ಗುರುವಾರ , ಜೂನ್ 24, 2021
28 °C

ಪರೀಕ್ಷೆಯಲ್ಲಿ ನಕಲು ತಡೆ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗ ಪರೀಕ್ಷೆಗಳ ಕಾಲ. ಚೆನ್ನಾಗಿ ಓದಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕೆಂಬ ಪ್ರಯತ್ನ ವಿದ್ಯಾರ್ಥಿಗಳದು. ಹಾಗೆಯೇ ಮಕ್ಕಳು ಉತ್ತಮ ಫಲಿತಾಂಶ ತರಬೇಕೆಂಬ ಕನಸು ಪೋಷಕರದು. ನಮ್ಮ ಕಾಲೇಜು ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿರಬೇಕೆಂಬ ಅಭಿಲಾಷೆ ಶಿಕ್ಷಕರದು. ಹಾಗೆಯೇ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸುವ ಹೊಣೆ ಇಲಾಖೆ ಅಧಿಕಾರಿಗಳದು.ಪ್ರತಿ ವರ್ಷದ ಪರೀಕ್ಷೆ ಸಮಯದಲ್ಲಿ `ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳ ಡಿಬಾರ್, ನಕಲಿಗೆ ನೆರವಾಗುತ್ತಿದ್ದ ಶಿಕ್ಷಕರ ಅಮಾನತು, ಪ್ರಶ್ನೆ ಪತ್ರಿಕೆ ಬಹಿರಂಗ, ಮರು ಪರೀಕ್ಷೆ, ತನಿಖೆಗೆ ಆದೇಶ~ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ.ಇಂದು ಪರೀಕ್ಷೆಗಳನ್ನು ಆದಷ್ಟೂ ಕಟ್ಟುನಿಟ್ಟಾಗಿ ನಡೆಸಗುತ್ತದೆ. ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಲ್ಲಿ ಇರಿಸಿ ಪರೀಕ್ಷೆ ವೇಳೆಗೆ ಕೇಂದ್ರಕ್ಕೆ ತಲುಪಿಸಲಾಗುತ್ತಿದೆ. ಪ್ರತಿಯೊಂದು ಕೇಂದ್ರದಲ್ಲೂ ಜಾಗೃತ ದಳದವರು ಇರುತ್ತಾರೆ. ಪ್ರಶ್ನೆ ಪತ್ರಿಕೆ ಪಾಲಕರು, ಕೊಠಡಿ ಮೇಲ್ವಿಚಾರಕರು.

 

ಸಿಟಿಂಗ್ ಸ್ಕ್ವಾಡ್ ಕೂಡ ಇರುತ್ತಾರೆ. ಪೊಲೀಸ್ ಬಂದೋಬಸ್ತ್ ಕೂಡ ಇರುತ್ತದೆ. ಆದರೂ ಅಚಾನಕ್ ಆಗಿ ಬಂದ ಜಾಗೃತ ದಳದ ಕೈಗೆ ನಕಲು ಮಾಡುತ್ತಿರುವ ವಿದ್ಯಾರ್ಥಿಗಳು, ನಕಲಿಗೆ ನೆರವಾಗುತ್ತಿದ್ದ ಶಿಕ್ಷಕರು ಸಿಕ್ಕಿಬಿದ್ದು ಡಿಬಾರ್, ಅಮಾನತಾಗುತ್ತಾರೆಂದರೆ ಹೇಗೆ? ಯೋಚಿಸಿ.ಕಾರಣಗಳಾದರೂ ಏನು?* ವಿದ್ಯಾರ್ಥಿಗಳು ಕಾಲೇಜಿಗೆ ಸರಿಯಾಗಿ ಹೋಗದೆ, ಓದದೆ ಪರೀಕ್ಷೆಗೆ ಹಾಜರಾಗುವುದು, ನಕಲು ಮಾಡಿಯಾದರೂ ಪಾಸಾಗುವ ಪ್ರಯತ್ನ ನಡೆಸುವುದು.* ತಮ್ಮ ಫಲಿತಾಂಶ ಉತ್ತಮವಾಗಿರಲೆಂದು ಸಂಸ್ಥೆಯವರೇ ನಕಲು ಮಾಡಿಸುವುದು.*ಶಿಕ್ಷಕರು ಸಕಾಲಕ್ಕೆ ಪಾಠ ಮುಗಿಸದಿರುವುದು.* ಅಗ್ಗದ ಜನಪ್ರಿಯತೆ ಗಳಿಸಲು ಶಿಕ್ಷಕರು ವಿದ್ಯಾರ್ಥಿಗಳನ್ನು ನಕಲು ಮಾಡಲು ಬಿಡುವುದು.* ಟ್ಯೂಷನ್, ಕೋಚಿಂಗ್ ಕ್ಲಾಸ್, ಮನೆ ಪಾಠಗಳಿಗೆ ಅಂಟಿಕೊಂಡ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ನಪಾಸಾಗದಂತೆ ನೋಡಿಕೊಳ್ಳುವುದು.* ಹಣದ ದಾಹ (ಹಣ ಮಾಡಲು ನಕಲು ಸುಲಭದ ದಂಧೆ).

ನಕಲು ಮಾಡುವ ವಿದ್ಯಾರ್ಥಿಗಳಿರಬಹುದು. ಆದರೆ ನಕಲು ಮಾಡಿಸುವ ಶಿಕ್ಷಕರಂತೂ ಇರಲೇಬಾರದು. ಇಂತಹವರಿಂದ ಇಡೀ ಶಿಕ್ಷಣ ಇಲಾಖೆಗೆ ಕೆಟ್ಟ ಹೆಸರು. ಇಂದಿನ ಶಿಕ್ಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕತೆ ಹಾಗೂ ಪ್ರಾಮಾಣಿಕತೆಯ ಕೊರತೆಯೇ ನಕಲು ನಡೆಯಲು ಕಾರಣವೆನ್ನಬಹುದು.ಏನೇನು ಮಾಡಬೇಕು?ನಕಲು ನಿರ್ಮೂಲನ ಖಂಡಿತ ಸಾಧ್ಯವಿದೆ. ಆದರೆ ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.* ನಕಲು ಅಪರಾಧವೆಂದು ಪರಿಗಣಿಸಿ ಕಾನೂನು ರೀತ್ಯ ಶಿಕ್ಷೆ ವಿಧಿಸುವುದು.* ನಕಲು ಮಾಡಲು ನೆರವಾಗುವವರ ಮೇಲೆ ಕಠಿಣ ಕ್ರಮ ಕೈಗೊಂಡು ಬಡ್ತಿ ತಡೆ ಹಿಡಿಯುವುದು ಹಾಗೂ ಪರೀಕ್ಷಾ ಕೆಲಸದಿಂದಲೇ ಶಾಶ್ವತವಾಗಿ ನಿವೃತ್ತಿಗೊಳಿಸುವುದು.* ಪರೀಕ್ಷೆಗಳು ಆರಂಭವಾಗುವುದಕ್ಕೆ ಮೊದಲು ಆಯಾ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪರೀಕ್ಷೆ ಬರೆಯುವುದರ ಬಗ್ಗೆ, ನಕಲು ಮಾಡದಿರುವ ಬಗ್ಗೆ ಮಾಹಿತಿ ನೀಡಬೇಕು.*  ಮನೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ನಕಲು ಮಾಡದೆ ಸ್ವಂತವಾಗಿ ಓದಿ ಪರೀಕ್ಷೆ ಬರೆಯುವಂತೆ ತಿಳಿಸಬೇಕು.* ಪರೀಕ್ಷಾ ಕೇಂದ್ರದ ಸೂಚನಾ ಫಲಕದಲ್ಲಿ (ನೋಟಿಸ್ ಬೋರ್ಡ್) ನಕಲು ಮಾಡದಂತೆ, ಮಾಡಿ ಸಿಕ್ಕಿಬಿದ್ದರೆ ಆಗುವ ತೊಂದರೆಗಳ ಬಗ್ಗೆ ಎಚ್ಚರಿಕೆ ನೀಡಿ ಪ್ರಕಟಿಸುವುದು.* ವಿದ್ಯಾರ್ಥಿಗಳಲ್ಲಿ ತರಗತಿಗಳು ಆರಂಭವಾದಾಗಿನಿಂದಲೂ ಯಾವುದೇ ಪರೀಕ್ಷೆಗಳಲ್ಲಿ (ಕಿರು ಪರೀಕ್ಷೆ, ಮುಖ್ಯ ಪರೀಕ್ಷೆ) ನಕಲು ಮಾಡದಂತೆ ಎಚ್ಚರ ವಹಿಸುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.