ಮಂಗಳವಾರ, ಜೂನ್ 22, 2021
22 °C

ನೆಲ ಜಲ ಜೀವ ಜಾಲ

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

ನೆಲ ಜಲ ಜೀವ ಜಾಲ

1. ಭೂ ಇತಿಹಾಸದಲ್ಲಿ, ಬಹು ಪ್ರಾಚೀನವಾದ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ, ಆಗಿನ ಕಡಲಿನಾವಾರದಲ್ಲಿ ಇದ್ದಕ್ಕಿದ್ದಂತೆ ಹೇರಳ ವಿಧಗಳ ಚಿತ್ರ-ವಿಚಿತ್ರ ಜೀವಿಗಳು ಉದ್ಭವಿಸಿದುವು (ಚಿತ್ರ-1). ಆ ಅವಧಿ `ಸೃಷ್ಟಿ ಸ್ಫೋಟದ ಭೂಯುಗ' ಎಂದೇ ಪ್ರಸಿದ್ಧ. ಧರೆಯ ಜೀವೇತಿಹಾಸದ ಆ'ಯುಗ'ದ ಹೆಸರೇನು ಗೊತ್ತೇ?

ಅ. ಡಿವೋನಿಯನ್‌ಯುಗ ಬ. ಕೇಂಬ್ರಿಯನ್ ಯುಗ

ಕ. ಜ್ಯೂರಾಸಿಕ್ ಯುಗ ಡ. ಪರ್ಮಿಯನ್ ಯುಗ2. ಸಾಗರವಾಸಿಯಾದ ಸುಪ್ರಸಿದ್ಧ ಪ್ರಾಣಿಯೊಂದು ಚಿತ್ರ-2 ರಲ್ಲಿದೆ. ಈ ಪ್ರಾಣಿ ಯಾವುದು-ಗುರುತಿಸಬಲ್ಲಿರಾ?

ಅ. ನಕ್ಷತ್ರ ಮೀನು ಬ. ಅಷ್ಟ ಪದಿ

ಕ. ಪಾರಕ ಮೀನು ಡ. ಜೆಲ್ಲಿ ಮೀನು3. ಭೂ ಆಂತರ್ಯದ ಕುಲುಮೆಯ ಚಿಮನಿಯಂತೆ ನಿರಂತರ ನೀರಾವಿಯನ್ನು ಉಗುಳುತ್ತಿರುವ ನೈಸರ್ಗಿಕ ನಿರ್ಮಿತಿಯೊಂದು ಚಿತ್ರ-3 ರಲ್ಲಿದೆ. ಇಂಥ ನಿರ್ಮಿತಿಗಳ ವಿಶಿಷ್ಟ ಹೆಸರೇನು?

ಅ. ಅಗ್ನಿಪರ್ವತ ಬ. ಹಾಟ್ ಸ್ಪ್ರಿಂಗ್

ಕ. ಹಾಟ್ ಸ್ಪಾಟ್ ಡ. ಫ್ಯೂಮರೋಲ್4. ಬಂಗಾರಕ್ಕಿಂತ ಅಧಿಕ ಬೆಲೆಯ ಲೋಹ `ಪ್ಲಾಟಿನಂ'ನ ಗಟ್ಟಿಯೊಂದು ಚಿತ್ರ-4 ರಲ್ಲಿದೆ. ಚಿನ್ನಕ್ಕಿಂತ, ಅಷ್ಟೇ ಏಕೆ, ಪ್ಲಾಟಿನಂಗಿಂತಲೂ ಹೆಚ್ಚು ಬೆಲೆಯ ಲೋಹವೊಂದು ಈ ಪಟ್ಟಿಯಲ್ಲಿದೆ. ಯಾವುದು ಆ ಲೋಹ?

ಅ. ಹಾಲ್ಮಿಯಂ ಬ. ಇರಿಡಿಯಂ

ಕ. ಟಂಗ್‌ಸ್ಟನ್ ಡ. ಯುರೇನಿಯಂ5. ನಮ್ಮ ಪೃಥ್ವಿಗೆ ಪ್ರಕೃತಿ ತೊಡಿಸಿರುವ ರಕ್ಷಣಾ ಕವಚಗಳಲ್ಲೊಂದರ ಚಿತ್ರಣ ಇಲ್ಲಿದೆ (ಚಿತ್ರ-5). ವಿಸ್ಮಯದ ಸಾಮರ್ಥ್ಯದ, ವಿಶಿಷ್ಟ ಆಕಾರದ ಈ ಕವಚ ಯಾವುದು?

ಅ. ಹವಾಗೋಳ ಬ. ಓಜೋನ್ ಪದರ

ಕ. ಕಾಂತಗೋಳ ಡ. ವಾಯುಮಂಡಲ6. `ವಿಶ್ವದ ಅತ್ಯಂತ ಶುಷ್ಕ ಮರುಭೂಮಿ' ಎಂಬ ದಾಖಲೆಯ ಬಿಸಿ ಮರುಭೂಮಿಯ ಒಂದು ದೃಶ್ಯ ಚಿತ್ರ-7 ರಲ್ಲಿದೆ. ಹಾಗೆಯೇ ಇನ್ನೂರ ಎಪ್ಪತ್ತೈದು ಧಾರೆಗಳ ವಿಶ್ವಪ್ರಸಿದ್ಧ ಜಲಪಾತ ಚಿತ್ರ-8 ರಲ್ಲಿದೆ. ದಕ್ಷಿಣ ಅಮೆರಿಕ ಖಂಡದಲ್ಲೇ ಇರುವ ಈ ಎರಡೂ ಸುಪ್ರಸಿದ್ಧ ನಿಸರ್ಗ ನಿರ್ಮಿತಿಗಳ ಹೆಸರುಗಳು ಗೊತ್ತೇ?7. ದೈತ್ಯ ಗಾತ್ರದ ಶರೀರದ ಪ್ರಾಣಿಗಳಲ್ಲೊಂದಾದ `ಹಿಪ್ಪೊಪೊಟಾಮಸ್' (ನೀರುಕುದುರೆ) ಚಿತ್ರ-6 ರಲ್ಲಿದೆ. ಈ ಪ್ರಾಣಿಯ ನೈಸರ್ಗಿಕ ನೆಲೆ ಯಾವ ಭೂಖಂಡಕ್ಕೆ ಸೀಮಿತ?

ಅ. ಆಸ್ಟ್ರೇಲಿಯಾ ಬ. ಆಫ್ರಿ

ಕ. ಏಷಿಯ ಡ. ದಕ್ಷಿಣ ಅಮೆರಿಕ8. ಮೀನುಗಾರರ ಬಲೆಗೆ ಸಿಲುಕಿ ಅಸುನೀಗಿರುವ ಸಾಗರವಾಸಿಯೊಂದರ ಚಿತ್ರ ಇಲ್ಲಿದೆ (ಚಿತ್ರ-9). ಈ ಪ್ರಾಣಿಯನ್ನು ಗುರುತಿಸಿ:

ಅ. ಶಾರ್ಕ್ ಬ. ಸೀಲ್

ಕ. ವಾಲ್ರಸ್ ಡ. ಡಾಲ್ಫಿನ್9. ಸುಪರಿಚಿತ ಪಕ್ಷಿ `ಗಿಣಿ'ಯ ಒಂದು ಪ್ರಭೇದ ಚಿತ್ರ-10 ರಲ್ಲಿದೆ. ಗಿಣಿಗಳಲ್ಲೆಲ್ಲ ಅತ್ಯಂತ ದೊಡ್ಡಗಾತ್ರದ ಗಿಣಿ ಇವುಗಳಲ್ಲಿ ಯಾವುದು?

ಅ. ಪ್ಯಾರಾಕೀಟ್ ಬ. ಲೋರಿಕೀಟ್

ಕ. ಕಕಾಪೋ ಡ. ಮಕಾ10. ನಮ್ಮ ಸೌರವ್ಯೆಹದ್ದೇ ಒಂದು ಗ್ರಹವಾದ `ಯುರೇನನ್' ಚಿತ್ರ-11 ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಯುರೇನಸ್ ಗ್ರಹದ್ದೇ ಪರಮ ವಿಶಿಷ್ಟ ಗುಣ ಯಾವುದು?

ಅ. ಅದು ಬರೀ ಅನಿಲ ಸಂಯೋಜಿತ ದೈತ್ಯ ಗ್ರಹ

ಬ. ಅದು ಬಹುಚಂದ್ರರನ್ನು ಹೊಂದಿರುವ ಗ್ರಹ

ಕ. ಅದು ತನ್ನ ಅಕ್ಷದ ಮೇಲೆ ಗರಿಷ್ಠ ವಾಲಿರುವ ಗ್ರಹ

ಡ. ಅದು ಉಂಗುರಾಲಂಕೃತ ಗ್ರಹ11. ಆಗಸದಿಂದ ಸುರಿದಿರುವ ಆಲಿಕಲ್ಲುಗಳ ದೃಶ್ಯ ಚಿತ್ರ-12 ರಲ್ಲಿದೆ. ಆಲಿಕಲ್ಲುಗಳು ಯಾವ ವಿಧದ ಮೋಡದಲ್ಲಿ ಮೈದಳೆಯುವುದು ಸಾಧ್ಯ?

ಅ. ಕ್ಯುಮುಲೋನಿಂಬಸ್

ಬ. ಸಿರ‌್ರಸ್ ಕ. ಸ್ಟ್ರಾಟಸ್

ಡ. ಆಲ್ಟೋ ಸ್ಟ್ರಾಟಸ್12. ಚಿತ್ರ-13 ರಲ್ಲಿರುವ ಪ್ರಾಣಿಯನ್ನು ನೋಡಿ. ಅದು ಸ್ತನಿವರ್ಗಕ್ಕೆ ಸೇರಿದ ಬಾವಲಿ-ಹೌದಲ್ಲ? ಈ ಕೆಳಗೆ ಪಟ್ಟಿ ಮಾಡಿರುವ ಯಾವ ಯಾವ ಪ್ರಾಣಿಗಳು ಸ್ತನಿವರ್ಗಕ್ಕೆ ಸೇರಿವೆ?

ಅ. ಕಾಂಗರೂ ಬ. ಆಲ್‌ಬಟ್ರಾಸ್

ಕ. ಬಬೂನ್‌ಡ. ಇಲಿ ಇ. ಮಾಂಬಾ ಈ. ಮುಳ್ಳು ಹಂದಿ ಉ. ಸಾಲ್ಮನ್

ಟ. ತಿಮಿಂಗಿಲ

ಉತ್ತರಗಳು

1. ಬ-ಕೇಂಬ್ರಿಯನ್ ಯುಗ 2. ಡ-ಜೆಲ್ಲಿಮೀನು

3. ಡ-ಫ್ಯೂಮರೋಲ್ 4. ಅ-ಹಾಲ್ಮಿಯಂ

5. ಕ-ಕಾಂತಗೋಳ

6. ಅಟಕಾಮ ಮರುಭೂಮಿ; ಇಗುವಾಜು ಜಲಪಾತ.

7. ಬ-ಆಫ್ರಿಕ 8. ಡ-ಡಾಲ್ಫಿನ್

9. ಡ-ಮಕಾ 10. ಕ-ಅಕ್ಷದ ಮೇಲೆ ಗರಿಷ್ಠ ವಾಲಿರುವ ಗ್ರಹ

11. ಅ-ಕ್ಯುಮುಲೋನಿಂಬಸ್ 12. ಬ, ಇ, ಉ ಬಿಟ್ಟು ಇನ್ನೆಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.