ಶನಿವಾರ, ಫೆಬ್ರವರಿ 27, 2021
28 °C

ನೇಪಾಳದಲ್ಲಿ ವಿದ್ಯುತ್‌ ಸ್ವಾವಲಂಬನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇಪಾಳದಲ್ಲಿ ವಿದ್ಯುತ್‌ ಸ್ವಾವಲಂಬನೆ

ಬೆಂಗಳೂರು: ‘ಜಲವಿದ್ಯುತ್‌ ತಯಾ ರಿಕೆಗೆ ಭಾರತ ಸಹಕರಿಸಿದರೆ ವಿದ್ಯುತ್‌ ಉತ್ಪಾದನಾ ಕ್ಷೇತ್ರದಲ್ಲಿ ನೇಪಾಳ ಸ್ವಾವಲಂಬನೆ ಸಾಧಿಸಬಹುದು’ ಎಂದು ನೇಪಾಳದ ರಾಯಭಾರಿ ಕಚೇರಿಯ ಆರ್ಥಿಕ ಅಧಿಕಾರಿ ಬಿ.ಪಿ.ಲಮ್ಸಾಲ್‌ ತಿಳಿಸಿದರು.ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ನಗರದಲ್ಲಿ ಮಂಗ ಳವಾರ ಆಯೋಜಿಸಿದ್ದ ‘ನೇಪಾಳದಲ್ಲಿ ಪ್ರವಾಸೋದ್ಯಮ, ವಾಣಿಜ್ಯ ಹಾಗೂ ಹೂಡಿಕೆ ಅವಕಾಶ’ ಕುರಿತ ವಿಚಾರಸಂ ಕಿರಣದಲ್ಲಿ ಅವರು ಮಾತನಾಡಿದರು.‘ಬೆಂಗಳೂರು ಮಾಹಿತಿ ತಂತ್ರಜ್ಞಾನಕ್ಕೆ ಬಹಳ ಜನಪ್ರಿ ಯವಾಗಿದೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಕೂಡ ನೇಪಾಳದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶವಿದೆ’ ಎಂದು ತಿಳಿಸಿದರು.‘ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದರೆ ನೇಪಾಳ ದೇಶವು ಅಭಿವೃದ್ಧಿಯಾ ಗುವುದಲ್ಲದೇ, ಲಾಭದಾಯಕವಾಗಿ ವಾಣಿಜ್ಯ ಚಟುವಟಿ ಕೆಗಳನ್ನು ನಡೆಸಬಹುದು. ವಿದೇಶಿ ಉತ್ಪನ್ನ ಸಂಸ್ಥೆಗಳ ಆದಾಯ ತೆರಿಗೆಯಲ್ಲಿ ಶೇ 20 ರಿಯಾಯಿತಿ ನೀಡಲಾ ಗುತ್ತಿದೆ’ ಎಂದು ಹೇಳಿದರು.‘ಪಶುಪತಿನಾಥ ಹಾಗೂ ಮುಕ್ತಿನಾಥ ದೇವಸ್ಥಾನಗಳು ಸೇರಿ ದಂತೆ ಹಲವು ಆಕರ್ಷಣೀಯ ಪ್ರವಾಸಿ ತಾಣಗಳಿದ್ದು, ಇವುಗಳಿಗೆ  ಹೆಚ್ಚಿನ ಮಹತ್ವ ದೊರೆಯಬೇಕು’ ಎಂದರು.ನೇಪಾಳದ ಭಾರತದ ರಾಯಭಾರಿ ಕೆ.ಎನ್‌.ಅಧಿಕಾರಿ, ‘ ಕೋಸಿ, ಗಂಧಕಿ, ಮಹಾಕಾಳಿ ಸೇರಿದಂತೆ ನಾಲ್ಕು ಪ್ರಮುಖ ನದಿಗಳಿದ್ದು, ಜಲವಿದ್ಯುತ್‌ ಯೋಜನೆಗಳನ್ನು  ವಿದೇಶಿ ಹೂಡಿಕೆಯಿಂದ ಜಾರಿ ಮಾಡಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.