ಮಂಗಳವಾರ, ಮೇ 17, 2022
24 °C

ಪರಿಶ್ರಮದಿಂದ ಬದುಕು ರೂಢಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಕಡೂರು: ವಿದ್ಯಾರ್ಥಿ ಸತತ ಅಭ್ಯಾಸ, ಪರಿಶ್ರಮದಿಂದ ಮಾತ್ರ ಬದುಕನ್ನು ರೂಢಿಸಿಕೊಳ್ಳಲು ಸಾಧ್ಯ ಎಂದು ಕುವೆಂಪು ವಿ.ವಿ. ಪ್ರಾಧ್ಯಾಪಕ ಡಾ.ಬಸವರಾಜು ನೆಲ್ಲಿಸರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

 

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರಿಯಾದ ಓದಿನ ಕ್ರಮ ಅಳವಡಿಸಿಕೊಳ್ಳದೆ ವಿವಿಧ ದುಶ್ಚಟಗಳಿಂದ ಪ್ರಭಾವಿತರಾಗಿ,ಹೊಸ ಆವಿಷ್ಕಾರಗಳಿಂದ ಒಳಿತಾಗುವ ಪ್ರಯೋ ಜನಗಳನ್ನು ಪಡೆದುಕೊಳ್ಳದೆ ವಿದ್ಯಾರ್ಥಿಗಳು ಹಾದಿ ತಪ್ಪುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.ಸ್ನಾತಕೋತ್ತರ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಜನಪದ ಸಾಹಿತ್ಯವನ್ನು ಓದುವ ಮೂಲಕ ತಮ್ಮ ಜ್ಞಾನದ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ನಾಗರಿಕತೆಯ ನಾಗಾ ಲೋಟದಲ್ಲಿರುವ ಅವರು ತಮ್ಮ ಸಾಹಿತ್ಯ, ಪರಂಪರೆ ಹಿನ್ನೆಲೆಯಲ್ಲಿ ಬೆಳೆದು ಬಂದ ಗ್ರಾಮೀಣ ವಿದ್ಯಾರ್ಥಿಗಳು ಸುಸಂಸ್ಕೃತರಾಗಿ ಬದುಕನ್ನು ರೂಪಿಸಿಕೊಂಡು ಜೀವನದಲ್ಲಿ ಶ್ರೇಷ್ಠ ರಾಗಿ ಬಾಳಿದಾಗ ಮಾತ್ರ ಅಧ್ಯಯನ ಕೇಂದ್ರ ಗಳಿಗೆ ಬೆಲೆ ಬರುತ್ತದೆ. ಕಾಲೇಜು ಅಭಿವೃದ್ಧಿ ಯಾಗಲು ಪೋಷಕರು ಜನಪ್ರತಿನಿಧಿಗಳು ಹೆಚ್ಚಿನ ಪ್ರೋತ್ಸಾಹ ಸಹಕಾರವನ್ನು ನೀಡಿದಾಗ ಮಾತ್ರ ಸಾಧ್ಯ ಎಂದು ನುಡಿದರು. ಕೋಲಾರ ಕನ್ನಡ ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಡೊಮಿನಿಕ್, ಡಿ.ವರ್ತ ಮಾನದ ಬದುಕು ರೂಪಿಸುವಲ್ಲಿ ಕೇವಲ ಆದರ್ಶ ನೆರವಾಗುವುದಿಲ್ಲ. ಓದುವಿಕೆಯ ವೇಗ ವನ್ನು ಹೆಚ್ಚಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು ತಮ್ಮ ವರ್ತಮಾನವನ್ನು ತಾವೇ ರೂಪಿಸಿ ಕೊಳ್ಳಬೇಕು. ಕನ್ನಡ ಭಾಷೆ,ಸಾಹಿತ್ಯ ಸಂಸ್ಕೃತಿಗಳು ಜೀವನೋ ಪಾಯಕ್ಕೆ ರಹದಾರಿಯಾಗಬೇಕೆ ಹೊರತು ಹುಸಿ ಪಾಂಡಿತ್ಯಕ್ಕೆ ವಿದ್ಯಾರ್ಥಿಗಳನ್ನು ದೂಡಬಾರದೆಂದು ಹೇಳಿದರು.ಹೆಚ್ಚುವರಿ ಪ್ರಾಚಾರ್ಯ ಎ.ಜಿ.ಶ್ರೀಧರ್‌ಬಾಬು ಅಧ್ಯಕ್ಷತೆ ವಹಿಸಿ ಮುಂದಿನ ದಿನಗಳಲ್ಲಿ ರಾಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ ವನ್ನು ಸಹ ತೆರೆಯಲು ಉತ್ಸಕರಾಗಿರುವುದಾಗಿ ತಿಳಿಸಿದರು. ಕುವೆಂಪು ವಿವಿಯ ಸಿಂಡಿಕೇಟ್ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ, ಉಪ ನ್ಯಾಸಕ ರಾದ ಡಾ.ಪ್ರಕಾಶ್, ಕೆ.ಪಿ.ಪ್ರಸನ್ನ, ಪ್ರೊ.ವೆಂಕಟನರಸಯ್ಯ,ಗೋಪಿನಾಥ್, ಎಂ,ರಮೇಶ್, ಮಂಜುಳ, ಮೈತ್ರಿ, ಲತಾ, ದತ್ತಾತ್ರೇಯ, ಪೂಣೇಶ್,ನವೀನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.