ಭಾನುವಾರ, ಮೇ 16, 2021
22 °C

ನೆಲ ಸಂಸ್ಕೃತಿಯ ಭೂಮಿ ಹಬ್ಬ

ಡಿ.ಸುರೇಶ್ Updated:

ಅಕ್ಷರ ಗಾತ್ರ : | |

ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದೆ ಗ್ರಾಮದ ನಿರಂತರ ಟ್ರಸ್ಟ್ ಹಾಗೂ ಸ್ಥಳೀಯ ಗ್ರಾಮಗಳ ಜನರ ಸಹಯೋಗದಲ್ಲಿ  ನೆಲ-ಜಲ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಗ್ರಾಮೀಣ ಸೊಗಡನ್ನು ನೆನಪಿಸುವ ಬೆವರ ಸಂಸ್ಕೃತಿಯ ಬೆರಗಿನ `ಭೂಮಿಹಬ್ಬ~ ಆಯೋಜಿಸಲಾಗಿದೆ.ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಕಡತನಮಲೆ ಗ್ರಾಮದ ಚಿಕ್ಕಣ್ಣನ ಕೆರೆ ಅಂಗಳದಲ್ಲಿ ಶುಕ್ರವಾರ (ಏ.6)ಬೆಳಿಗ್ಗೆ 8 ಗಂಟೆಗೆ ಗ್ರಾಮೀಣ ಕ್ರೀಡಾಕೂಟದ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಲಿದೆ.ಸಂಜೆ 5ಕ್ಕೆ ಗ್ರಾಮದ ದೇವರುಗಳಾದ ದುರ್ಗದಮ್ಮ, ಮುನೇಶ್ವರಸ್ವಾಮಿ, ಮೂರುಮಕದಮ್ಮ, ಆಂಜನೇಯಸ್ವಾಮಿ ಹಾಗೂ ವೇಣುಗೋಪಾಲ ಸ್ವಾಮಿಯ ಮೆರವಣಿಗೆ ನಡೆಯಲಿದೆ. ಸಂಜೆ 7ಕ್ಕೆ ಮುದ್ದೆ, ಕಾಳುಸಾರು, ಹಲಸಿನ ಪಾಯಸದ ಹಳ್ಳಿ ಊಟದ ಸಹಭೋಜನ ಸವಿಯಬಹುದು.ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ಚಿಂತಕ ಅಗ್ನಿ ಶ್ರೀಧರ್, ಸಾಹಿತಿ ಕೆ.ವೈ.ನಾರಾ ಯಣಸ್ವಾಮಿ, ಹೆಸರಘಟ್ಟದ ಐಎಎಚ್‌ಆರ್‌ನ ಸಂಶೋಧಕ ಡಾ.ಟಿ.ಎನ್. ಶಿವಾನಂದ ಹಾಗೂ ಚಲನಚಿತ್ರ ನಟಿ ಪೂಜಾಗಾಂಧಿ ಭಾಗವಹಿಸಲಿದ್ದಾರೆ.ರಾತ್ರಿ 8 ಗಂಟೆಗೆ ನಡೆಯುವ ನೆಲ ಸಂಸ್ಕೃತಿ ಉತ್ಸವದಲ್ಲಿ ನಾಟ್ಯ ಚೇತನ ಫೌಂಡೇಶನ್ ತಂಡದಿಂದ ನೃತ್ಯ ಪ್ರದರ್ಶನ ಮತ್ತು ನಾಟಕ, ಜೋಗಿಲೆ ಸಿದ್ದರಾಜು ತಂಡದಿಂದ ಜನಪದ ಹಾಡುಗಾರಿಕೆ, ಅಮಾಸ ತಂಡದಿಂದ ಅಲಾವಿ ಹೆಜ್ಜೆ, ಹುಲಿವೇಷ ಹಾಗೂ ಹಾಡುಗಾರಿಕೆ, ಹೊಸಕೋಟೆಯ ಸ್ಫೂರ್ತಿ ಮಹಿಳಾ ತಮಟೆ ತಂಡದಿಂದ ತಮಟೆ ವಾದನ ಹಾಗೂ ಮೈಸೂರಿನ ಕುಮಾರಸ್ವಾಮಿ ತಂಡದಿಂದ ಬೀಸು ಕಂಸಾಳೆ ಸೇರಿದಂತೆ ವಿವಿಧ ಗ್ರಾಮೀಣ  ಕಲಾಪ್ರಕಾರಗಳು ಗಮನ ಸೆಳೆಯಲಿವೆ.ಕಳೆದ ಕೆಲವು ವರ್ಷಗಳಿಂದಲೂ ಮಳೆಹಬ್ಬ, ಬೆಳದಿಂಗಳ ಹಬ್ಬದಂತಹ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ  ನಿರಂತರ ಟ್ರಸ್ಟ್, ಜನರಲ್ಲಿ ಗ್ರಾಮೀಣ ಸೊಗಡಿನ ಅರಿವು ಮತ್ತು ಅಗತ್ಯತೆಯ ಬಗ್ಗೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.ಭೂಮಿಹಬ್ಬಕ್ಕೆ ದಾರಿ:
ಯಲಹಂಕ ಮಾರ್ಗವಾಗಿ ದೊಡ್ಡಬಳ್ಳಾಪುರ ಮುಖ್ಯ ರಸ್ತೆ ಮೂಲಕ 13 ಕಿಲೋಮೀಟರ್ ದೂರದಲ್ಲಿರುವ  ಕಡತನಮಲೆ ಗೇಟ್‌ತಲುಪಬೇಕು. ಅಲ್ಲಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿ ಚಿಕ್ಕಣ್ಣನ ಕೆರೆಯ ಅಂಗಳ ಇದೆ. ಮಾಹಿತಿಗೆ:  9448465233, 9844114303, 9620401938.                            

 -

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.