ಶುಕ್ರವಾರ, ಮೇ 7, 2021
19 °C

ನೈರುತ್ಯ ರೈಲ್ವೆ ನಾಟಕ ಸ್ಫರ್ಧೆಹನುಮಾಯನಕ್ಕೆ ಪ್ರಥಮ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೈರುತ್ಯ ರೈಲ್ವೆ ವಲಯದ ಬೆಂಗಳೂರು ವಲಯವು ನಗರದಲ್ಲಿ ಶುಕ್ರವಾರ ನಾಟಕ ಸ್ಪರ್ಧೆಯನ್ನು ಏರ್ಪಡಿಸಿತ್ತು.ಈ ಸ್ಪರ್ಧೆಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ರೈಲ್ವೆ ವಲಯಗಳ ವಿವಿಧ ವಿಭಾಗಗಳ ಸಿಬ್ಬಂದಿ ಭಾಗವಹಿಸಿದ್ದರು. ಹುಬ್ಬಳ್ಳಿ ವಲಯದ ಕಲಾವಿದರು ಅಭಿನಯಿಸಿದ ಪ್ರಸ್ತುತ ರಾಜಕೀಯ ವಿಡಂಬನೆಯನ್ನು ಒಳಗೊಂಡ `ಹನುಮಾಯನ~ಕ್ಕೆ ಮೊದಲ ಬಹುಮಾನ ನೀಡಲಾಯಿತು.ಹುಬ್ಬಳ್ಳಿಯ `ಕ್ಯಾರೇಜ್ ರಿಪೇರಿ~ ವಿಭಾಗದವರು ಅಭಿಯನಯಿಸಿದ ರೈತರ ಆತ್ಮಹತ್ಯೆಯನ್ನೊಳಗೊಂಡ `ಮಣ್ಣಾದ ಮಣ್ಣಿನ ಮಕ್ಕಳು~ ನಾಟಕಕ್ಕೆ ಎರಡನೇ ಬಹುಮಾನ ನೀಡಲಾಯಿತು. ಹುಬ್ಬಳ್ಳಿ ರೈಲ್ವೆ ವಲಯದ ಮಂಜುನಾಥ್ ಅವರಿಗೆ ಅತ್ಯುತ್ತಮ ನಿರ್ದೇಶಕ, ಅದೇ ವಲಯದ ಕಣ್ಣನ್ ಅವರಿಗೆ ಉತ್ತಮ ನಟ ಪ್ರಶಸ್ತಿಯನ್ನು ನೀಡಲಾಯಿತು.ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ನೈರುತ್ಯ ರೈಲ್ವೆ ವಲಯದ ಸಿಬ್ಬಂದಿ ವಿಭಾಗದ ಮುಖ್ಯ ವ್ಯವಸ್ಥಾಪಕ ಅಮಿತ್‌ಕುಮಾರ್ ಬ್ರಹ್ಮೋ, ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಎಸ್.ಮಣಿ, ವಲಯದ ಮಹಿಳಾ ಸಂಘಟನೆಯ ಅಧ್ಯಕ್ಷೆ ಅನುಪಮಾ ಮಣಿ, ವಲಯದ ಹಿರಿಯ ಸಿಬ್ಬಂದಿ ವ್ಯವಸ್ಥಾಪಕಿ ಲೀಲಾ ಪಾಂಡೆ ಇತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.