ಬುಧವಾರ, ಜನವರಿ 22, 2020
23 °C

ಪರಸ್ಪರ ಸಹಕಾರಕ್ಕೆ ಭಾರತ-ನೇಪಾಳ ಅಧಿಕಾರಿಗಳ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಸೋಮವಾರ ಇಲ್ಲಿ ಆರಂಭವಾದ ಎರಡು ದಿನಗಳ ಭಾರತ ಮತ್ತು ನೇಪಾಳ ಗೃಹ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಪೊಲೀಸ್ ತರಬೇತಿಗೆ ಸಹಕಾರ, ಸಕಾಲಿಕವಾಗಿ ಭಯೋತ್ಪಾದನೆಗೆ ಸಂಬಂಧಿಸಿದ ಮಾಹಿತಿಗಳ ಹಂಚಿಕೆ, ನಕಲಿ ಭಾರತೀಯ ನೋಟುಗಳ ಪ್ರಸಾರ ಹಾಗೂ ಮಾದಕವಸ್ತುಗಳ ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಪರಸ್ಪರ ಕೈಜೋಡಿಸಿ ಕೆಲಸ ಮಾಡಲು ನಿರ್ಧರಿಸಲಾಗಿದೆ.ಕಠ್ಮಂಡುವಿನ ತಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಧುನೀಕರಣಗೊಂಡ ವಲಸೆ ಸೌಲಭ್ಯಗಳನ್ನು ಒದಗಿಸುವಲ್ಲಿ ನೆರವಾಗಲು ಭಾರತ ಮುಂದಾಗಿದೆ. ಭಾರತದ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಮತ್ತು ನೇಪಾಳ ಗೃಹ ಕಾರ್ಯದರ್ಶಿ ಸುಶೀಲ್ ಜಂಗ್ ರಾಣಾ ನೇತೃತ್ವದ ನಿಯೋಗಗಳ ಸಮ್ಮುಖದಲ್ಲಿ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

 

ಪ್ರತಿಕ್ರಿಯಿಸಿ (+)