ಶನಿವಾರ, ಮೇ 28, 2022
30 °C

ಪಿಯೂಸಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಬಸ್ ಪಾಸ್ ವಿತರಿಸುವ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿದೆ.

ನಗರದ 35 ಪಾಸ್ ವಿತರಣಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಪಾಸ್ ಪಡೆಯಬಹುದು. ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಬಸ್ ಪಾಸ್ ಅರ್ಜಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಅರ್ಜಿಯ ಜೆರಾಕ್ಸ್ ಪ್ರತಿ, ಸಂಸ್ಥೆಯ ವೆಬ್‌ಸೈಟ್‌ನಿಂದ ಮುದ್ರಣ ತೆಗೆದ ಅರ್ಜಿಗಳು ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟವಾದ ಅರ್ಜಿಗಳನ್ನೂ ಸ್ವೀಕರಿಸಲಾಗುವುದು. ಅರ್ಜಿಯ ಜೊತೆಗೆ ಪ್ರಸ್ತುತ ಸಾಲಿಗೆ ಕಾಲೇಜಿಗೆ ಶುಲ್ಕ ಪಾವತಿಸಿರುವ ರಸೀದಿ, ಕಾಲೇಜಿನಲ್ಲಿ ವಿತರಿಸಿರುವ ಗುರುತಿನ ಚೀಟಿ, ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ನಿಗದಿತ ಮೊತ್ತದೊಂದಿಗೆ ಸಲ್ಲಿಸಬೇಕು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಸ್ ವಿತರಣಾ ಕೇಂದ್ರಗಳು: ಮೆಜೆಸ್ಟಿಕ್, ಶಿವಾಜಿನಗರ, ಶಾಂತಿನಗರ, ಇಂದಿರಾನಗರ, ದೊಮ್ಮಲೂರು, ಜೀವನ್ ಭೀಮಾನಗರ, ಕೆ.ಆರ್.ಪುರ, ಕಲ್ಯಾಣನಗರ, ಕಾವಲ್‌ಬೈರಸಂದ್ರ, ಬಸವೇಶ್ವರ ನಗರ, ವಿಜಯನಗರ, ಚಂದ್ರಾ ಲೇಔಟ್, ಎಂಸಿಟಿಸಿ, ಕುಮಾರಸ್ವಾಮಿ ಲೇಔಟ್, ಕೆಂಗೇರಿ ಟಿಟಿಎಂಸಿ, ನೀಲಸಂದ್ರ, ಹಂಪಿನಗರ, ನಂದಿನಿ ಲೇಔಟ್, ನೆಲಮಂಗಲ, ಚೌಡೇಶ್ವರಿ,  ವಿದ್ಯಾರಣ್ಯಪುರ, ಯಲಹಂಕ 5ನೇ ಹಂತ, ರಾಜಾಜಿನಗರ 1ನೇ ಎನ್ ಬ್ಲಾಕ್, ಮಲ್ಲೇಶ್ವರ (18ನೇ ಕ್ರಾಸ್), ಜಯನಗರ ಟಿಟಿಎಂಸಿ, ಚನ್ನಮ್ಮನಕೆರೆ ಅಚ್ಚುಕಟ್ಟು, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ (ಘಟಕ 19), ಕೋರಮಂಗಲ ಟಿಟಿಎಂಸಿ, ಕೃ.ರಾ.ಮಾರುಕಟ್ಟೆ, ಯಶವಂತಪುರ ಟಿಟಿಎಂಸಿ, ಕಾಡುಗೋಡಿ, ಬನಶಂಕರಿ ಟಿಟಿಎಂಸಿ, ಬನ್ನೇರುಘಟ್ಟ ಟಿಟಿಎಂಸಿ ಮತ್ತು ಚಂದಾಪುರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.