ಸೋಮವಾರ, ಜನವರಿ 20, 2020
29 °C

ನಾಲ್ಕರ ಪೋರ ಐನ್‌ಸ್ಟಿನ್‌ನಷ್ಟೇ ಬುದ್ಧಿವಂತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಪಿಟಿಐ):  ಇಂಗ್ಲೆಂಡಿನ ನಾಲ್ಕು ವರ್ಷದ ಬಾಲಕನೊಬ್ಬ ಬೌದ್ಧಿಕ ಪರೀಕ್ಷೆಯಲ್ಲಿ ದಾಖಲೆಯ ಅಂಕಗಳನ್ನು ಗಳಿಸಿದ್ದು ಪ್ರಖ್ಯಾತ ಭೌತಶಾಸ್ತ್ರ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟಿನ್‌ ಅವರಷ್ಟೇ ಬುದ್ಧಿಮತ್ತೆ ಹೊಂದಿರುವುದು ಬೆಳಕಿಗೆ ಬಂದಿದೆ.

ದಕ್ಷಿಣ ಯಾರ್ಕ್‌ಷೈರ್‌ನ ಬಾರ್ನ್‌ಸ್ಲೇ ಮೂಲದ ಶೆರ್ವಿನ್‌ ಸರಾಬಿ ಬುದ್ಧಿಮತ್ತೆ ಪರೀಕ್ಷೆಯಲ್ಲಿ ಗರಿಷ್ಠ ಸಾಧ್ಯತೆಯ 160 ಅಂಕಗಳನ್ನು ಪಡೆದು ಮನಃಶಾಸ್ತ್ರಜ್ಞ­ರನ್ನು ದಂಗುಬಡಿಸಿದ್ದಾನೆ. ಶೆರ್ವಿನ್‌, ಖ್ಯಾತನಾಮರಾದ ಐನ್‌­ಸ್ಟಿನ್‌, ಬಿಲ್‌ ಗೇಟ್ಸ್‌ ಮತ್ತು ಸ್ಟಿಫನ್‌ ಹಾಕಿಂಗ್‌ ಅವರಿಗೆ ಸರಿಸಮಾನ ಬುದ್ಧಿ­ಸಾಮರ್ಥ್ಯ ಹೊಂದಿದ್ದಾನೆ ಎಂದು 'ಡೈಲಿ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)