅಧ್ಯಕ್ಷ ಬಾಲಕೃಷ್ಣ ರೇಣಕೆ ಖೇದ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮುಸ್ಲಿಂ ಮೈನಾರಿಟಿ ಮತ್ತು ಅಲೆಮಾರಿ ಬುಡಕಟ್ಟು ಸಮಾಜ, ಅಂಜುಮ ಎ ಮುಸ್ಲಾಮಿನ್ ಆಶ್ರಯದಲ್ಲಿ ಮಂಗಳವಾರ ಆಲ್ಫಾರುಕ್ ಶಾಲೆಯಲ್ಲಿ ಹಮ್ಮಿಕೊಂಡ ಸಚ್ಚಾರ ಮತ್ತು ರೇಣಕೆ ಆಯೋಗದ ವರದಿ ಕುರಿತ ವಿಚಾರ ಸಂಕೀರಣದಲ್ಲಿ ಮಾತನಾಡಿದರು.

ವಿಮುಕ್ತ ಜನಜಾತಿ ಎಂದು ಕರೆಯಲ್ಪಟುವ ಅಲೆಮಾರಿ, ಬುಡಕಟ್ಟು ವರ್ಗದ 13 ಕೋಟಿ ಜನಸಂಖ್ಯೆ ಭಾರತದಲ್ಲಿ ಅಸಹನೀಯವಾದ ರೀತಿಯಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಸುಡುಗಾಡ ಸಿದ್ಧ,ಪಾರ್ದಿ, ಗೊಂದಳಿಗ, ಹಾವಾಡಿಗರು, ಹೆಳವ ಹೀಗೆ 198 ಉಪಜಾತಿಗಳಲ್ಲಿ ಇಂದಿನವರೆಗೂ ಶೇ.94ರಷ್ಟು ಜನರಿಗೂ ಸರ್ಕಾರದ ಯಾವುದೇ ಸಾಲ, ಸೌಲಭ್ಯ ದೊರೆತ್ತಿಲ್ಲ. ಶೇ.98ರಷ್ಟು ಜನ ಬಡತನದ ರೇಖೆಗಿಂತ ಕೆಳಗಿದ್ದಾರೆ. ಇವರಲ್ಲಿ ಅನೇಕರಿಗೆ ಸ್ವಂತ ಮನೆ, ಆಸ್ತಿ ಮತ್ತು ಮತದಾನದ ಅಧಿಕಾರಿವೂ ಇಲ್ಲ ಎಂದು ರೇಣಕೆ ವಿವರಿಸಿದರು.

ಬುಡಕಟ್ಟು ಜನಾಂಗದ ಸ್ತ್ರೀಯರಿಗೆ ಶಿಕ್ಷಣವೇ ನೀಡುತ್ತಿಲ್ಲ. ಈ ಅಲೆಮಾರಿಗಳನ್ನು ಪೊಲೀಸ್ರು ಮತ್ತು ಸಾರ್ವಜನಿಕರು ಅಪರಾಧಿಗಳನ್ನಾಗಿ ಕಾಣುತ್ತಿದ್ದಾರೆ. ಇವರ ಪ್ರಗತಿಯಾಗದೇ ಹೊರೆತು ಭಾರತದ ಪ್ರಗತಿ ಸಾಧ್ಯವಿಲ್ಲ ಅದಕ್ಕಾಗಿ ಪ್ರತಿಯೊಂದು ರಾಜಕೀಯ ಪಕ್ಷಗಳು ಅಲೆಮಾರಿಗಳ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಬಾಳ ಕೃಷ್ಣ ರೇಣಕೆ ನುಡಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ಬಾಬುರಾವ ಅರುಣೋದಯ, ಧರ್ಮವೀರ ಚವ್ಹಾಣ ಮಾತನಾಡಿದರು.

ಮೌಲಾ ಮುಲ್ಲಾ ಅಧ್ಯಕ್ಷತೆ ವಹಿಸಿ ಅಲ್ಪಸಂಖ್ಯಾತ ಮತ್ತು ಬುಡಕಟ್ಟು ವರ್ಗಗಳ ಹಿತಾಶಕ್ತಿ ಕಾಪಾಡಲು ಜನಾಂದೋಲನ ರೂಪಿಸಿ ಹೋರಾಟ ಹಮ್ಮಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ಎಚ್.ಎಂ.ಪಟೇಲ್, ಧರ್ಮಣ್ಣ ಪೂಜಾರಿ, ಕಲ್ಯಾನಿ ತುಕಾಣೆ,ಮಹ್ಮದ ಅಲ್ಲಾವುದ್ದಿನ್ ಅನ್ಸಾರಿ. ಮದಸಾರ ಮುಲ್ಲಾ, ಮಲ್ಲಿಕಾರ್ಜುನ ಬೋಳಣಿ, ಅರುಣಕುಮಾರ ರೇಣಕೆ, ಬಶೀರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.