ಭಾನುವಾರ, ಜೂನ್ 13, 2021
26 °C

ನೀರಿನ ಸಮಸ್ಯೆ ಪರಿಹಾರಕ್ಕಾಗಿ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಗರದ ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ನೀರಿನ ಸಮಸ್ಯೆ ಅಧಿಕವಾಗಿದ್ದು ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ಜಾಥಾ ನಡೆಸಲಾಗುವುದು ಎಂದು ಶಾಸಕ ನೆ.ಲ.ನರೇಂದ್ರಬಾಬು ಹೇಳಿದರು.ಮಾರ್ಚ್ 8 ರಂದು ಮಹಾಲಕ್ಷ್ಮಿ ಲೇಔಟ್‌ನಿಂದ ಜಾಥಾ ಹೊರಟು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೇಂದ್ರ ಕಚೇರಿಯಾದ ಕಾವೇರಿ ಭವನಕ್ಕೆ ಮುತ್ತಿಗೆ ಹಾಕಲಾಗುವುದು~ ಎಂದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನಗರದಲ್ಲಿ ಆಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಸರ್ಕಾರ ತಾಳಿರುವ ಧೋರಣೆಗಳನ್ನು ವಿರೋಧಿಸಲಾಗುವುದು~ ಎಂದು ಹೇಳಿದರು.`ನಗರದ ಮಹಾಲಕ್ಷ್ಮಿ ಲೇ ಔಟ್, ನಂದಿನಿ ಲೇಔಟ್‌ನ 4 ನೇ ಬ್ಲಾಕ್, ಜೈ ಮಾರುತಿ ನಗರ, ರವಿ ಬಡಾವಣೆ, ಕಂಠೀರವ ನಗರ, ಸಾಕಮ್ಮ ಬಡಾವಣೆ, ಮಾರಪ್ಪನ ಪಾಳ್ಯದ ವಿಜಯಾನಂದನಗರ, ಶ್ರೀಕಂಠೇಶ್ವರನಗರ, ನಾಗಪುರ ವಾರ್ಡ್‌ನ ಬೋವಿಪಾಳ್ಯ, ಕೇತಮಾರನಹಳ್ಳಿ, ವಾರ್ಡ್ 74 ರ ಶಕ್ತಿ ಗಣಪತಿ ನಗರ, ವಾರ್ಡ್ 68 ರ ಸರಸ್ವತಿ ಪುರ, ಗಣೇಶ ಬ್ಲಾಕ್‌ಗಳಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ~ ಎಂದು ಅವರು ವಿವರಿಸಿದರು.`ಬರೀ ಒಂದು ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಸರ್ಕಾರ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ಕೆಲ ಬಡಾವಣೆಗೆ ನಿಯಮಿತವಾಗಿ ನೀರು ಪೂರೈಕೆ ಆಗುತ್ತಿದೆ. ಆದರೆ, ಕೆಲವೊಂದು ಬಡಾವಣೆಗಳಿಗೆ ಮಲತಾಯಿ ಧೋರಣೆಯನ್ನು ಅನುಸರಿಸಲಾಗುತ್ತಿದೆ. ನಿಗದಿತ ವೇಳೆಯಲ್ಲಿ ನೀರು ಪೂರೈಕೆ ಮಾಡದೆ, ಮಹಿಳೆಯರು ದಿನಾಲು ಜಾಗರಣೆ ಮಾಡುವ ಪ್ರಸಂಗ ಒದಗಿ ಬಂದಿದೆ~ ಎಂದರು.`ಸಚಿವ ಎಸ್.ಸುರೇಶ್ ಕುಮಾರ್ ಅವರು ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಅದು ಇದುವರೆಗೂ ಈಡೇರಿಲ್ಲ. ಬಿಜೆಪಿ ಶಾಸಕರು ಮತ್ತು ಪ್ರಭಾವಿಗಳುಳ್ಳ ಕ್ಷೇತ್ರಗಳಲ್ಲಿ ಅಗತ್ಯ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ. ಆದರೆ ವಿಪಕ್ಷಗಳ ಶಾಸಕರ ಕೇತ್ರಗಳನ್ನು ನಿರ್ಲಕ್ಷಿಸಲಾಗುತ್ತಿದೆ~ ಎಂದು ಆರೋಪಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.