ಶನಿವಾರ, ಜುಲೈ 31, 2021
25 °C

ನಾಲ್ಕು ನಿಟ್ಟಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಘೋರ ಪರಿಣಾಮ

ಎರಡು ದಶಕಗಳ ಅವಧಿಯಲ್ಲಿ ಪಂಜಾಬ್‌ನಲ್ಲಿ 35 ಸಾವಿರ ಜನರು ಭಯೋತ್ಪಾದನೆಯಿಂದ ಸತ್ತರು. ಭಯೋತ್ಪಾದಕರಿಗೆ ನೆರೆಯವರ ಬೆಂಬಲವಿತ್ತು. ಪಾಕ್ ಬೆಂಬಲಿತ ಭಯೋತ್ಪಾದನೆ ಪಂಜಾಬ್‌ನಲ್ಲಿ ಮತ್ತೆ ಆರಂಭವಾದರೆ ಪರಿಣಾಮ ಮಾತ್ರ ಘೋರ.

-ಅಮರೇಂದ್ರ ಸಿಂಗ್,

ಪಂಜಾಬಿನ ಮಾಜಿ ಮುಖ್ಯಮಂತ್ರಿದೂಷಣೆಯ ಕೊಡುಗೆ

ಗುಜರಾತನ್ನು ಹೊಗಳುವವರ ವಿರುದ್ಧ ದೂಷಿಸುವ ಪ್ರಚಾರ ನಡೆಯುತ್ತದೆ.

-ನರೇಂದ್ರ ಮೋದಿ,

ಗುಜರಾತ್ ಮುಖ್ಯಮಂತ್ರಿಟೀಕೆಯ ಬಾಣ

ಮಮತಾ ಬ್ಯಾನರ್ಜಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೆಲಿಕಾಪ್ಟರ್‌ನ್ನು ಬಳಸಿದರು. ಇದನ್ನು ಅವರು ಜನರನ್ನು ಆಕರ್ಷಿಸಲು ಬಳಸಿದರು. ಅದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರು. ಇದರ ಬಿಲ್‌ನ್ನು ಯಾರು ಪಾವತಿಸುತ್ತಾರೆ?

-ಬಿಮಾನ್ ಬೋಸ್,

ಸಿಪಿಎಂ ಪ.ಬಂಗಾಳ ಕಾರ್ಯದರ್ಶಿಇದೆಲ್ಲ ಏನೂ ಅಲ್ಲ

ವಿವಾದಗಳು ನನಗೆ ಅಭ್ಯಾಸವಾಗಿ ಹೋಗಿದೆ. ನಾನು ರಾಜಕೀಯದಲ್ಲಿ ನಾನು 43 ವರ್ಷಗಳಿಂದ ಇದ್ದೇನೆ. ರಾಜ್ಯಸಚಿವ, ಸಚಿವ, ಮುಖ್ಯಮಂತ್ರಿ, ಕೇಂದ್ರ ಸಚಿವನಾಗಿ ಅಧಿಕಾರ ಅನುಭವಿಸಿದ್ದೇನೆ. ಹಲವಾರು ವರ್ಷಗಳಿಂದ ರಾಜಕೀಯದಲ್ಲಿರುವವರು ದಾಳಿಗೆ ಒಳಗಾಗುತ್ತಾರೆ. ನಾನು ವಿವಾದಗಳಿಂದ ತೊಂದರೆಗೆ ಒಳಗಾಗುವುದಿಲ್ಲ.

-ಶರದ್ ಪವಾರ್,

ಕೇಂದ್ರದ ಕೃಷಿ ಸಚಿವಮಂಗಳೂರು ಶೈಲಿ

ನಾನು ಮೂಲತಃ ಮಂಗಳೂರಿನವಳು. ನಮ್ಮ ಮನೆಯಲ್ಲಿ ನಾವು ತಿನ್ನುವುದು, ಮಾತನಾಡುವುದು, ಬದುಕುವುದು ಮಂಗಳೂರು ಶೈಲಿಯಲ್ಲಿ.

-ಗೆನಿಲಿಯಾ ಡಿಸೋಜಾ,ಬಹುಭಾಷಾ ತಾರೆ ಸಾಧ್ಯವಾಗಿಲ್ಲ

ಅಂತರರಾಷ್ಟೀಯ ಮಟ್ಟದ ಚಿತ್ರ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಬೇಕು ಎನ್ನುವುದು ಚಿತ್ರರಂಗಕ್ಕೆ ಬಂದಾಗ ನಾನು ಬಯಸಿದ್ದೆ. ಆದರೆ ಅವರ ನಿರೀಕ್ಷೆಯಂತೆ ಅಭಿನಯಿಸಲು ನನ್ನ ವ್ಯಕ್ತಿತ್ವದಿಂದಾಗಿ ನನ್ನಿಂದ ಆಗಲಿಲ್ಲ. ಈಗಲೂ ಕೂಡ.

-ಗೋವಿಂದ,

ಖ್ಯಾತ ಚಿತ್ರನಟ

ಸೃಷ್ಟಿಸಿದ್ದು ಅವರೇ

ಮಧ್ಯಮ ವರ್ಗದವರು ಭ್ರಷ್ಟಾಚಾರ ಎಂಬ ಮೃಗದ ವಿರುದ್ಧ ಹೋರಾಡಲು ತೊಡಗಿದ್ದಾರೆ. ಇದನ್ನು ಸೃಷ್ಟಿಸಿದ್ದು ಅವರೇ.

-ಮಹೇಶ್ ಭಟ್,

ಖ್ಯಾತ ಚಿತ್ರ ನಿರ್ದೇಶಕಲಿಬಿಯಾ- ಹೊಸ ಸಮಸ್ಯೆ

ಇನ್ನೆರಡು ತಿಂಗಳಲ್ಲಿ ಲಿಬಿಯಾ ಆಹಾರ ಸಮಸ್ಯೆ ಎದುರಿಸಲಿದೆ. ಯುದ್ಧದಿಂದ ಬಂದರು ಪ್ರದೇಶಗಳಲ್ಲಿ ಚಟುವಟಿಕೆ ಅಸ್ತವ್ಯಸ್ತವಾಗಿದೆ. ಇದರಿಂದ ಆಹಾರ ಆಮದು ಸಾಧ್ಯವಾಗುತ್ತಿಲ್ಲ.

-ಫರಾನ್ಹಾ ಹಕ್,

 ವಿಶ್ವಸಂಸ್ಥೆಯ ವಕ್ತಾರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.