ಶುಕ್ರವಾರ, ಮೇ 7, 2021
26 °C

`ನಾಟಕದ ಯಶಸ್ಸಿಗೆ ತಂತ್ರಗಾರಿಕೆಯೂ ಕಾರಣ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಥಾವಸ್ತು, ಕಲಾವಿದರಷ್ಟೆ ಮುಖ್ಯವಾಗಿ ಪ್ರೇಕ್ಷಕರನ್ನು ಹಿಡಿದಿಡುವ ತಂತ್ರಗಾರಿಕೆಯೂ ನಾಟಕದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು.ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ  ಕಲಾಗ್ರಾಮದಲ್ಲಿ ನಡೆದ `ಮಲೆಗಳಲ್ಲಿ ಮದುಮಗಳು' ನಾಟಕೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿ, `ನಗರದ ಜನಜೀವನ ಒತ್ತಡದಿಂದ ಕೂಡಿದ್ದೂ, ಆಧುನಿಕ ಜೀವನ ಶೈಲಿಗೆ ಒಗ್ಗಿಹೋಗಿದೆ. ಹೀಗಿದ್ದೂ ಜನರು ನಾಟಕಗಳನ್ನು  ನೋಡಲು ಮುಂದೆ ಬಂದಿರುವುದು ರಂಗಕರ್ಮಿಗಳಿಗೆ ಪ್ರೋತ್ಸಾಹದಾಯಕ ಬೆಳವಣಿಗೆಯಾಗಿದೆ' ಎಂದು ಸಂತಸ ವ್ಯಕ್ತಪಡಿಸಿದರು.ಮಲೆಗಳಲ್ಲಿ ಮದುಮಗಳು ಎಂಬ ಮನೋಜ್ಞ ಕಾದಂಬರಿಯ ನಾಟಕ ರೂಪಾಂತರವನ್ನು ಪ್ರಕೃತಿಯ ಮಧ್ಯೆ ಸತತ 20ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವುದು ಸಾಧನೆಯೇ ಆಗಿದೆ' ಎಂದು ಶ್ಲಾಘಿಸಿದರು.ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.