ಸೋಮವಾರ, ಮೇ 10, 2021
21 °C

ನಾಳೆ ರೈಸಿಂಗ್ ಸ್ಟಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಳೆ ರೈಸಿಂಗ್ ಸ್ಟಾರ್

ಉದಯೋನ್ಮುಖ ತಾರೆಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಸಲುವಾಗಿ ರಿಲಯನ್ಸ್‌ನ 92.7 ಬಿಗ್ ಎಫ್‌ಎಂ ವಾಹಿನಿಯು ಇದೇ ಸೆ.23ರಂದು ಕೋರಮಂಗಲದ ಸೆಂಟ್ ಜಾನ್ಸ್ ಸಭಾಂಗಣದಲ್ಲಿ `ಬಿಗ್ ಕನ್ನಡ ರೈಸಿಂಗ್ ಸ್ಟಾರ್~ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ.ಇದಕ್ಕೆ ಪೂರ್ವಭಾವಿಯಾಗಿ ನಡೆದ ಟ್ರೋಫಿ ಅನಾವರಣದಲ್ಲಿ ಸಂಗೀತ ನಿರ್ದೇಶಕ ಮನೋ ಮೂರ್ತಿ, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ಗಿರಿಧರ್ ದಿವಾನ್ ಹಾಜರಿದ್ದರು.ಕನ್ನಡ ಚಲನಚಿತ್ರ ರಂಗ, ರಂಗಭೂಮಿ, ಕಿರುತೆರೆ, ಕ್ರೀಡೆ, ಟೆಲಿವಿಷನ್ ಹೀಗೆ ಅನೇಕ ಕ್ಷೇತ್ರಗಳ ಪ್ರತಿಭೆಗಳನ್ನು ಬಿಗ್ ಕನ್ನಡ ರೈಸಿಂಗ್ ಸ್ಟಾರ್ 2011 ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

 

ನಟ ರಾಘವೇಂದ್ರ ರಾಜಕುಮಾರ್, ಜಗ್ಗೇಶ್, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ಗಾಯಕ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಮನೋಮೂರ್ತಿ ಸ್ಪರ್ಧೆಯ ತೀರ್ಪುಗಾರರಾಗಿದ್ದಾರೆ.ಗಾಯಕರ ವಿಭಾಗದಲ್ಲಿ ನವೀನ್ ಮಾಧವ್, ರಂಜಿತ್, ಹರಿಚರಣ್, ಗಾಯಕಿಯರ ವಿಭಾಗದಲ್ಲಿ ಆಕಾಂಕ್ಷಾ ಬದಾಮಿ, ಅನನ್ಯ ಭಗತ್, ಶ್ವೇತಾ, ನಟ ವಿಭಾಗದಲ್ಲಿ ಸಂತೋಷ್, ಶ್ರೀಕಾಂತ್, ಅಜಿತ್, ಪಂಕಜ್, ಗುರುರಾಜ್ ಜಗ್ಗೇಶ್, ನ್ಯೂ ರೈಸಿಂಗ್ ಸ್ಟಾರ್ ನಟಿ ವಿಭಾಗದಲ್ಲಿ ರಾಗಿಣಿ, ಹರ್ಷಿಕಾ ಪೂಣಚ್ಚ, ರೂಪಿಕಾ, ರಮ್ಯಾ ಬಾರ್ನಾ, ಸುಪ್ರಿತಾ ಸ್ಪರ್ಧೆಯಲ್ಲಿದ್ದಾರೆ.ಹಾಗೂ 2011ನೇ ಸಾಲಿನ ವರ್ಷದ ಹೊಸಹಾಡು ಸ್ಪರ್ಧೆಗೆ ವಿ.ಹರಿಕೃಷ್ಣ, ಜಸ್ಸೀ ಗಿಫ್ಟ್ ಕಣದಲ್ಲಿದ್ದಾರೆ.92.7 ಬಿಗ್ ಎಫ್‌ಎಂ ವಾಹಿನಿ ಕೇಳುಗರು ಎಸ್‌ಎಂಎಸ್ ಮಾಡುವ ಮೂಲಕ ಮತ ಚಲಾಯಿಸಬಹುದು.

 

ಜತೆಗೆ ಎಫ್‌ಎಂ ವಾಹಿನಿಯ ವಾಹನ ಬೆಂಗಳೂರಿನ ನಗರಗಳಲ್ಲಿ ಸಂಚರಿಸುತ್ತಿದ್ದು, ಸಾರ್ವಜನಿಕರು ಸಹ ನೆಚ್ಚಿನ ರೈಸಿಂಗ್ ಸ್ಟಾರ್‌ಗೆ ಮತ ಚಲಾಯಿಸಬಹುದು.ಇಂದಿನ ರೈಸಿಂಗ್ ಸ್ಟಾರ್ ನಾಳಿನ ಸೂಪರ್‌ಸ್ಟಾರ್ ಆಗುತ್ತಾರೆ. ಹಾಗಾಗಿ ಜನಪ್ರಿಯ ನಟ, ನಟಿಯರಾಗಲು ಯುವ ಪ್ರತಿಭೆಗಳು ಯಾವುದೇ ಪ್ರಯತ್ನವನ್ನು ಮೊದಲ ಪ್ರಯತ್ನವೆಂದು ಭಾವಿಸಿಕೊಂಡು ಮುನ್ನಡೆಯಬೇಕು ಆಗ ಮಾತ್ರ ಆ ನಟ/ನಟಿ ಸೂಪರ್ ಸ್ಟಾರ್ ಆಗುತ್ತಾರೆ ಎಂದು ಕಿವಿಮಾತು ಹೇಳಿದರು ಸಂಗೀತ ನಿರ್ದೇಶಕ ಮನೋಮೂರ್ತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.