ಬುಧವಾರ, ಏಪ್ರಿಲ್ 14, 2021
24 °C

ನೆಮ್ಮದಿಗೆ ಕಾಯಕ ತತ್ವ ರಾಮಬಾಣ: ಮಹಾದೇವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಶಾಂತಿ-ನೆಮ್ಮದಿಯ ಬದುಕಿಗೆ ಬಸವಣ್ಣರ ಕಾಯಕತತ್ವ ರಾಮಬಾಣ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ರಾತ್ರಿ ನಡೆದ ವಿಶ್ವಧರ್ಮ ಪ್ರವಚನ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಮಾತನಾಡಿದರು.ಬಸವಣ್ಣ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಶ್ವಧರ್ಮ ಪ್ರವಚನ ಸಂದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಸಿಡಿಗಳಲೆ ಮಠಾಧೀಶ ಹಿಮ್ಮಡಿ ಶಿವಲಿಂಗಸ್ವಾಮೀಜಿ ಮಾತನಾಡಿ, ಎಲ್ಲಾ ರೀತಿಯ ಸವಲತ್ತುಗಳಿಂದ ಸುಖ ಜೀವನ ನಡೆಸುತ್ತಿರುವ ಮಾನವನಿಗೆ ಧರ್ಮ ಪ್ರವಚನ ಅವಶ್ಯಕವಾಗಿದೆ. ಇವು ಮಾನವ ಸತ್ಯಮಾರ್ಗದಲ್ಲಿ ನಡೆಯಲು ಸಹಾಯಕವಾಗುತ್ತದೆ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಿಕಾಯೋಗೇಶ್, ಡಿ.ಬಿ.ಧರ್ಮಪ್ಪ ಮಾತನಾಡಿದರು. ಹಂಡ್ಲಿ ಗ್ರಾಮದ ಕಾಫಿ ಬೆಳೆಗಾರ ಎಸ್.ವಿ.ವೇದಕುಮಾರ್ ದಂಪತಿ ಉದ್ಘಾಟಿಸಿದರು.ಕೂಡಲ ಸಂಗಮದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಹಾಜಗದ್ಗುರು ಮಾತೆ ಮಹಾದೇವಿ ಹಾಗೂ ಧಾರವಾಡದ ಅಕ್ಕಮಹಾದೇವಿ ಮಹಿಳಾ ಪೀಠಾಧೀಶೆ ಜಗದ್ಗುರು ಮಾತೆ ಗಂಗಾದೇವಿ ವಿಶ್ವಧರ್ಮ ಪ್ರವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ರಘು ಮಾತನಾಡಿದರು.ಬೆಂಗಳೂರು ಬಸವ ಮಂಟಪದ ಬಸವರತ್ನ ಮಾತಾಜಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸವಿತಾ, ಗ್ರಾಮ ಪಂಚಾಯಿತಿ ಸದಸ್ಯ ಮಹ್ಮದ್‌ಗೌಸ್, ಯೋಗೇಶ್, ಕಲ್ಯಾಣ ಮಂಟಪದ ಮಾಲೀಕ ದಂಪತಿ ಕೃಷ್ಣರಾಜು-ಯಶೋದಮ್ಮ, ಎಸ್.ಕೆ.ವೀರಪ್ಪ, ಕೆ.ಬಿ.ಹಾಲಪ್ಪ, ಕೆ.ವಿ.ಮಂಜುನಾಥ್, ಟಿ.ಸಿ.ಸೊಮಪ್ಪ, ಗಿರೀಶ್,ಇತರರು ಉಪಸ್ಥಿತರಿದ್ದರು.ಡಿ.ಬಿ.ಸೋಮಪ್ಪ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಸಿ.ಎಂ.ಪುಟ್ಟಸ್ವಾಮಿ ನಿರೂಪಿಸಿದರು. ಶರಣ ಹನಿಮೀಶ್ ಯೋಗಿ ವಂದಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.