ಮಂಗಳವಾರ, ಜನವರಿ 28, 2020
19 °C

ಪಟೇಲ್ ಮುಸ್ಲಿಂ ವಿರೋಧಿಯಲ್ಲ - ಅಡ್ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟೇಲ್ ಮುಸ್ಲಿಂ ವಿರೋಧಿಯಲ್ಲ - ಅಡ್ವಾಣಿ

ನವದೆಹಲಿ (ಪಿಟಿಐ): ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮುಸ್ಲಿಂ ಸಮುದಾಯದ ವಿರೋಧಿಯಾಗಿರಲಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಮಂಗಳವಾರ ಹೇಳಿದ್ದಾರೆ.ಈ ಕುರಿತಂತೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಅಡ್ವಾಣಿ ಅವರು ಅದಕ್ಕೆ ಪೂರಕವಾಗಿ ಪಟೇಲ್ ಅವರನ್ನು ಕುರಿತಂತೆ ಸಂಶೋಧನೆ ನಡೆಸಿರುವ ಇಸ್ಲಾಮಿಕ್ ವಿದ್ವಾಂಸ ಮತ್ತು ಕಾಂಗ್ರೆಸ್, ಮುಖಂಡ ರಫೀಕ್ ಜಕಾರಿಯಾ ಅವರ ಮಾತುಗಳನ್ನು ಉಲ್ಲೇಖಿಸಿದ್ದಾರೆ.

ರಾಷ್ಟ್ರಮಟ್ಟದ ನಿಯತಕಾಲಿಕೆಯೊಂದರ ಲೇಖನದಲ್ಲಿ ಪಟೇಲ್ ಅವರು `ದೃಷ್ಟಿಕೋನದಲ್ಲಿ ಕೋಮುವಾಗಿಯಾಗಿದ್ದರು' ಮತ್ತು ಜವಾಹರ್ ನೆಹರೂ ಅವರು `ಜಾತ್ಯತೀತ ರಾಷ್ಟ್ರೀಯತೆಯ' ಪ್ರತಿಕವಾಗಿದ್ದರು ಎಂಬ ಹೇಳಿಕೆ ಕುರಿತಂತೆ ಆಶ್ಚರ್ಯ ವ್ಯಕ್ತಪಡಿಸಿರುವ ಅಡ್ವಾಣಿ ಅವರು ಲೇಖನವು ದುರುದ್ದೇಶದಿಂದ ಕೂಡಿದೆ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)