ಸೋಮವಾರ, ಮಾರ್ಚ್ 8, 2021
30 °C
ಎನ್‌ಐಎಎಸ್‌ ನಿರ್ದೇಶಕ ಡಾ. ಬಲದೇವ್ ಅನಿಸಿಕೆ

ನೈತಿಕ ಮೌಲ್ಯವಿಲ್ಲದ ಶಿಕ್ಷಣ ವ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೈತಿಕ ಮೌಲ್ಯವಿಲ್ಲದ ಶಿಕ್ಷಣ ವ್ಯರ್ಥ

ಬೆಂಗಳೂರು: ಜಯನಗರ ನ್ಯಾಷನಲ್ ಪದವಿ ಕಾಲೇಜಿನ 5ನೇ ಘಟಿಕೋತ್ಸವದಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಸಿ.ಎ ಕೋರ್ಸ್‌ ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಮತ್ತು ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (ಎನ್‌ಐಎಎಸ್‌) ನಿರ್ದೇಶಕ ಡಾ. ಬಲದೇವ್ ರಾಜ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ, ಆತ್ಮವಿಶ್ವಾಸ, ರಾಷ್ಟ್ರೀಯ ಭಾವನೆ ಬಿತ್ತದ ಶಿಕ್ಷಣ ವ್ಯರ್ಥವಾದದ್ದು. ಸಮಾಜದ ಋಣಭಾರ ತೀರಿಸುವಂತೆ ಪ್ರೇರೇಪಿಸುವ ಶಿಕ್ಷಣ ನೀಡಬೇಕು’ ಎಂದರು.‘ದೇಸಿ ನೆಲೆಗಟ್ಟಿನ ಮೇಲೆ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಅನುಕೂಲವಾಗುವ ಗುಣಮಟ್ಟದ ಶಿಕ್ಷಣವನ್ನು ನ್ಯಾಷನಲ್ ಕಾಲೇಜು ಕಳೆದ ಒಂದು ಶತಮಾನದಿಂದ ನೀಡುತ್ತ ಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.