ಭಾನುವಾರ, ಏಪ್ರಿಲ್ 11, 2021
32 °C

ಪಿ. ಡಿ. ಓ ನೇಮಕ ಪ್ರಕ್ರಿಯೆ ಸರಿಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿ.ಡಿ. ಓ) ಹುದ್ದೆ ನೇಮಕಾತಿಗಾಗಿ ರಾಜ್ಯ ಲೋಕಸೇವಾ ಆಯೋಗವು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು ನೇಮಕಾತಿಯಲ್ಲಿ ಕಳೆದ ಬಾರಿ ಇದ್ದಂತೆ ಈ ಬಾರಿಯೂ ಸಹ ಜಿಲ್ಲಾವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಇದರಿಂದ ಅಭ್ಯರ್ಥಿಗಳಲ್ಲಿ ಯಾವ ಜಿಲ್ಲೆ ಆಯ್ದುಕೊಳ್ಳಬೇಕೆಂದು ಗೊಂದಲ ಉಂಟಾಗುತ್ತದೆ. ಅಲ್ಲದೇ ಕೆಲವು ಜಿಲ್ಲೆಗಳಲ್ಲಿ ಹೆಚ್ಚು, ಕೆಲವು ಜಿಲ್ಲೆಗಳಲ್ಲಿ ಕಡಿಮೆ ಮಂದಿ ಪರೀಕ್ಷಾರ್ಥಿಗಳು ಅರ್ಜಿ ಸಲ್ಲಿಸುವುದರಿಂದ ಅಂತಿಮ ನೇಮಕಾತಿ ಆದೇಶ ಹೊರಬಿದ್ದಾಗ, ನೇಮಕಾತಿ ಪರೀಕ್ಷೆಯ ಅಗ್ರಿಗೇಟ್‌ನಲ್ಲಿ ಸಮಾನ ಅಂಕಗಳನ್ನು ಪಡೆದಿದ್ದರೂ ಸಹ ಜಿಲ್ಲೆವಾರು ನೇಮಕದಿಂದಾಗಿ ಉದ್ಯೋಗ ದೊರೆಯುವುದಿಲ್ಲ.ಆದ್ದರಿಂದ ಎಸ್.ಡಿ.ಎ. ಮತ್ತು ಎಫ್.ಡಿ.ಎ. ಮಾದರಿಯಲ್ಲಿ ರಾಜ್ಯವಾರು ನೇಮಕಾತಿ ಮಾಡಿದ್ದಲ್ಲಿ ತುಂಬಾ ಅನುಕೂಲವಾಗುವುದು. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವುದು ಅವಶ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.