ಶನಿವಾರ, ಮೇ 15, 2021
24 °C

ಪಿಕ್ಚರ್ ಪ್ಯಾಲೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಛತ್ರಿ ಛಾಯೆಯಲ್ಲಿ... 


ಮಹಾವೀರ ಜಯಂತಿ ಸಂಭ್ರಮಕ್ಕೆ ಸೂರ್ಯನ ಬಿಸಿಲೇನೂ ತಡೆಯಾಗಲಿಲ್ಲ. ಜೋಡಿ ಕುದುರೆಗಳು ಸಹ ಛತ್ರಿ ನೆರಳಿನಲ್ಲಿ ಮೆರವಣಿಗೆಗೆ ಹೆಜ್ಜೆ ಹಾಕಿದವು. `ನೀ ಕೊಡೆ, ನಾ ಬಿಡೆ~ ಎಂಬಂತೆ ಬಾಲೆಯರಿಬ್ಬರು ಬಣ್ಣದ ಕೊಡೆ ಹಿಡಿದು ಕಣ್ಣರಳಿಸಿದರು. ಕೋಲುನಡಿಗೆಯಲ್ಲಿ ಕಲಾವಿದರು ಹೆಜ್ಜೆಯ ಮೇಲೊಂದು ಹೆಜ್ಜೆಯನ್ನು ಹಾಕಿ ಗಮನ ಸೆಳೆದರು.

 

ಮಹಾವೀರ ಜಯಂತಿ ಸಂದರ್ಭದಲ್ಲಿ ಜೈನ ಸಮುದಾಯದ ಯುವತಿಯರು ಕೈಮುಗಿದು ನಮಿಸಿದರು. ವಸಂತಾಗಮನದೊಂದಿಗೆ ಬರುವ ಮಹಾವೀರ ಜಯಂತಿಯಲ್ಲಿ ಜೀವವೈವಿಧ್ಯವನ್ನು, ವೈಭವವನ್ನು ಸಂಕೇತಿಸುವ ಗಾಢವರ್ಣಗಳ ವಸ್ತ್ರಗಳಲ್ಲಿ ಮಾನಿನಿಯರು ಸಂಭ್ರಮಿಸಿದರು. ನಗು, ನೆಮ್ಮದಿ ಸತತವಾಗಿರಲಿ ಎಂದು ಪ್ರಾರ್ಥಿಸಿದರು.

                               

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.