ಬುಧವಾರ, ಮೇ 18, 2022
23 °C

ಪರಿಹಾರ ಕಾರ್ಯಕ್ಕೆ ಮುಂದಾದ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಾಖಂಡದಲ್ಲಿ ಅತಿವೃಷ್ಟಿಯಿಂದ ತತ್ತರಿಸಿರುವ ಸಂತ್ರಸ್ತರಿಗೆ ನೆರವಾಗಲು ನಗರದ ಗ್ರೀನ್‌ವುಡ್ ಹೈ ಶಿಕ್ಷಣ ಸಂಸ್ಥೆ ಮುಂದಾಗಿದ್ದು, ಈ ಕಾರ್ಯದಲ್ಲಿ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.ಈ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಗಾಗಲೇ ಅಭಿಯಾನವೊಂದನ್ನು ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೀವನಾವಶ್ಯಕ ವಸ್ತುಗಳು ಮತ್ತು ಪರಿಹಾರ ಕಾರ್ಯಕ್ಕೆ ಬೇಕಾಗುವ ವೈದ್ಯಕೀಯ ಸಾಮಗ್ರಿಗಳನ್ನೂ ಸಂಗ್ರಹಿಸಲಾಗಿದೆ. ಈ ಸಾಮಗ್ರಿ ಹಾಗೂ ಜನರು ನೀಡುವ ಆರ್ಥಿಕ ನೆರವಿನಿಂದ ಒಟ್ಟಾಗುವ ಮೊತ್ತಕ್ಕೆ ಗ್ರೀನ್‌ವುಡ್ ಹೈ ಟ್ರಸ್ಟ್ ವತಿಯಿಂದ ರೂ  20 ಲಕ್ಷ ಮೌಲ್ಯದ ವಸ್ತುಗಳನ್ನೂ ನೀಡಲಾಗುವುದು.ಎಲ್ಲವನ್ನೂ ಒಟ್ಟುಮಾಡಿ ಜುಲೈ ಆರರಂದು ಗ್ರೀನ್‌ವುಡ್ ಹೈ ತಂಡ ಉತ್ತರಾಖಂಡಕ್ಕೆ ಪ್ರಯಾಣ ಬೆಳೆಸಲಿದೆ. ಟ್ರಸ್ಟ್‌ನ ಸಹಸಂಸ್ಥೆಯಾದ ರೇರಿಂಗ್ ಎಜ್ಯುಕೇಷನಲ್ ಸರ್ವಿಸಸ್ ಮೂಲಕ ಟ್ರಸ್ಟ್ ಈ ಕೆಲಸವನ್ನು ಮಾಡುತ್ತಿದ್ದು, ನೆರವು ನೀಡಲು ಬಯಸುವ ಸಾರ್ವಜನಿಕರು ಜುಲೈ ಐದರವರೆಗೂ ಬೆಳಿಗ್ಗೆ 8ರಿಂದ ಸಂಜೆ 5ರೊಳಗೆ ಶಾಲೆಗೆ (ಸರ್ಜಾಪುರ ರಸ್ತೆ) ಭೇಟಿ ನೀಡಬಹುದು.

ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಖಾತೆ ಸಂಖ್ಯೆ 05230 33000 1664ಗೆ ಜಮಾ ಮಾಡಬಹುದು ಎಂದು ಸಂಸ್ಥೆಯ ಟ್ರಸ್ಟಿ ನೀರೂ ಅಗರ್‌ವಾಲ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಶಾಲೆಯನ್ನು 080 2553 1833ರಲ್ಲಿ ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.