ಬುಧವಾರ, ಮೇ 12, 2021
27 °C

ನಿತ್ಯ ಕರ ವಿಧಿಸುವ ತೀರ್ಮಾನಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ: ಪಟ್ಟಣದಲ್ಲಿ ಸಂಚರಿಸುವ ಆಟೊ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಮತ್ತು ಗೂಡ್ಸ್ ವಾಹನಗಳ ಮೇಲೆ ದಿನನಿತ್ಯ ಕರ ವಿಧಿಸುವಂತೆ ಪುರಸಭೆ ಕೈಗೊಂಡಿರುವ ತೀರ್ಮಾನ ವಿರೋಧಿಸಿ ಫೆಡರೇಷನ್ ಆಫ್ ಕರ್ನಾಟಕ ಡ್ರೈವರ್ಸ್‌ ಯೂನಿಯನ್ ಪ್ರತಿಭಟನೆ ನಡೆಸಿತು.ಆಟೊ, ಟಂಟಂ, ಮ್ಯಾಕ್ಸಿಕ್ಯಾಬ್ ಸೇರಿದಂತೆ ನೂರಾರು ವಾಹನಗಳ ಸಮೇತ ಪ್ರತಿಭಟನಾ ಮೆರವಣಿಗೆ ನಡೆಸಿದ ಯೂನಿಯನ್ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಅಗತ್ಯ ವಸ್ತುಗಳ ಬೆಲೆ ಏರಿಕೆ, ಇಂಧನ ಹಾಗೂ ವಾಹನ ಬಿಡಿ ಭಾಗಗಳ ಬೆಲೆ ಏರಿಕೆಯಿಂದಾಗಿ ವಾಹನ ಚಲಾಯಿಸಿ ಜೀವನ ನಡೆಸುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಪಟ್ಟಣದಲ್ಲಿ ತಿರುಗಾಡುವ ಆಟೊ ಇನ್ನಿತರೆ ವಾಹನಗಳ ಮೇಲೆ ದಿನನಿತ್ಯ ಕರ ವಸೂಲಿ ವಿಧಿಸುವಂತೆ ಪುರಸಭೆ ಕೈಗೊಂಡಿರುವ ತೀರ್ಮಾನ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಆಟೊ ಡ್ರೈವರ್ಸ್‌ ಯೂನಿಯನ್ ಪದಾಧಿಕಾರಿಗಳು ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರನಾಯ್ಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಹೊಸಪೇಟೆಯಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಬೇಕು.

 

ರಾಜ್ಯದ ಎಲ್ಲ ಆಟೋ ಚಾಲಕರಿಗೆ ನಿವೇಶನ ಮತ್ತು ಆಶ್ರಯ ಮನೆಗಳನ್ನು ನೀಡಬೇಕು. ಆಟೊ ಚಾಲನಾ ಪರವಾನಗಿ ಪಡೆಯಲು 8ನೇ ತರಗತಿ ಉತ್ತೀರ್ಣ ಕಡ್ಡಾಯಗೊಳಿಸಿರುವುದ್ದು ರದ್ದುಪಡಿಸಬೇಕು. ವಿ.ವಿ.ಗಿರಿ ಲೇಬರ್ ಇನ್ಸ್‌ಟ್ಯೂಟ್‌ನ ಶಿಫಾರಸುಗಳನ್ನು ಜಾರಿ ಮಾಡಬೇಕು. ಆಟೋ ಮೇಲಿನ ಇನ್ಸೂರೆನ್ಸ್ ದರ ಕಡಿಮೆಗೊಳಿಸಬೇಕೆಂಬ ಪ್ರಮುಖ ಬೇಡಿಕೆಯ ಮನವಿಯನ್ನು ಸಚಿವರಿಗೆ ಸಲ್ಲಿಸಿದರು.ಆಟೊ ಡ್ರೈವರ್ಸ್‌ ಯೂನಿನ್‌ಯನ್ ರಾಜ್ಯ ಕಾರ್ಯದರ್ಶಿ ಕೆ.ಎಂ. ಸಂತೋಷ, ತಾಲ್ಲೂಕು ಅಧ್ಯಕ್ಷ ಎನ್.ಶಂಷುದ್ದೀನ್, ಕಾರ್ಯದರ್ಶಿ ಎಂ.ಸೈಯ್ಯದ್, ಮ್ಯಾಕ್ಸಿಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ ಸೈಯ್ಯದ್ ಜಮೀರ್, ಗೂಡ್ಸ್ ವಾಹನಗಳ ಸಂಘದ ಅಧ್ಯಕ್ಷ ಎ. ರತ್ನಾಜಿ, ವೈ.ಯಮನೂರಪ್ಪ, ಡೊಳ್ಳಿನ ಹುಲುಗಪ್ಪ, ಹುಸೇನ್ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.