ಭಾನುವಾರ, ಜೂಲೈ 5, 2020
22 °C

ನಿಷೇಧ: ರಿಲಯನ್ಸ್ ಷೇರುಗಳಿಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಉದ್ದಿಮೆ ಸಂಸ್ಥೆಗಳ ಷೇರುಗಳಲ್ಲಿ ಹಣ ತೊಡಗಿಸುವುದರ ಮೇಲೆ ನಿಷೇಧಕ್ಕೆ ಗುರಿಯಾಗಿರುವ, ಅನಿಲ್ ಅಂಬಾನಿ ಒಡೆತನದ ಕಂಪೆನಿಗಳ ಷೇರುಗಳು ಸೋಮವಾರದ ವಹಿವಾಟಿನಲ್ಲಿ ತೀವ್ರ ಕುಸಿತ ದಾಖಲಿಸಿದವು.

ಷೇರುಪೇಟೆ ವಹಿವಾಟಿನಲ್ಲಿ ತೊಡಗದಂತೆ ಯಾವುದೇ ನಿಷೇಧ ಹೇರಲಾಗಿಲ್ಲ ಎಂದು ಅನಿಲ್ ಅಂಬಾನಿ ಭಾನುವಾರವಷ್ಟೇ ಸ್ಪಷ್ಟನೆ ನೀಡಿದ್ದರು. ಈ ಹೇಳಿಕೆಯ ಹೊರತಾಗಿಯೂ ಅವರ ಒಡೆತನದ ವಿವಿಧ ಉದ್ದಿಮೆ ಸಂಸ್ಥೆಗಳ ಷೇರುಗಳ ಬೆಲೆ ಕುಸಿತ ಕಂಡಿವೆ. ಷೇರು ನಿಯಂತ್ರಣ ಮಂಡಳಿ ಜತೆಗಿನ ವಿವಾದ ಇತ್ಯರ್ಥದ ನಿಬಂಧನೆಗೆ ಅನುಗುಣವಾಗಿ, ಷೇರುಪೇಟೆ ವಹಿವಾಟಿನಿಂದ ದೂರ ಉಳಿಯುವುದಾಗಿ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ನ್ಯಾಚುರಲ್ ರಿಸೋಸರ್ಸ್ ಲಿಮಿಟೆಡ್ ಒಪ್ಪಿಕೊಂಡ ನಂತರದ   ಬೆಳವಣಿಗೆ ಇದಾಗಿದೆ.

ರಿಲಯನ್ಸ್ ಇನ್‌ಫ್ರಾದ ಷೇರು ಬೆಲೆ ಶೇ 7.84ರಷ್ಟು ಕುಸಿತ ಕಂಡು ` 735.70ಕ್ಕೆ ದಿನದ ವಹಿವಾಟು ಕೊನೆಗೊಳಿಸಿತು.  ಆರ್‌ಎನ್‌ಆರ್‌ಎಲ್ ವಿಲೀನಗೊಂಡಿರುವ ‘ಆರ್- ಪವರ್’ ಷೇರು ಬೆಲೆಯೂ ಶೇ 6.13ರಷ್ಟು ನಷ್ಟಕ್ಕೆ ಎರವಾಗಿ ` 137.90ಕ್ಕೆ  ಇಳಿಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.